ಏಕತಾ ಸಮಾವೇಶದಲ್ಲಿ ಬಸವಣ್ಣನವರ ಭಾವಚಿತ್ರ ಹಾಕದಿರುವಷ್ಟು ದ್ವೇಷವೇಕೆ?

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಕಲ್ಯಾಣ

ಲಿಂಗಾಯತರನ್ನು ವೀರಶೈವರನ್ನು ಒಂದುಗೂಡಿಸಲು ಹೊರಟಿರುವ ಏಕತಾ ಸಮಾವೇಶದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕದಿರಲು ಪೂಜ್ಯ ದಿಂಗಾಲೇಶ್ವರ ಸ್ವಾಮೀಜಿ ನಿರ್ಣಯಿಸಿದ್ದಾರೆ.

ಇಂದು ಹೊರಡಿಸಿರುವ ಪ್ರಕಟಣೆಯಲ್ಲಿ ಬಸವಕಲ್ಯಾಣದ ಬಸವಪರ ಸಂಘಟನೆಗಳ ಒಕ್ಕೂಟ ದಿಂಗಾಲೇಶ್ವರ ಶ್ರೀಗಳ ನಿರ್ಣಯವನ್ನು ಖಂಡಿಸಿದೆ.

“ಏಕತಾ ಸಮಾವೇಶದಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವುದಿಲ್ಲ ಎಂದು ಪೂಜ್ಯ ದಿಂಗಾಲೇಶ್ವರ ಸ್ವಾಮೀಜಿಯವರು ಹೇಳಿಕೆ ನೀಡಿದ್ದಾರೆ.

ಎಲ್ಲಿ ಬಸವಣ್ಣ ಇಲ್ಲವೋ ಅವರು ನಮ್ಮವರಲ್ಲ. ನಾವು ಬಸವಣ್ಣನವರನ್ನು ಒಪ್ಪುವವರು ಅವರು ಬಸವಣ್ಣನವರನ್ನು ಒಪ್ಪದವರು. ಇಲ್ಲಿಯೇ ಗೊತ್ತಾಗುತ್ತದೆ ಅವರು ಬಸವಣ್ಣನವರನ್ನು ಎಷ್ಟು ದ್ವೇಷಿಸುತ್ತಾರೆ ಅಂತ.

ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಬಸವ ಧರ್ಮದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಮತ್ತು ರಾಜಕಾರಣ ಮಾಡುವ ಹಕ್ಕಿಲ್ಲ,” ಎಂದು ಒಕ್ಕೂಟ ತಿಳಿಸಿದೆ.

“ಬಸವ ಸಂಸ್ಕೃತಿ ಅಭಿಯಾನ ಮಾಡುವವರು ಚಿಯಾ ಮಿಯಾ ಸ್ವಾಮಿಗಳು ಎಂದು ಅಪ್ರಬುದ್ಧರಾಗಿ ಮಾತಾಡಿದ್ದೀರಿ ಇದು ನಿಮ್ಮ ಮೇಲರಿಮೆ ಮತ್ತು ನಿಮ್ಮ ನಾಲಿಗೆ ಸಂಸ್ಕೃತಿಯನ್ನು ತೋರಿಸುತ್ತಿದೆ.

ಕರ್ನಾಟಕ ಸರಕಾರ ವಿಶ್ವಗುರು ಬಸವಣ್ಣನವರನ್ನು ಕನ್ನಡದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷವಾದರೂ ಈ ವರೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳದವರಾದ ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ,” ಎಂದು ಒಕ್ಕೂಟ ದಿಂಗಾಲೇಶ್ವರ ಶ್ರೀಗಳಿಗೆ ತಿಳಿಸಿದೆ.

https://basavamedia.com/dasara-darbar-basva-kalyana

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
12 Comments
  • ಉರಿ ಉರಿ ಉರಿ , ಬಸವ ಸಂಸ್ಕೃತಿಯ ಅಭಿಯಾನದ ಯಶಸ್ಸು ಕಂಡು ಸರ್ವಾಂಗವೆಲ್ಲವೂ ಉರಿಯಿಂದ ಬೇಯುತ್ತಿದೆ. ಹೀಗಿರುವಾಗ ಶರಣರ ಭಾವ ಚಿತ್ರ ಹಾಕಿ ಉಪ್ಪು ಸವರಿಕೊಳ್ಳಲು ಹೇಗೆ ಸಾಧ್ಯ.

  • ಬಸವಣ್ಣ ಭಿತ್ತಿದ ಬೀಜ ಕೆಟ್ಟಿತ್ತೆನಬೇಡ. . . . . ಮುಂದಿನ ಫಲದಲ್ಲಿ ಆರಿಸಿಕೋ….🙌🙌👍👌💐💐🌹🌹🙏🙏

  • 12ನೇ ಶತಮಾನದಲ್ಲಿ 1,96,000 ಸಾವಿರ ಶರಣರು ತಮ್ಮ ರಕ್ತ ಹರಿಸಿ ಕಟ್ಟಿದ ಧರ್ಮ ಇದು.

    ೧೨ನೇ ಶತಮಾನದಲ್ಲಿ ವೀರಶೈವ ಎಂಬುದು ಇತ್ತಾ?

    ಬಸವಣ್ಣನೇ ತಂದೆ, ಬಸವಣ್ಣನೇ ತಾಯಿ ಎಂದು ನಂಬಿದವರು ನಾವು.

    ಶರಣರ ವಚನ ಸಾಹಿತ್ಯವನ್ನು ಎಲ್ಲರಿಗೂ ತಿಳಿಸುವ ಹಾಗೂ ಪ್ರಚಾರ ಮಾಡುವ ಕಾರ್ಯ ಆಗಬೇಕಿದೆ.

