ಬೀದರ
ಶರಣ (ಶ್ರಾವಣ) ಮಾಸದ ನಿಮಿತ್ಯ, ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಎದುರುಗಡೆ ಇರುವ ಬಸವ ಮುಕ್ತಿಮಂದಿರದ ಆವರಣದಲ್ಲಿ, ಜುಲೈ 25 ರಿಂದ ಆಗಸ್ಟ್ 25ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30 ರವರೆಗೆ, ಬಸವತತ್ವ ಪ್ರಚಾರಕರು, ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಅವರಿಂದ ‘ವಿಶ್ವಧರ್ಮ ಪ್ರವಚನ’ ಕಾರ್ಯಕ್ರಮ ನಡೆಯಲಿದೆ.
ವಿಶ್ವಧರ್ಮ ಪ್ರವಚನ ಸಮಿತಿ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಮಾಜ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ನಾಗಲಾಂಬಿಕ ಮಹಿಳಾ ಗಣ ಸಂಘಟನೆಗಳು, ಸರ್ವರಿಗೂ ಸ್ವಾಗತ ಕೋರಿವೆ.

ಪೂಜ್ಯ ಸದ್ಗುರು ಮಾತೆ ಸತ್ಯದೇವಿ
ಶರಣ (ಶ್ರಾವಣ) ಮಾಸದ ನಿಮಿತ್ಯ, ಯಲ್ಲಾಲಿಂಗ ಕಾಲೋನಿ, ರೈಲ್ವೆ ಅಂಡರ್ ಬ್ರಿಡ್ಜ್ ಹತ್ತಿರ, ನೌಬಾದ, ಬಸವ ಮಂಟಪ, ಬೀದರ ನಗರದಲ್ಲಿ ಜುಲೈ 26 ರಿಂದ ಒಂದು ತಿಂಗಳು ಕಾಲ ಪ್ರತಿದಿನ ಸಂಜೆ 6.30ರಿಂದ 8.30 ರವರೆಗೆ, ಬೀದರ ಬಸವ ಮಂಟಪದ ಪೂಜ್ಯ ಸದ್ಗುರು ಮಾತೆ ಸತ್ಯದೇವಿ ಅವರು ‘ವಿಶ್ವಧರ್ಮ ಪ್ರವಚನ’, ಲಿಂಗಾಯತ ಧರ್ಮದ ಅಷ್ಟಾವರಣಗಳ ಕುರಿತು ಅನುಭಾವ ನೀಡಲಿದ್ದಾರೆ.
ವಿಶ್ವಧರ್ಮ ಪ್ರವಚನ ಸಮಿತಿ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಮಾಜ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ನಾಗಲಾಂಬಿಕ ಮಹಿಳಾ ಗಣ ಸಂಘಟನೆಗಳು, ಸರ್ವರಿಗೂ ಸ್ವಾಗತ ಕೋರಿವೆ.