ಇಳಕಲ್ಲ
ಗಣಾಚಾರ ಪ್ರಶಸ್ತಿ ಪುರಸ್ಕೃತರಾದ ಬಸವನಬಾಗೇವಾಡಿಯ ಲಕ್ಷ್ಮಣ ಆರ್. ಗೊಳಸಂಗಿ ಹಾಗೂ ಇಂಡಿಯ ಪಾವ೯ತಿ ಸೊನ್ನದ ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪಟ್ಟಣದ ಬಸವ ಮಂಟಪದಲ್ಲಿ ಸಂಜೆ 6.30 ಗಂಟೆಗೆ ನಡೆಯುವ ಅಂಬಿಗ ಚೌಡಯ್ಯ ಹಾಗೂ ಅಂಬಿಗ ಕುಮಾರ ಚೌಡಯ್ಯ ಶರಣರ ಗಣಾಚಾರ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯಯವನ್ನು ಪೂಜ್ಯ ಗುರುಮಹಾಂತ ಸ್ವಾಮಿಗಳು ವಹಿಸುವರು.
ಪೂಜ್ಯ ಡಾ. ಬಸವಲಿಂಗ ಸ್ವಾಮಿಗಳು ನೇತೃತ್ವವನ್ನು ವಹಿಸುವರು. ರಾಮದುರ್ಗದ ಅನುಭಾವಿ ಪ್ರೊ. ಸಿದ್ದಣ್ಣ ಲಂಗೋಟಿ ಅವರು ಅಧ್ಯಕ್ಷತೆ ವಹಿಸುವರು.
ಶರಣ ಸಾಹಿತಿ ಪ.ಗು.ಸಿದ್ದಾಪುರ ಅತಿಥಿಗಳಾಗಿ ಭಾಗವಹಿಸುವರು. ಪ್ರತಿಷ್ಠಾನದ ಅಧ್ಯಕ್ಷರಾದ ಶರಣೆ ನಿಮ೯ಲ ಹಾದಿಮನಿ ಹಾಗೂ ಶರಣ ಜೀವಯ್ಯನವರು ಉಪಸ್ಥಿತರಿರುವರು, ಎಂದು ಪ್ರತಿಷ್ಠಾನದ ಸಂಚಾಲಕರಾದ ಶರಣ ಪ್ರೊ. ಸಂಗಮೇಶ ಹಾದಿಮನಿಯವರು ತಿಳಿಸಿ, ಸರ್ವರಿಗೂ ಸ್ವಾಗತ ಕೋರಿದ್ದಾರೆ.
ಬಸವ ಕೇಂದ್ರ, ಅಕ್ಕನ ಬಳಗ, ತರುಣ ಸಂಘ, ಶರಣ ಸಂಸ್ಕೃತಿ ಮಹೋತ್ಸವ ಸಮಿತಿ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಶ್ರೀ ಅಂಬಿಗರ ಚೌಡಯ್ಯ ಪ್ರತಿಷ್ಠಾನ ಗದಗ-ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜೊತೆಗೆ ನಿಜಶರಣ ಶ್ರೀ ಅಂಬಿಗ ಚೌಡಯ್ಯ ಜಯಂತಿ ಆಚರಣೆ ಹಾಗೂ ಗಣಾಚಾರದ ಶರಣ ಶ್ರೀ ಅಂಬಿಗ ಕುಮಾರ ಚೌಡಯ್ಯನವರ ಶರಣೋತ್ಸವ ಕೂಡ ನಡೆಯಲಿದೆ.


