ಹಿರೇಬಾಗೇವಾಡಿಯಲ್ಲಿ 100ನೆ ವಾರದ ವಚನ ಚಿಂತನೆ ಕಾರ್ಯಕ್ರಮ

ಬೆಳಗಾವಿ

ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಶ್ರೀನಿಜಗುಣಿ ಶಿವಯೋಗಿಗಳ ಮಠದಲ್ಲಿ 100ನೆಯ ವಾರದ ವಚನ ಪ್ರಾರ್ಥನೆ ಹಾಗೂ ವಚನ ಚಿಂತನೆ ಕಾರ್ಯಕ್ರಮ ನಡೆಯಿತು.

100ನೇ ವಾರದ ಸಂಭ್ರಮಾಚರಣೆಯ ಪ್ರಯುಕ್ತ ಶ್ರೀ ಅಡವಿಸಿದ್ದೇಶ್ವರ ಮಠದ ಪೂಜ್ಯ ಅಡವೀಶ್ವರ ದೇವರು ತಾರಿಹಾಳ ಸಾನಿಧ್ಯವನ್ನು ವಹಿಸಿ ಆಶೀರ್ವಚನವನ್ನು ನೀಡಿದರು. ಹಾಗೂ ಶ್ರೀನಿಜಗುಣ ಶಿವಯೋಗಿ ಮಠದ ಶ್ರೀ ನಿಜಗುಣಿ ದೇವರು ನೇತೃತ್ವ ವಹಿಸಿದ್ದರು.

ವಚನ ಪ್ರಾರ್ಥನೆಯನ್ನು ಪಾರ್ವತಿ ಮಠಪತಿ ಅವರು ನೆರವೇರಿಸಿದರು. ಬಿ.ಜಿ. ವಾಲಿಇಟಗಿ, ಮಹಾಂತೇಶ ತೋರಣಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ವಾಗತವನ್ನ ಆನಂದ ಕೊಂಡಗುರಿ ಅವರು,ಶರಣು ಸಮರ್ಪಣೆಯನ್ನು ಎನ್. ಪಿ. ಉಪ್ಪಿನ ಅವರು ನಿರ್ವಹಿಸಿದರು. ನಿರೂಪಣೆಯನ್ನು ಪ್ರವೀಣ ರೊಟ್ಟಿ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ದಿ. ಬೆಳಗಾವಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಬೆಳಗಾವಿ ಇದರ ನಿರ್ದೇಶಕ ಸ್ಥಾನಕ್ಕೆ ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಗ್ರಾಮದ ಬಸನಗೌಡ ರುದ್ರಗೌಡ ಪಾಟೀಲ ಅವರನ್ನು ಗುರುಬಸವ ಬಳಗದ ವತಿಯಿಂದ ಸತ್ಕರಿಸಲಾಯಿತು.

ಇದೇ ಗುರುವಾರ 11ರಂದು ಬೆಳಗಾವಿ ಮಹಾನಗರದಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿನಂತಿಸಿಕೊಳ್ಳಲಾಯಿತು.

ಬಾಬುಗೌಡ ಪಾಟೀಲ, ದಯಾನಂದ ಹಂಚಿನಮನಿ, ಶಿವಪುತ್ರ ಇಟಗಿ, ಸಿ.ಎಮ್. ಹುಬ್ಬಳ್ಳಿ, ಪ್ರಕಾಶ ಜಪ್ತಿ, ಅಶೋಕ ಪಾಶ್ಚಾಪುರ, ನಾಗನಗೌಡ ಹಾದಿಮನಿ, ಜಾಗತಿಕ ಲಿಂಗಾಯತ ಮಹಾಸಭಾ, ಗುರು ಬಸವ ಬಳಗ, ಶ್ರೀ ನಿಜಗುಣ ಸೇವಾ ಸಮಿತಿ ಇವುಗಳ ಪದಾಧಿಕಾರಿಗಳು ಸದಸ್ಯರು, ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.