ಅಭಿಯಾನ: ಉತ್ತರಕನ್ನಡ ತಾಲೂಕುಗಳಲ್ಲಿ ನಡೆಯುತ್ತಿರುವ ಜಾಗೃತಿ ಸಭೆಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಮುಂಡಗೋಡ

ಮುಂಡಗೋಡ ಪಟ್ಟಣದಲ್ಲಿ ನಡೆಯುವ ಜಿಲ್ಲೆಯ ಬಸವ ಸಂಸ್ಕೃತಿ ಅಭಿಯಾನದ ಸಿದ್ಧತೆಗಾಗಿ ಉತ್ತರಕನ್ನಡ ಜಿಲ್ಲೆಯ ಉಳವಿ, ದಾಂಡೇಲಿ, ಹಳಿಯಾಳ, ಶಿರಸಿ, ಬನವಾಸಿ, ಸಿದ್ದಾಪುರ ಮತ್ತಿತರ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಸಭೆಗಳನ್ನು ನಡೆಸಲಾಯಿತು.

ಜಿಲ್ಲೆಯ ಬಸವ ಸಂಸ್ಕೃತಿ ಅಭಿಯಾನದ ಗೌರವಾಧ್ಯಕ್ಷರು, ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತಾಜಿ ಅಭಿಯಾನದ ಬಗ್ಗೆ ಮಾಹಿತಿ ನೀಡುತ್ತ, ಬಸವಣ್ಣನವರು ಮಹಿಳೆಯರಿಗೆ ಸಮಾನ ಸ್ಥಾನಮಾನ ಕಲ್ಪಿಸುವಲ್ಲಿ ಅವಿರತ ಶ್ರಮಿಸಿದ ಮಹಾಪುರುಷ, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗುವಂತೆ ಕರೆ ನೀಡಿದರು.

“ಕರ್ನಾಟಕ ಸರ್ಕಾರ ಜಗದ್ಗುರು ಬಸವೇಶ್ವರರನ್ನು ಕನ್ನಡ ನಾಡಿನ ಸಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷಪೂರ್ಣಗೊಂಡ ನಿಮಿತ್ತ ಬಸವಾದಿ ಶರಣರ ಸಮಾಜೋಧಾರ್ಮಿಕ ಪರಿವರ್ತನೆಗಳಾದ ಸ್ತ್ರೀಗೆ- ಪುರುಷನಷ್ಟು, ಪ್ರಜೆಗೆ -ಪ್ರಭುವಿನಷ್ಟು ಶೂದ್ರನಿಗೆ- ಬ್ರಾಹ್ಮಣನಷ್ಟು ಅಧಿಕಾರ ದೊರೆಯುವ ನಿಟ್ಟಿನಲ್ಲಿ ಸಮಸಮಾಜದ ನಿರ್ಮಾಣ ಕೈಗೊಂಡ ಮಹಾ ಮಾನವತವಾದಿ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಹಾಗೂ ನಮ್ಮ ಪರಂಪರೆಯ ಪೂರ್ವ ಆಸ್ತಿಯಾದ, ಹೊಸ ಸಮಾಜದ ಗುರಿಯಿಟ್ಟು ಆಡಿದ ಶರಣರ ಮಾತುಗಳು, ಭೌತಿಕ ಜನತಾ ಸಾಹಿತ್ಯ -ವಚನ ಸಾಹಿತ್ಯವನ್ನು ಜನಮಾನಸದಲ್ಲಿ ಚಿರಸ್ಥಾಯಿಗೊಳಿಸಬೇಕೆನ್ನುವ ಅಪರೂಪದ ಅಭೂತಪೂರ್ವ ಅಭಿಯಾನ ಇದಾಗಿದೆ” ಎಂದರು.

