ಯಲಬುರ್ಗಾ
ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗು ರಾಷ್ಟ್ರೀಯ ಬಸವ ದಳ ಯುವ ಘಟಕದ ವತಿಯಿಂದ, ಶ್ರಾವಣ ಮಾಸದ ನಿಮಿತ್ಯ ಜುಲೈ 26 ರಿಂದ ಒಂದು ತಿಂಗಳು ನಿರಂತರವಾಗಿ ಮನೆಯಿಂದ ಮನೆಗೆ ಗುರುಬಸವ ವಚನ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ದಿನಾಲು ಸಂಜೆ 6:30 ರಿಂದ ಪ್ರಾರಂಭಗೊಳ್ಳಲಿದ್ದು, ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮದಿಂದ ಜೋತಿ ಹೊತ್ತಿಸಿಕೊಂಡು ಬಂದು, ಪ್ರತಿದಿನ ಮನೆಯಿಂದ ಮನೆಗೆ ತೆರಳಿ, ಕುಟುಂಬದವರನ್ನೆಲ್ಲರನ್ನು ಸಂಗಮಗೊಳಿಸಿಕೊಂಡು, ಗುರು ಪೂಜೆ, ಲಿಂಗ ಪೂಜೆ ನಡೆಸಲಾಗುವುದು. ನಂತರ ಬಸವಾದಿ ಶಿವಶರಣರ ಜೀವನ ಚರಿತ್ರೆ ಆದಿಯಾಗಿ ವಚನ ವಿಶ್ಲೇಷಣೆ ಮತ್ತು ಬಸವ ಸಂಸ್ಕೃತಿ ಹಾಗೂ ಶರಣರು ತೋರಿಸಿಕೊಟ್ಟ ಸತ್ಯಶುದ್ಧ ಕಾಯಕದ ಪರಿಕಲ್ಪನೆಯ ಕುರಿತಾಗಿ ಅನುಭಾವ ನೀಡಿ, ಮೂಢನಂಬಿಕೆ, ಕಂದಾಚಾರಗಳಿಂದ ದೂರ ಮಾಡುವದು ಈ ವಚನ ಜ್ಯೋತಿ ಕಾರ್ಯಕ್ರಮದ ಉದ್ದೇಶವಾಗಿದೆ.
ಸುತ್ತಮುತ್ತಲಿನ ಗ್ರಾಮದ ಶರಣ ಸದ್ಭಕ್ತರು ಈ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಲು ಕಾರಣೀಭೂತರಾಗಬೇಕೆಂದು, “ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ” ಎಂದು ರಾಷ್ಟ್ರೀಯ ಬಸವ ದಳ ಗೌರವಾದ್ಯಕ್ಷರಾದ ಶರಣ ಬಸವನಗೌಡ ಪೋಲಿಸಪಾಟೀಲ ಮತ್ತು ಅಕ್ಕನಾಗಲಾಂಬಿಕ ಮಹಿಳಾ ಗಣ ಹಾಗು ಯುವ ಘಟಕದ ಪದಾಧಿಕಾರಿಗಳು ಕೋರಿಕೊಂಡಿದ್ದಾರೆ.