ಚಿತ್ರದುರ್ಗ
ಬಸವ ಸಂಸ್ಕೃತಿ ಅಭಿಯಾನ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಗರದಲ್ಲಿ ಏಕಕಾಲಕ್ಕೆ ಐದು ಸಾವಿರ ಶರಣ-ಶರಣೆಯರ ಕಂಠಸಿರಿಯಿಂದ ಸಾಮೂಹಿಕ ವಚನಗಾನ ‘ವಚನ ಝೇಂಕಾರ’ ಕಾರ್ಯಕ್ರಮ ನಡೆಯಲಿದೆ.
ಸೆಪ್ಟಂಬರ್ 28 ಬೆಳಗ್ಗೆ 10 ಗಂಟೆಗೆ ನಗರದ ಮುರುಘ ರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇತ್ತೀಚೆಗೆ ನಡೆದ ಅಭಿಯಾನ ಹಾಗೂ ಸಂಸ್ಕೃತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಒಂದು ಗಂಟೆ ನಡೆಯುವ ವಚನ ಝೇಂಕಾರ ಚಿತ್ರದುರ್ಗದ ವಿಶೇಷತೆಯನ್ನು ನಾಡಿಗೆ ತಿಳಿಸುವ ಕಾರ್ಯಕ್ರಮವಾಗಿರುತ್ತದೆ ಎಂದು ತಿಳಿಸಿದರು.
ಗಾನಯೋಗಿ ಸಂಗೀತ ಬಳಗದ ಶರಣ ತೋಟಪ್ಪ ಉತ್ತಂಗಿ, ಸರಿಗಮಪ ಸಂಗೀತ ಬಳಗದ ಸುಚಿತ್ ಕುಲಕರ್ಣಿ, ಉಮೇಶ ಪತ್ತಾರ ಇವರಿಂದ ಗಾಯಕರಿಗೆ ವಚನಾಭ್ಯಾಸವನ್ನು ಮಾಡಿಸಲಾಗುತ್ತಿದೆ.
ಪೂರ್ವಭಾವಿ ಸಭೆಯಲ್ಲಿ ವಚನ ಝೇಂಕಾರದ ಸವಿಯನ್ನು ತೋಟಪ್ಪ ಉತ್ತಂಗಿ, ಸುಜಿತ್ ಕುಲಕರ್ಣಿ, ಉಮೇಶ್ ಪತ್ತಾರ್ ವಚನಗಳನ್ನು ಪ್ರಾಯೋಗಿಕವಾಗಿ ಹಾಡಿ ತೋರಿಸಿದರು.
ಆಸಕ್ತರು ಮಠಕ್ಕೆ ಭೇಟಿ ನೀಡಿ ನೋಂದಾಯಿಸಬಹುದು. ಕಾರ್ಯಕ್ರಮದಲ್ಲಿ ನೊಂದಾಯಿಸಿದವರಿಗೆ ಒಂದು ಬಸವ ಕಿಟ್ ವಿತರಿಸಲಿದ್ದು, ಕಿಟ್‌ನಲ್ಲಿ ವಚನಪುಸ್ತಕ, ರುದ್ರಾಕ್ಷಿ, ವಿಭೂತಿ, ವಸ್ತ್ರ ಚಿಕ್ಕ ಬಸವಣ್ಣನವರ ಭಾವಚಿತ್ರ ಹಾಗೂ ಅಭಿನಂದನಾ ಪತ್ರ ಇರಲಿದೆ, ಎಂದು ಮಠದಿಂದ ಬಂದಿರುವ ಪ್ರಕಟಣೆ ತಿಳಿಸಿದೆ.
ಎಲ್ಲಾ ಜಿಲ್ಲೆಗಳವರೂ ಭಾಗವಹಿಸಬಹುದಾ.
ಹೇಗೆ ಭಾಗವಹಿಸುವುದು, ವಿವರಗಳಿಗೆ ಯಾರನ್ನು ಕೇಳಬೇಕ