ಹುಬ್ಬಳ್ಳಿ
‘ಪಂಚಮ ಸಾಲಿ ಜಾತಿ ಗಣತಿ ಜಾಗೃತಿ ಸಭೆ’ಯಲ್ಲಿ ಹಿಂದೂ ಎಂದು ಬರೆಸಲು ಕರೆ ನೀಡಿದ ಪೂಜ್ಯ ಜಯಮೃತ್ಯುಂಜಯ ಶ್ರೀಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆಯೆಂದು ತಿಳಿದು ಬಂದಿದೆ.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಸಭೆಯಲ್ಲಿ ಶ್ರೀಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕೆಂದು ಸೂಚನೆ ನೀಡಿದರು.
ಅದಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ವಾಗ್ವಾದ ನಡೆಸಿದರು. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಒತ್ತಾಯಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಇದಕ್ಕೂ ಮುನ್ನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು. ಉಳಿದಂತೆ ಲಿಂಗಾಯತ ಪಂಚಮಸಾಲಿ ಎಂದು ಜಾತಿ ಕಾಲಂನಲ್ಲಿ ಬರೆಯಿಸಬೇಕು ಎಂದರು.
ಅದನ್ನು ಕೆಲವರು ವಿರೋಧಿಸಿ ಹಿಂದೂ ಎಂಬುದು ಧರ್ಮವೇ ಅಲ್ಲ, ಧರ್ಮವನ್ನು ಲಿಂಗಾಯತ ಎಂದೇ ಬರೆಸೋಣ ಎಂದು ವಾದ ಮಂಡಿಸಿದರು. ಆಗ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮಾತನಾಡಿ ಲಿಂಗಾಯತ ಎಂದು ಬರೆಯಿಸಲು ಕಾಲಂ ಇಲ್ಲ. ಅದು ಅಧಿಕೃತವಾಗಲ್ಲ. ಮುಂದೆ ಲಿಂಗಾಯತ ಪ್ರತ್ಯೇಕ ಧರ್ಮವಾದಾಗ ಲಿಂಗಾಯತ ಎಂದು ಬರೆಯಿಸಬಹುದು ಈಗ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು ಎಂದರು.
ಆದರೂ ಸಭೆಯಲ್ಲಿ ಆಗಾಗ ಹಿಂದೂ ಪದ ಬಳಸುವುದಕ್ಕೆ ಆಕ್ಷೇಪದ ಧ್ವನಿಗಳು ಜೋರಾಗಿ ಕೇಳಿ ಬಂದು ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು ಎಂಬ ಸಲಹೆಗಳು ಬಂದವು.
ಇದರಿಂದಾಗಿ ಶ್ರೀಗಳು, ಪಾಲ್ಗೊಂಡಿದ್ದ ಜನಪ್ರತಿನಿಧಿಗಳು, ಮುಖಂಡರು ಎಲ್ಲರು ಮುಜುಗರಗೊಳಗಾಗಿದ್ದಂತೂ ಸತ್ಯ, ಎಂದು ಸಭೆಯಲ್ಲಿ ಭಾಗವಹಿಸಿದವರೊಬ್ಬರು ಹೇಳಿದರು.

ಈ ಸಮೀಕ್ಷೆಗೆ ತಡೆಯಾಜ್ಞೆ ತರುವ ನಿಟ್ಟಿನಲ್ಲಿ ಸಮಾಜದ ವಕೀಲರ ಪರಿಷತ್ ಪ್ರಯತ್ನಿಸಬೇಕು ಎಂಬ ಬೇಡಿಕೆಯೂ ಕೇಳಿ ಬಂತು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು ‘ಲಿಂಗಾಯತ ಧರ್ಮವಾಗಬೇಕು ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ. ಮಾನ್ಯತೆ ಸಿಕ್ಕಾಗ ಲಿಂಗಾಯತ ಎಂದು ನಮೂದಿಸೋಣ. ಸದ್ಯ ನಡೆಯುವ ಸಮೀಕ್ಷೆಯಲ್ಲಿ ಹಿಂದೂ ಎಂದು ಬರೆಸೋಣ’ ಎಂದರು.