“ಆತ್ಮಕಲ್ಯಾಣದೊಂದಿಗೆ ಸಮಾಜ ಕಲ್ಯಾಣ ಕಾರ್ಯಗತಗೊಳಿಸಿದ ಬಸವಾದಿ ಶರಣರ ತತ್ವಾದರ್ಶಗಳಾದ ಸಂಸ್ಕಾರ, ಸದಾಚಾರ, ನೈತಿಕತೆ, ಸೌಹಾರ್ದತೆ, ಕಾಯಕ, ದಾಸೋಹ, ಏಕದೇವನಿಷ್ಠೆ, ಇತ್ಯಾದಿಗಳನ್ನು ಮನ – ಮನೆಗಳಿಗೂ ತಲುಪಿಸುವುದು, ಮನುಷ್ಯ -ಮನುಷ್ಯರ ನಡುವೆ ನೈತಿಕ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸಿ ಅನುಭವ ಮಂಟಪವೆಂಬ ಧರ್ಮ ಸಂಸತ್ತಿನಿಂದ ಸಮಯ ಪ್ರಜ್ಞೆ, ಕಾಯಕ ಶ್ರದ್ಧೆ, ಅಸ್ಪೃಶ್ಯತಾ ನಿವಾರಣೆ, ವಾಕ್ ಸ್ವಾತಂತ್ರ್ಯ, ಮಹಿಳಾ ಸ್ವಾತಂತ್ರ್ಯ, ಸ್ಥಾವರ ನಿರಾಕರಣೆ, ಜಂಗಮಪ್ರೇಮ, ದೇಹವೇ ದೇವಾಲಯ ಇಂತಹ ಉನ್ನತ ವಿಚಾರಗಳನ್ನು ಜಾರಿಗೊಳಿಸಿ, ಭಾರತೀಯ ಸಂವಿಧಾನದಲ್ಲಿರುವ ಬಹುತೇಕ ಅಂಶಗಳ ಅಡಕವಾಗಿರುವ ಕರ್ನಾಟಕದ ಬಹು ದೊಡ್ಡ ಸಾಂಸ್ಕೃತಿಕ ಸಂಪತ್ತಾದ ವಚನ ವಾಂಗ್ಮಯಗಳಿಂದ- ಅಜ್ಞಾನ, ಬಡತನ, ಜಾತಿಯತೆ, ದ್ವೇಷ, ಅಸೂಯೆ ಯಂತಹ ಸಮ ಸಮಾಜ ನಿರ್ಮಾಣದ ಕಂಟಕವಾಗಿರುವ ಅಂಶಗಳನ್ನು ಹೋಗಲಾಡಿಸಿ ಗುರು-ಲಿಂಗ- ಜಂಗಮದಷ್ಟೇ, ಅರಿವು- ಆಚಾರ- ಅನುಭಾವಗಳಿಗೆ ಪ್ರಾಮುಖ್ಯತೆ ನೀಡಿ, ಬಸವನಿಂದ ಬದುಕಿತ್ತೀ ಲೋಕವೆಲ್ಲ ಶರಣ ಬಹುರೂಪಿ ಚೌಡಯ್ಯನವರ ವಚನದಂತೆ 12ನೇ ಶತಮಾನದ ಕಲ್ಯಾಣ ಕರ್ನಾಟಕವನ್ನು 21ನೇ ಶತಮಾನದಲ್ಲಿ ಮತ್ತೆ ಕಲ್ಯಾಣವಾಗಿಸುವ ಭರವಸೆಯ ಬೆಳಕು ಈ ಅಭಿಯಾನ” ಎಂದು ಮಾತಾಜಿ ಹೇಳಿದರು.

ಇವರೊಂದಿಗೆ ಉತ್ಸವ ಸಮಿತಿಯ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ವಿ. ಎಸ್. ಪಾಟೀಲ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದಲ್ಲಿ ತಾವೆಲ್ಲರೂ ಸ್ವಯಂಪ್ರೇರಿತರಾಗಿ ಭಾಗಿಯಾಗಿ ನಮ್ಮ ಧರ್ಮದ ಅಸ್ಮಿತೆಯನ್ನು ಉಳಿಸೋಣ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಮೂಲೆ ಮೂಲೆಯಿಂದ ಆಗಮಿಸಿ ಯಶಸ್ವಿಗೊಳಿಸೋಣ ಮತ್ತು ಸಮಾಜ ಸಂಘಟಿಸೋಣ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಬಸವರಾಜ ಒಸಿಮಠ, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪಾಟೀಲ, ಖಜಾಂಚಿ ಶ್ರೀಶೈಲ ಐನಾಪೂರ, ಬಸವಭಕ್ತರು ಭಾಗಿಯಾಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
1 Comment
  • ಕಲ್ಯಾಣಮ್ಮ ಅಕ್ಕ ಮಹಾದೇವಿ ಗವಿ ಬಂದವರ ಓಣಿ ಬಸವಕಲ್ಯಾಣ says:

    😂🎉💐❤️👌👍🙏

Leave a Reply

Your email address will not be published. Required fields are marked *