ದಸರಾ ದರ್ಬಾರ್: ವಿವಾದ ಸೃಷ್ಟಿಸಿದ ಬಸವಣ್ಣ ವೇಷದಾರಿಯ ‘ನಝರ್’

ಸಿಂಧನೂರು

(ಬಸವ ಕಲ್ಯಾಣದಲ್ಲಿ ಆಯೋಜಿತವಾಗಿರುವ ರಂಭಾಪುರಿ ಶ್ರೀಗಳ ಮೇಲೆ ಪ್ರಕಟವಾಗುತ್ತಿರುವ ಲೇಖನದ ಭಾಗ 2. ಭಾಗ ಒಂದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.)

ಪ್ರತಿವರ್ಷ ದಸರಾ ಹಬ್ಬದಲ್ಲಿ ಬೇರೆ ಬೇರೆ ಊರುಗಳಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಶರನ್ನವರಾತ್ರಿ ಉತ್ಸವ ನಡೆಯುತ್ತಿರುವದು ಕರ್ನಾಟಕದ ಜನತೆಗೆ ಹೊಸತಲ್ಲ.

ವಿವಾದಾಸ್ಪದ ನಝರ್ ಕಾರ್ಯಕ್ರಮ:
ಪ್ರತಿದಿನ ಕಾರ್ಯಕ್ರಮದ ಕೊನೆಗೆ ಜಗದ್ಗುರುಗಳವರಿಗೆ ಸಲ್ಲಿಸುವ ನಜರ್ ಸಮರ್ಪಣೆಯಂತೂ ಇಂದ್ರನ ದರ್ಬಾರ್‌ನ್ನು ಸ್ಮರಣೆಗೆ ತರದೇ ಇರಲಾರದು ಎನ್ನುವದು ಅವರ ಅನುಯಾಯಿಗಳ ಅಂಬೊಣ.

ಈ ನಝರ್ ಕಾರ್ಯಕ್ರಮದಲ್ಲಿ ಪ್ರತಿದಿನ ಪೀಠದ ಶಿವಾಚಾರ್ಯರು, ಜಗದ್ಗುರುಗಳ ಮುಂದೆ ಸಾಗಿ ಬಂದು ವಿನೀತ ಭಾವದಿಂದ ಕೈಮುಗಿದು ಅವರ ದೃಷ್ಟಿಯೊಡನೆ ತಮ್ಮ ದೃಷ್ಟಿಯನ್ನು ಕೆಲಕ್ಷಣ ಕೂಡಿಸಿ, ಶರಣಾಗಿ ನಂತರ ಅಲ್ಲಿಂದ ಜಗದ್ಗುರುಗಳಿಗೆ ಬೆನ್ನು ತೋರಿಸದೆ ಹಿಂಮ್ಮುಖವಾಗಿಯೇ ನಡೆದು ವೇದಿಕೆಯಿಂದ ನಿರ್ಗಮಿಸುತ್ತಾರೆ.

ಈ ಕಾರ್ಯಕ್ರಮದಲ್ಲಿ ಅವರ ಶಿವಾಚಾರ್ಯರು ಮಾತ್ರ ಮಾಡಿದರೆ ಯಾರ ಆಕ್ಷೇಪಣೆ ಇರಲಾರದು. ಅಲ್ಲಿ ಲಿಂಗಾಯತ ಧರ್ಮಗುರು ಬಸವಣ್ಣನವರ ವೇಷವನ್ನು ಒಬ್ಬ ವ್ಯಕ್ತಿಗೆ ತೊಡಿಸಿ ಅದೇ ರೀತಿ ನಝರ್ ಕೊಡಿಸುತ್ತಿರುವದು ಬಹಳ ಆಕ್ಷೇಪಣೆಯ ವಿಷಯ. ಇದೆ ವಿಷಯವಾಗಿ ಹಿಂದೆ ಜೇವರ್ಗಿಯಲ್ಲಿ ನಡೆದ ಶರನ್ನವರಾತ್ರಿ ಉತ್ಸವದಲ್ಲಿ ಲಿಂಗಾಯತ ಧರ್ಮಗುರು ಬಸವಣ್ಣನರನ್ನ ಈ ರೀತಿ ಅವಮಾನ ಮಾಡಲಾಗದು ಎಂದು ಬಸವ ಭಕ್ತರು ಆಕ್ಷೇಪಣೆ ಮಾಡಿದರು.

