ಧಾರವಾಡ
ಬಸವ ಕೇಂದ್ರದ ವತಿಯಿಂದ ಶರಣ(ಶ್ರಾವಣ) ಮಾಸದಂಗವಾಗಿ ‘ನಿತ್ಯ ವಚನೋತ್ಸವ’ ಕಾರ್ಯಕ್ರಮ ತಿಂಗಳು ಕಾಲ ನಗರದ 17 ಬಡಾವಣೆಗಳ 500ಕ್ಕೂ ಹೆಚ್ಚು ಮನೆಗಳಲ್ಲಿ ನಡೆಯಲಿದೆ.
25ರಂದು ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ‘ವಚನ ಪರಿಮಳ ಭಾಗ ಎಂಟು’ ಗ್ರಂಥದ ಬಿಡುಗಡೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ವಚನ ಲೇಖನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಆಗಸ್ಟ್ 24ರಂದು ವಚನೋತ್ಸವದ ಸಮಾರೋಪ ನಡೆಯಲಿದೆ ಎಂದು ಬಸವ ಕೇಂದ್ರದ ಉಪಾಧ್ಯಕ್ಷರಾದ ಉಮೇಶ ಕಟಗಿ ತಿಳಿಸಿದ್ದಾರೆ.
ಹುಬ್ಬಳ್ಳಿ
ಶರಣ(ಶ್ರಾವಣ) ಮಾಸದ ಪ್ರಯುಕ್ತ ಬಸವ ಕೇಂದ್ರದ ವತಿಯಿಂದ ನಗರದ ಮನೆ-ಮನೆಗಳಿಂದ, ಮನ-ಮನಗಳಿಗೆ ಬಸವಾದಿ ಶರಣರ ವಚನ ಸಂದೇಶ ತಲುಪಿಸುವ ಅನುಭಾವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿನಾಂಕ 26-07-2025 ರಿಂದ 24.08.2025 ರವರೆಗೆ ಕಾರ್ಯಕ್ರಮ ನಗರದಲ್ಲಿ ನಡೆಯುತ್ತದೆ ಎಂದು ಸಂಚಾಲಕರಾದ ಕೆ. ಎಸ್. ಇನಾಮತಿ ತಿಳಿಸಿದ್ದಾರೆ.