    *ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ ಹುಸಿಮಾತನಾಡಿ ಕೇಡದಿರಿ ಲಿಂಗಾಯತಕೆ ಬಸವಣ್ಣನೆ ಕರ್ತು ಸರ್ವಜ್ಞ||*

    ನಾವು ಜಾತಿ ಗಣತಿ ಇತರೆ (11) ಕಾಲಂ ನಲ್ಲಿ ಲಿಂಗಾಯತ ಎಂದು ಹಾಗೂ ಉಪ ಪಂಗಡ ದಲ್ಲಿ ನಮ್ಮ ನಮ್ಮ ಕಾಯಕ ಜಾತಿಗಳನ್ನು ಬರೆಸಬೇಕು.

    ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗಬೇಕು

    • ದರಿದ್ರ ದಿಂಗಾಲೇಶ್ವರನಿಗೆ ನೈತಿಕತೆ ಇಲ್ಲವೇ ಇಲ್ಲ ಮಾನಸಿಕ ದಿವಾಳಿತನದ ಮಾತನಾಡುವ ಇಂತ ಕಿಡಿಗೇಡಿ ಕಾಮಿಸ್ವಾಮಿಯ ಉಪದೇಶ ಬಸವಬಕ್ತರಿಗೆ ಬೇಕಾಗಿಲ್ಲ.ಸಿರಹಟ್ಟಿಯ ಬಸವ ಭಕ್ತರು ಇವನನ್ನು ಉರಿಂದಾಚೆ ದೂಕಬೇಕು ಬಸವ ಭಕ್ತರು ಅಣ್ಣಾ ತಿಂದು ಬಸವದ್ರೋಹದ ಕಾಯಕಕ್ಕೆ ಅವಮಾನಿಸುವ ಈ ಗಿರಾಕಿ ನಮಗೆ ಬೇಕಿಲ್ಲ.

    • Sir, tamma/Namma niluvu sariyagide, adare e jati sameeksheyalli gondala shristisalguttide, spasta nirdhara kaikolli, e sameekshe saddakke mundudivude sooktha?

  • ನನ್ನ ಕುಟುಂಬದ ಒಟ್ಟು 8 ಜನ ಲಿಂಗಾಯತ ಧರ್ಮ ಕ್ಕೆ ಸೇರುತ್ತೇವೆ . ಎಲ್ಲಿ ಬಸವಣ್ಣನಿಗೆ ಜಾಗವಿಲ್ಲ ಅಲ್ಲಿ ನಾವಿಲ್ಲ

    • ಎರಡೂ ಕಲಾಂಗಳಲ್ಲಿ ಲಿಂಗಾಯತ ಎಂದು ಬರೆಸಬಹುದು

  • ದಿನಗಲೆಶ್ವರರೇ ಶರಣಾಧರ್ಮದ ಚರಿತ್ರೆ ಮತ್ತು ಇತಿಹಾಸವನ್ನು ನಿಮ್ಮ ಮಠದ ಒಳಗೆ ಇದ್ದು ಅಭ್ಯಾಸವನ್ನು ಮಾಡಿರಿ., ಹಾಗು ವೀರಶೈವದ ಪುರಾಣ ಮತ್ತು ಇತಿಹಾಸವನ್ನು ಓದಿ ತಿಳಿಯರಿ. ಮನನ ಮಾಡಿರಿ ತುಲನಾತ್ಮಕವಾಗಿ ತಿಳಿಯರಿ, ಆಗ ನೀವು ವಾದಕ್ಕೆ ಬನ್ನಿ. ಹೊಟ್ಟೆಕಿಚ್ಚು ತುಂಬಿಕೊಂಡು ಹುಚ್ಚರಂತೆ ಚಿರಾಡಬೇಡಿ.

    • ಬಸವ ಭೂಮಿಯು ಮತ್ತೆ ಬಸವಾದಿ ಪ್ರಮಥರಿಂ ವೈಬವದಿ ಮೆರೆಯಬೇಕು ಬಸವ ತತ್ವ ಕ್ರಾಂತಿ ಕಹಳೆ ಅದು ಜಗದಲ್ಲಿ ಮತ್ತೆ ತಾ ಮೊಳಗಬೇಕು ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜವನ್ನು ಕಟ್ಟಿದ ಸಾಮಾಜಿಕ ಪರಿವರ್ತನೆಯ ಹರಿಕಾರ ದಿನ ದಲಿತೋದ್ದಾರಕ ಬಸವಣ್ಣನವರು ಒಬ್ಬ ವ್ಯಕ್ತಿ ಅಲ್ಲ ಈ ಜಗದ ಶಕ್ತಿ.

      ಭಾರತ ದೇಶ ಜೈ ಬಸವೇಶ ಲಿಂಗಾಯತ ಧರ್ಮಕ್ಕೆ ಜಯವಾಗಲಿ ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ ಜಾತಿಯ ಭೂತ ನಾಶವಾಗಲಿ ಬಸವ ತತ್ವ ಲಿಂಗಾಯತ ತತ್ವ ಜಗದಲ್ಲಿ ಬೆಳಗಲಿ

      ಶರಣು ಶರಣಾರ್ಥಿಗಳು

  • ಬಸವಣ್ಣನವರ ಭಾವವಿಚಿತ್ರ ಇಲ್ಲದ ವೀರಶೈವ ಸಮಾವೇಶದಲ್ಲಿ ಸಮಾನತೆ ಕಾಣಲು ಸಾಧ್ಯವೇ ?

Leave a Reply

Your email address will not be published. Required fields are marked *