ಅಭಿಯಾನವನ್ನು ಒಗ್ಗಟ್ಟಿನಿಂದ ಯಶಸ್ವಿಗೊಳಿಸಲು ಶಿವಾನಂದ ಪಾಟೀಲ ಕರೆ

ಮಂಜು ಕಲಾಲ
ಮಂಜು ಕಲಾಲ

ಬಸವನಬಾಗೇವಾಡಿ

ಸೆಪ್ಟಂಬರ್ ೧ ರಿಂದ ಈ ನೆಲದಿಂದ ಆರಂಭವಾಗುವ ಬಸವ ಸಂಸ್ಕ್ರತಿ ಅಭಿಯಾನವನ್ನು ಎಲ್ಲರೂ ಕೂಡಿಕೊಡು ಯಶಸ್ವಿಗೊಳಿಸೋಣ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ದೇವಾಲಯದ ಸಿಬಿಎಸ್‌ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಬಸವೇಶ್ವರ ಸೇವಾ ಸಮಿತಿಯ ಸಹಯೋಗದಲ್ಲಿ ಶ್ರಾವಣ ಮಾಸದಂಗವಾಗಿ ಹಾಗೂ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾ ಮಹೋತ್ಸವದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಬಸವ ಸಂಸ್ಕ್ರತಿ ಪ್ರವಚನವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ಈ ಜಾತ್ರಾಮಹೋತ್ಸವವು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ನಡೆಯುವ ಬಸವ ಸಂಸ್ಕ್ರತಿ ಪ್ರವಚನವನ್ನು ಆಲಿಸುವ ಮೂಲಕ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳುವ ಅಗತ್ಯವಿದೆ. ಇಂತಹ ಸುವರ್ಣಾವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಈಚೆಗೆ ನಾನು ಕ್ಷೇತ್ರಕ್ಕೆ ಬಂದ ಮೇಲೆ ಅದ್ದೂರಿಯಾಗಿ ನಡೆಯುತ್ತಿರುವದು ಸಂತಸದಾಯಕ ಸಂಗತಿ.

ಕಾಯಕ, ದಾಸೋಹ, ಸಮಾನತೆ ಸಂದೇಶ ನೀಡಿದ ಮಹಾನ್ ದಾರ್ಶನಿಕ ಬಸವೇಶ್ವರರು. ಇವರ ಜೀವನ ಶೈಲಿ ಇಡೀ ಮನುಕುಲಕ್ಕೆ ಮಾದರಿಯಾಗಿದೆ. ಅವರು, ಮನುಷ್ಯ ಮನುಷ್ಯರನ್ನು ಪ್ರೀತಿ ಮಾಡುವ ಗುಣವನ್ನು ಬೆಳೆಸುವ ಜೊತೆಗೆ ಜಾತ್ಯಾತೀತವಾಗಿ ಎಲ್ಲರೂ ಕೂಡಿಕೊಂಡು ಕಲ್ಯಾಣ ಸಮಾಜವನ್ನು ಸ್ಥಾಪಿಸಿದರು. ಪ್ರಜಾಪ್ರಭುತ್ವ ವಿಲ್ಲದೇ ಹೋಗಿದ್ದರೆ ಪ್ರತಿಯೊಬ್ಬರೂ ಬಹಳ ಕಷ್ಟ ಅನುಭವಿಸಬೇಕಾಗುತ್ತಿತ್ತು ಎಂದರು.

