ಜಹಿರಾಬಾದ್ (ತೆಲಂಗಾಣ)
ಸಂಗಾರೆಡ್ಡಿ ಜಿಲ್ಲೆಯ ಜಹಿರಾಬಾದ ನಗರದಲ್ಲಿ ಶರಣ ಮಾಸದ ಪ್ರಯುಕ್ತ ರಾಷ್ಟ್ರೀಯ ಬಸವ ದಳವು ತಿಂಗಳು ಕಾಲ “ಬಸವಧರ್ಮ” ಪ್ರವಚನವನ್ನು ಆಯೋಜಿಸಿದೆ.
ಜುಲೈ 24ರಿಂದ ಆರಂಭವಾಗುವ ಪ್ರವಚನ ದಿನಾಂಕ ಆಗಸ್ಟ್ 23ರವರೆಗೆ ಪ್ರತಿದಿನ ಸಂಜೆ 6-30 ರಿಂದ 8-30ರವರೆಗೆ ದತ್ತಗಿರಿ ಕಾಲೋನಿ, ಬಸವಮಂಟಪದಲ್ಲಿ ನಡೆಯುತ್ತದೆ.
ಬಸವಾದಿ ಶರಣರ ಬದುಕು ಬರಹಗಳ ಕುರಿತು ನಾಗನೂರ ಗುರುಬಸವ ಮಠದ ಪೂಜ್ಯ ಬಸವಗೀತಾ ತಾಯಿಯವರು ಪ್ರವಚನವನ್ನು ಮಾಡಲಿದ್ದಾರೆ.
ಸ್ಥಳೀಯ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಎಲ್ಲರನ್ನೂ ಪ್ರವಚನಕ್ಕೆ ಸ್ವಾಗತ ಕೋರಿದ್ದಾರೆ.