ಬಸವ ಸಂಸ್ಕೃತಿ ಅಭಿಯಾನ: ನಾಲ್ಕನೇ ದಿನದ ವರದಿ
ವೇದಿಕೆ ಕಾರ್ಯಕ್ರಮದ ಲೈವ್ ವಿಡಿಯೋ
ಅಭಿಯಾನದ ಸಾಮರಸ್ಯ ನಡಿಗೆ ಶುರು
ಸುಭಾಷ ವೃತ್ತದಿಂದ ಆರಂಭವಾದ ಅಭಿಯಾನದ ಸಾಮರಸ್ಯ ನಡಿಗೆ ಪಾಟೀಲ ಕನ್ವೆಷನ್ ಹಾಲ್ ವರೆಗೆ ನಡೆಯುತ್ತಿದೆ.






ಬಹುತ್ವ ಭಾರತ ನಿರ್ಮಿಸಲು ಯಾದಗಿರಿ ಅಭಿಯಾನದಲ್ಲಿ ಕರೆ
ಮಕ್ಕಳಿಂದ ಬಂದ ಪ್ರಶ್ನೆಗಳು

ದೆವ್ವಗಳು ಇದೆಯೋ ಇಲ್ಲವೋ?
ಎಲ್ಲರೂ ಒಂದೇ ಎಂದರೆ ಧರ್ಮ ಯಾಕೆ ಬೇಕು?
ಭಕ್ತಿಯೆಂದರೇನು, ಪೂಜ್ಯರು ಖಾವಿ ಬಟ್ಟೆಯನ್ನೇ ಯಾಕೆ ಧರಿಸುತ್ತಾರೆ?
ಎಲ್ಲರೂ ಅವರ ಧರ್ಮವೇ ಶ್ರೇಷ್ಠ ಅನ್ನುತ್ತಾರೆ, ಬಸವ ಧರ್ಮವೇ ಯಾಕೆ ಶ್ರೇಷ್ಠ
ಖಾವಿ ಹಾಕುವ ಭೋಗಿಗಳಿಗೆ ಏನು ಹೇಳಬೇಕು?
ಇತ್ಯಾದಿ
ಸಂವಾದ ಶುರು. ಲೈವ್ ವಿಡಿಯೋ
ಮಕ್ಕಳಿಂದ ಪ್ರಶ್ನೆಗಳು ಬರುತ್ತಿವೆ
ಹುಲಿಕಲ್ ನಟರಾಜ ಅನುಭಾವ: ವಚನಗಳಲ್ಲಿ ವೈಜ್ಞಾನಿಕತೆ
12 ಶತಮಾನದಲ್ಲಿ ಧರ್ಮ, ದೇವರು ಕೆಲವರಿಗೆ ಸೀಮಿತವಾಗಿತ್ತು. ಅವು ಇಂದು ಬೀದಿಗೆ ಬಂದು ನಿಂತಿವೆ. ಇದು ಹೀಗೆ ಮುಂದುವರೆದರೆ ಹಿಡಿ-ಹೊಡಿ-ಕೊಲ್ಲು ಸಂಸ್ಕೃತಿ ಬಂದುಬಿಡತ್ತೆ. ಅದು ಬರಬಾರದು ಅಂತಿದ್ರೆ ನಾವು ವೈಚಾರಿಕತೆ ಬೆಳೆಸಿಕೊಳ್ಳಬೇಕಾಗುತ್ತದೆ, ಎಂದು ನಟರಾಜ ಹೇಳಿದರು.

ಇಂದು ಸಾಣೇಹಳ್ಳಿ ಶ್ರೀಗಳ ಜನ್ಮ ದಿನ
ಅಭಿಯಾನದ ನಾಲ್ಕನೆಯ ದಿನ ಸಾಣೇಹಳ್ಳಿ ಶ್ರೀಗಳ ಜನ್ಮ ದಿನ ಕೂಡ. ಶ್ರೀಗಳ ಸೈದ್ಧಾಂತಿಕ ಬದ್ಧತೆ ನಮ್ಮಂತ ಎಲ್ಲಾ ಮಠಾಧೀಶರಿಗೂ ಆದರ್ಶ, ಎಂದು ನಿಜಗುಣಾನಂದ ಶ್ರೀಗಳು ಹೇಳಿದರು.

ನಿಜಗುಣಾನಂದ ಶ್ರೀಗಳಿಂದ ಸಂವಾದಕ್ಕೆ ಸ್ವಾಗತ
‘ಬಸವ ತತ್ವದಿಂದ ವಿದ್ಯಾರ್ಥಿಗಳ ಭವಿಷ್ಯ ಕಟ್ಟುವುದು ಸಂವಾದದ ಮುಖ್ಯ ಉದ್ದೇಶ.’

ಉದ್ಘಾಟನೆ: ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್
ಬಸವಣ್ಣನವರು ಬರೀ ಆಧ್ಯಾತ್ಮಿಕತೆ ಬಗ್ಗೆ ಮಾತನಾಡಲಿಲ್ಲ. ಅನುಭವ ಮಂಟಪ ರಚಿಸಿ ಕಾಯಕವೇ ಕೈಲಾಸ ತತ್ವ ನೀಡಿದರು. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ ಪ್ರಪಂಚದಲ್ಲಿ ಯಾವ ಸಮಸ್ಯೆಯೂ ಇರುವುದಿಲ್ಲ, ಎಂದು ಹೇಳಿದರು.

ಬಸವಣ್ಣನವರ ಚಿತ್ರಕ್ಕೆ ಪುಷ್ಪಾರ್ಚನೆ
ಬಸವಣ್ಣನವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಸಿಗೆ ನೀರೆರೆದು ಪೂಜ್ಯರು ಕಾರ್ಯಕ್ರಮ ಶುರು ಮಾಡಿದ್ದಾರೆ.

ಯಾದಗಿರಿಯಲ್ಲಿ ಬಸವ ಸಂಸ್ಕೃತಿ ಅಭಿಯಾನ
ಬಸವ ಸಂಸ್ಕೃತಿ ಅಭಿಯಾನ ಯಾದಗಿರಿಯಲ್ಲಿ ಮುಂದುವರೆದಿದೆ. ಇದು ನಾಲ್ಕನೇ ದಿನ.