ಪ್ರವಚನಕಾರ ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಭಾಗ್ಯವಿಧಾತ ಬಸವೇಶ್ವರರಿಗೆ ಜನ್ಮ ನೀಡಿದ ಪುಣ್ಯ ಸ್ಥಳವಿದು. ಈ ಸ್ಥಳದಲ್ಲಿ ಬಸವ ಉದಯವಾದ ಫಲವಾಗಿ ಇದು ಜಗತ್ತಿನಲ್ಲಿ ಬಸವನಬಾಗೇವಾಡಿಯೆಂದು ಗುರುತಿಸಲ್ಪಟ್ಟಿದೆ. ವಚನ, ಸಮತಾ, ಕಾಯಕ, ದಾಸೋಹ, ಭಾವೈಕ್ಯ, ಅನುಭಾವ, ಕನ್ನಡ ಸಂಸ್ಕ್ರತಿಯನ್ನು ಬಸವ ಸಂಸ್ಕ್ರತಿಯಲ್ಲಿ ನಾವೆಲ್ಲರೂ ಕಾಣಬಹುದಾಗಿದೆ. ಆ ಕಾರಣಕ್ಕೆ ಬಸವ ಸಂಸ್ಕ್ರತಿಯು ಜೀವನ ಸಂಸ್ಕ್ರತಿಯಾಗಿದೆ. ಇಂತಹ ಜೀವನ ಸಂಸ್ಕ್ರತಿಯನ್ನು ಶ್ರಾವಣ ಮಾಸದ ಪುಣ್ಯದ ಪರ್ವದಲ್ಲಿ ಬಸವ ಸಂಸ್ಕ್ರತಿಯನ್ನು ಒಂದು ತಿಂಗಳ ಕಾಲ ನಾವೆಲ್ಲರೂ ತಿಳಿದುಕೊಳ್ಳೋಣವೆಂದರು.

202
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...

ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಇಷ್ಟಲಿಂಗದ ಮೂಲಕ ನಾವು ಭಗವಂತನನ್ನು ಕಾಣಬಹುದು ಎಂದು ಅರಿವು ನೀಡಿದರು. ಪ್ರತಿಯೊಬ್ಬರೂ ಇಷ್ಟಲಿಂಗ ಆರಾಧಕರಾಗಬೇಕು. ಪ್ರತಿನಿತ್ಯ ಸಂಜೆ ೬.೩೦ ಗಂಟೆಯಿಂದ ೮ ಗಂಟೆಯವರೆಗ ನಡೆಯುವ ಈ ಪ್ರವಚನದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದರು.

ಬಸವೇಶ್ವರ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ ಮಾತನಾಡಿ, ಅ.೧೧ ರಿಂದ ಐದು ದಿನಗಳ ಕಾಲ ನಡೆಯುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವಕ್ಕೆ ಎಲ್ಲರೂ ತನು-ಮನ-ಧನದಿಂದ ಸಹಕಾರ ನೀಡುವ ಮೂಲಕ ಜಾತ್ರಾಮಹೋತ್ಸವವನ್ನು ಯಶಸ್ವಿಗೊಳಿಸಬೇಕು. ಈ ವರ್ಷದ ಜಾತ್ರಾಮಹೋತ್ಸವ ಅದ್ದೂರಿಯಾಗಿ ನಡೆದು ಇತಿಹಾಸದ ಪುಟದಲ್ಲಿ ಸೇರುವಂತಾಗಲೆಂದರು.

ಅಧ್ಯಕ್ಷತೆ ವಹಿಸಿದ್ದ ಶಿವನಗೌಡ ಬಿರಾದಾರ, ಬಿ.ಕೆ.ಕಲ್ಲೂರ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಎಲ್.ಎನ್. ಅಗರವಾಲ, ಸುರೇಶ ಹಾರಿವಾಳ, ಜಗದೀಶ ಕೊಟ್ರಶೆಟ್ಟಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಸಂಗಣ್ಣ ಕಲ್ಲೂರ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಮಹೇಶ ಹಿರೇಕುರಬರ, ರಮೇಶ ಮಸಬಿನಾಳ, ಲಾಳೇಸಾ ಕೊರಬು, ಸಿದ್ರಾಮ ಪಾತ್ರೋಟಿ, ನಂದೀಶ ಪಾಟೀಲ, ಮಂಜು ಜಾಲಗೇರಿ ಇತರರು ಇದ್ದರು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಎಂ.ಜಿ. ಆದಿಗೊಂಡ ಪ್ರವಚನಕಾರರ ಪರಿಚಯ ವಾಚಿಸಿದರು. ಸಂಗಮೇಶ ಓಲೇಕಾರ ಪ್ರಾಸ್ತವಿಕವಾಗಿ ಮಾತನಾಡಿದರು. ಎಚ್.ಬಿ. ಬಾರಿಕಾಯಿ, ಕೊಟ್ರೇಶ ಹೆಗ್ಡಾಳ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *