ಮೂರು ವರ್ಷಗಳಿಂದ ಮುಸುಕಿನಲ್ಲಿದ್ದ ಬಸವ ಪುತ್ಥಳಿ ಅನಾವರಣ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಕಳೆದ ಮೂರು ವರ್ಷಗಳಿಂದ ಮುಸುಕಿನಲ್ಲಿದ್ದ ಬಸವಣ್ಣನವರ ಪುತ್ಥಳಿ ನಾಳೆ ಅನಾವರಣಗೊಳ್ಳಲಿದೆ.

ಶನಿವಾರ ಸಂಜೆ ನಾಲ್ಕು ಗಂಟೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜಾಜಿನಗರದಲ್ಲಿ ಪುತ್ಥಳಿಯ ಅನಾವರಣ ಮಾಡುವರು. ಇದೆ ಸಮಯದಲ್ಲಿ ಅನುಭವ ಮಂಟಪ ಚಿತ್ರ ಶಿಲಾನಾವರಣನ್ನು ಸಚಿವ ಎಂ.ಬಿ. ಪಾಟೀಲ ನೆರವೇರಿಸಲಿದ್ದಾರೆ.

ಸಾನಿಧ್ಯವನ್ನು ಪೂಜ್ಯರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಡಾ. ಗಂಗಾ ಮಾತಾಜಿ ವಹಿಸುವರು.

ಅಧ್ಯಕ್ಷತೆಯನ್ನು ರಾಜಾಜಿನಗರ ಶಾಸಕ ಎಸ್. ಸುರೇಶಕುಮಾರ ವಹಿಸುವರು. ಮತ್ತಿತರ ಗಣ್ಯರು ಉಪಸ್ಥಿತರಿರುವರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಸ್ಥಾಪಿಸಲಾದ ಬಸವೇಶ್ವರ ಪುತ್ಥಳಿಯ ಅನಾವರಣ ಸಮಾರಂಭಕ್ಕೆ ಶ್ರೀ ಬಸವೇಶ್ವರ ಪ್ರಚಾರ ಸಮಿತಿ, ಬಸವ ವೇದಿಕೆ, ಬಸವ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಗಳು ಸರ್ವರಿಗೂ ಸ್ವಾಗತ ಕೋರಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
3 Comments
  • ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಅನುಪಸ್ಥಿತಿ ?
    ಬಿಡಲಾಗಿದಯೆ🤔

  • ಅನಾವರಣಗೊಳಿಸುವ ಪ್ರಕ್ರಿಯೆ ಮೂರು ವರ್ಷ ತಡವಾಗಿಸಿದ್ದು ಯಾರು?

Leave a Reply

Your email address will not be published. Required fields are marked *