ಬಸವಣ್ಣನವರಿಗೆ ಜಗದ್ಗುರುಗಳಿಂದ ನಝರ್ (ದೃಷ್ಟಿಶಕ್ತಿ) ಕೊಡಿಸುವುದಕ್ಕೆ ನಾವು ಆಸ್ಪದ ಕೊಡುವದಿಲ್ಲ ಎಂದು ಬಸವ ಭಕ್ತರು ತೀವ್ರ ವಿರೋಧ ವ್ಯಕ್ತ ಮಾಡಿದರು., ಸಂಘಟಕರು ಸಹ ಮೊದಲಿಂದಲೋ ಈ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ ಅದನ್ನು ಮಾಡಲೇಬೇಕಾಗಿದೆ ಎಂದು ಹಠ ಹಿಡಿದರು, ಕೊನೆಗೆ ಜಿಲ್ಲಾಧಿಕಾರಿಗಳು ಎಲ್ಲರ ಸಭೆ ಕರೆದು, ನಿಮ್ಮ ಸಂಪ್ರದಾಯದಂತೆ ಶಿವಾಚಾರ್ಯರ, ಉಳಿದ ಹಿರೇಮಠದ ಸ್ವಾಮೀಜಿಗಳಿಗೆ ಆ ಕಾರ್ಯಕ್ರಮ ಮಾಡಿಕೊಳ್ಳಿ ಆದರೆ ಆಕ್ಷೇಪಣೆ ಇರುವ ಬಸವಣ್ಣನವರಿಂದ ಕೊಡಿಸಲಾಗುವ ನಝರ್ ಅನ್ನು ಕೈಬಿಡಲು ಆದೇಶ ಮಾಡಿದರು. ಆ ಕಾರ್ಯಕ್ರಮದಲ್ಲಿ ಅದು ರದ್ದಾಯಿತು.

ಈ ರೀತಿಯಲ್ಲಿ ಕಾರ್ಯಕ್ರಮ ಜರುಗುತ್ತವೆ, ತಮ್ಮ ತಮ್ಮ ಧರ್ಮದ ಹಿರಿಮೆ ಗರಿಮೆ ಹೇಳಿಕೊಂಡರೆ ಯಾರ ಆಕ್ಷೇಪಣೆಯೂ ಇರಲಾಗದು. ಆದರೆ ಬಸವ ಭಕ್ತರಿಗೆ ನೋವುಂಟು ಮಾಡುವ ಯಾವುದೇ ಕ್ರಿಯೆ ಸಮಂಜಸವಲ್ಲ. ಸಂಘಟಕರು ಎಚ್ಚರದಿಂದ ಈ ಕಾರ್ಯಕ್ರಮವನ್ನು ರೂಪಿಸಿ ಮುಗಿಸಬೇಕಾಗಿದೆ, ಇಲ್ಲವಾದರೆ ಗೊಂದಲ, ಗಲಭೆಗೆ ಕಾರಣವಾಗಿ ಶಾಂತಿ ಭಂಗ ಉಂಟಾಗಬಹುದಾದ ಸಾಧ್ಯತೆಗಳು ಇರುತ್ತವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
6 Comments
  • ಬಸವಣ್ಣ ಅಷ್ಟೇ ಅಲ್ಲಣ್ಣ.. ಅಕ್ಕ, ಅಲ್ಲಮರ ವೇಷ ಯಾವ ಶರಣರದ್ದು ಹಾಕುವಂತಿಲ್ಲ..ಶರಣರನ್ನು ಅವಮಾಣಿಸುವ ರೀತಿ ನಾಟಕಗಳನ್ನು ಪ್ರದರ್ಶನ ಮಾಡುತ್ತಾರೆ. ಅವುಗಳಿಗೂ ಕಡಿವಾಣ ಹಾಕಬೇಕು.
    ಶರಣಾರ್ಥಿಗಳು

  • ಇದು ನಿಜವಾಗಿದ್ದರೆ ಅತ್ಯಂತ ಖೇದಕರ್ ಸಂಗತಿ. ಯಾರನ್ನೂ ಅವಮಾನಿಸಬಾರದು ಅದು ಬಸವಣ್ಣನವರಿಗೆ ಖಂಡಿತ ತಪ್ಪು

    • ಏಕೆ ಲಿಂಗಾಯತರ ತಂದೆ ತಾಯಿ ಗುರು ಅಣ್ಣ ಎಲ್ಲಾ ಒಂದಾಗಿರುವ ಪಂಚಾಚಾರ ಭೂಷಿತ ಬಸವಣ್ಣನವರ ಬೆನ್ನು ಬಿದ್ದಿದ್ದೀರ ಪಂಚೆಪೀಠದವರಾ?
      ನಿಮ್ಮ ಆಚಾರ ನಿಮಗೇ ಇರಲಿ. ಲಿಂಗಾಯತರ ಮೇಲೆ ಏಕೆ ಅವನ್ನ ಅಕ್ರಮವಾಗಿ ಹೇರ ಬರುವಿರಿ?!

  • ಯಾವುದೇ ಶರಣರ ಮಹಾಪುರುಷ ವೇಷದರಿಸಿ ನಜರ್ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಪರಾಧ ಬಸವಾದಿ ಭಕ್ತರು ಇದನ್ನು ತೀವ್ರವಾಗಿ ಖಂಡಿಸಬೇಕು ಮತ್ತು ಹಾಗೆ ಆಗದಂತೆ ತಡೆಯಬೇಕು

  • ಶಿವಶರಣರು ಬಸವಣ್ಣನವರಿಗಷ್ಟೇ ಜಗಕ್ಕೆಲ್ಲಾ ಗುರು ನೀನೆಂದು ಒಪ್ಪಿ ಉಲ್ಲೇಖಿಸಿರುವ ವಚನಗಳನ್ನು ರಚಿಸಿದ್ದಾರೆ. ಅವರಿಗೆ ಇನ್ನೊಬ್ಬರು ಯಾರೂ ಗುರುವಾಗಿರಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *