25,000 ಶಾಸನ ಓದಿದ ಕೆಲವೇ ವಿದ್ವಾಂಸರಲ್ಲಿ ಕಲಬುರ್ಗಿ ಒಬ್ಬರು: ವಿಶೇಷ ಉಪನ್ಯಾಸ

ಬಸವ ಮೀಡಿಯಾ
ಬಸವ ಮೀಡಿಯಾ

ಡಾ ಎಂ. ಎಂ. ಕಲಬುರ್ಗಿ ಹುತಾತ್ಮರಾಗಿ ಇಂದಿಗೆ ಹತ್ತು ವರ್ಷಗಳು

ಬೆಂಗಳೂರು

ಇತ್ತೀಚೆಗೆ ನಗರದಲ್ಲಿ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ. ರವೀಂದ್ರನಾಥ್ ಡಾ. ಎಂ.ಎಂ. ಕಲಬುರ್ಗಿಯವರ ಬದುಕು, ಸಂಶೋಧನೆ ಮತ್ತು ಬರಹಗಳನ್ನು ಪರಿಚಯ ಮಾಡಿಕೊಟ್ಟರು.

‘25,000 ಶಾಸನ ಓದಿದ ಕೆಲವೇ ವಿದ್ವಾಂಸರಲ್ಲಿ ಕಲಬುರ್ಗಿ ಒಬ್ಬರು. ಸಾಹಿತ್ಯದ ವಿದ್ಯಾರ್ಥಿಯಾಗಿದ್ದರೂ ಇತಿಹಾಸಕಾರರಿಗೆ ಗೋಚರಿಸದಿದ್ದ ಅನೇಕ ವಿಷಯಗಳನ್ನು ಹೊರತೆಗೆದರು.

ಬಸವಣ್ಣ, ಚನ್ನಬಸವಣ್ಣನವರ ಮೇಲಿನ ಶಾಸನಗಳ ಕೊರತೆಯಿಂದಾಗಿ ಕೆಲವು ವಿದ್ವಾಂಸರು ಅವರ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು. ಆ ಸಂದರ್ಭದಲ್ಲಿ ಶರಣರ ಮೇಲಿನ ಶಾಸನಗಳನ್ನು ಬೆಳಕಿಗೆ ತಂದ ಕಲಬುರ್ಗಿ ‘ಇಂತಹ ವಿದ್ವಾಂಸರ ಮಾತನ್ನು ಮುರಿದು ಮೂಲೆಗೆ ಒತ್ತಿದ ಶ್ರೇಯಸ್ಸು ಕರ್ನಾಟಕದ ಶಾಸನಗಳಿಗೆ ಸಲ್ಲುತ್ತವೆ,’ ಎಂದು ಬರೆದಿದ್ದರು.

ಹಸ್ತಪ್ರತಿ ಶಾಸ್ತ್ರ, ಗ್ರಂಥ ಸಂಪಾದನೆ, ನಾಮಶಾಸ್ತ್ರ ಲಿಂಗಾಯತ ಅಧ್ಯಯನ, ವಚನ ಸಾಹಿತ್ಯ ಸಂಪಾದನೆ – ಮುಂತಾದ ಹಲವಾರು ಕ್ಷೇತ್ರಗಳಿಗೆ ಕಲಬುರ್ಗಿಯವರ ಕೊಡುಗೆ ಗಣನೀಯ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 5,000 ಹಸ್ತ ಪ್ರತಿಗಳನ್ನು ಸಂಗ್ರಹಿಸಿ ಒಂದು ಸುಸಜ್ಜಿತ ಬಂಡಾರ ನಿರ್ಮಿಸಲು ಬಹಳ ಶ್ರಮ ಪಟ್ಟರು.

ವಚನ ಸಾಹಿತ್ಯ ಸಂಪಾದನೆ ಸ್ಥಾವರವಾಗಿ ಉಳಿಯದೆ ಜಂಗಮವಾಗಿ ಮುಂದುವರೆಯುವಂತೆ ಕಲಬುರ್ಗಿ ಶ್ರಮಿಸಿದ್ದರು. ದುಷ್ಟ ಶಕ್ತಿಗಳಿದ್ದರೂ ವಚನ ಸಾಹಿತ್ಯಕ್ಕೆ ಕೊನೆ ಎನ್ನುವುದಿಲ್ಲ, ಎಂದು ಕಲಬುರ್ಗಿ ತೋರಿಸಿದರು.

ಸಂಶೋಧನೆ ಸಾಮಾಜಿಕ ಹೊಣೆಗಾರಿಕೆಯಿಂದ ಕೂಡಿರಬೇಕು ಎಂದು ನಂಬಿದ್ದ ಕಲಬುರ್ಗಿಯವರು ಪಟ್ಟಭದ್ರ ಹಿತಾಸಕ್ತಿಗಳಿಂದ
ನಿರಂತರ ವಿರೋಧ ಎದುರಿಸಬಕಾಯಿತು. ಕೊನೆಗೆ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು, ಎಂದು ರವೀಂದ್ರನಾಥ್ ಹೇಳಿದರು.

ಉಪನ್ಯಾಸದ ಪೂರ್ಣ ವಿಡಿಯೋ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
2 Comments
  • ಬಹಳಷ್ಟು ಕಲಬುರ್ಗಿ ಸರ್ ಹೊಸ ವಿಚಾರಗಳ ಕುರಿತು ವಿಶ್ಲೇಷಣೆ ಮಾಡಿದ್ದೀರಿ. ಸಂಪೂರ್ಣ ವಿಡಿಯೋ ನೋಡಿದೆ,ಆಲಿಸಿದೆ. ರವೀಂದ್ರ ಸರ್ ನಿಮ್ಮ ಈ ಪ್ರಯತ್ನಕ್ಕೆ ಶರಣು ಶರಣಾರ್ಥಿಗಳು

  • ಚೆನ್ನಾಗಿ ತಿಳಿಸಿದ್ದೀರಿ. ಅಭಿನಂದನೆಗಳು. ಬಸವ ‘ಸಂಜೆ’ ಬದಲಿಗೆ ‘ಬೆಳಗು’ ಪ್ರಯೋಗಿಸಿದರೆ ಅರ್ಥ ಪೂರ್ಣ ಆಗುತ್ತದೆ. ಬಸವ ಬೆಳಗಿನ ಶರಣು ಶರಣಾರ್ಥಿಗಳು.🌱🙏🏼

Leave a Reply

Your email address will not be published. Required fields are marked *