ನೋಡಿ ಮೊದಲ ಅನಾವಶ್ಯಕ ಗೊಂದಲ ಮಾಡಿ ರಾಜಕೀಯ ಮಾಡಬೇಡಿ , ಸತ್ಯ ಸಂಗತಿ ಇದ್ದುದು ಹೇಳಿ ,ಮೂಲತ ಲಿಂಗಾಯತ ಧರ್ಮ ಧರ್ಮದವರಾಗಿ, ಬೆರೆ ಹಿಂದೂ ಎಂದು ಯಾಕೆ ಬರಿಯಬೇಕು ?, ನಮ್ಮ ಲಿಂಗಾಯತ ಧರ್ಮಕೆ ಮಾನ್ಯತೆ ಸಿಗಲಿ ಬಿಡಲಿ ,ನಾವು ಅಂತೂ ಅಚೇರಣೆ ಯಿಂದ ಲಿಂಗಾಯತ ರಾಗಿದ್ದೇವೇ, ಲಿಂಗಾಯತ ಬರೆಸಿ ,ಮಾನ್ಯತೆಗೆ ಹೋರಾಟ ಮಾಡಿ ,ಎಲ್ಲರಿಗೂ ನ್ಯಾಯ ಸಿಗುತ್ತದೆ ,
ಜಾತಿಯ ಗಣತಿಯಲ್ಲಿ ನಾವೆಲ್ಲ
” ಲಿಂಗಾಯತ “ಮಾನ್ಯ ಧರ್ಮ ಆಗಿಲ್ಲ ಆದ್ದರಿಂದ >*ಜಾತಿಯ ಹೆಸರಿನಲ್ಲಿನ “ಲಿಂಗಾಯತ”
>*ಉಪಜಾತಿ ಕಾಲಂ ನಲ್ಲಿ
“ಲಿಂಗಾಯತ ಪಂಚಮಸಾಲಿ”+ 00=______
“ಲಿಂಗಾಯತ ಸಾದರು” +00=_______
“ಲಿಂಗಾಯತ ನೋಳಂಬ”+00=_______
“ಲಿಂಗಾಯತ ಕುಂಚಿಟಿಗ”+00=______
“ಲಿಂಗಾಯತ ಬಣಜಿಗ”+00=_______
“ಲಿಂಗಾಯತ ಗಾಣಿಗ “+00=_______
“ಲಿಂಗಾಯತ ಕುಂಬಾರ “+00=_______
“ಲಿಂಗಾಯತ ಜಂಗಮ “+00=_______
“ಲಿಂಗಾಯತ ಅಕ್ಕಸಾಲಿಗ “+00=______
“ಲಿಂಗಾಯತ ಕಮ್ಮಾರ”+00=______
“ಲಿಂಗಾಯತ ಕ್ಷೌರಿಕ “+00=______
“ಲಿಂಗಾಯತ ಭಜಂತ್ರಿ”+00=______
“ಲಿಂಗಾಯತ ಶಿವ ಶಿಲ್ಪಿ “+00=______
“ಲಿಂಗಾಯತ ಅಗಸ “+00=_______
“ಲಿಂಗಾಯತ ನೇಕಾರ”+00=_______
“ಲಿಂಗಾಯತ ವೀರಶೈವ “+00=______
“ಲಿಂಗಾಯತ _______”+00=______
“ಲಿಂಗಾಯತ ________”+00=______
“ಲಿಂಗಾಯತ ________+00=________
“ಲಿಂಗಾಯತ _______+00=________
“ಲಿಂಗಾಯತ 10000000=00”
ಹೆಚ್ಚಿನ ಸಂಖ್ಯೆಯ ಆಧಾರದ ಮೂಲಕ ನಾವೆಲ್ಲ “ಲಿಂಗಾಯತ ಧರ್ಮದ “ಹೋರಾಟ ಸುಲಭ
ನಮ್ಮ ಅಂತಃರಿಕ ಕಲಹ, ಗೊಂದಲ ಜಗಳ, ಭಿನ್ನಮತ ಹಠ ಸ್ವ ಪ್ರತಿಷ್ಠೆಯ ಬಿಟ್ಟು ಮುಂದಿನ ಗುರಿ ನಮ್ಮ ಸಮಾಜದ ಏಳಿಗೆಯ ಬಗ್ಗೆ ಕಾಳಜಿಯಿಂದ
ಮಲ್ಲಿಕಾರ್ಜುನಪ್ಪ HR
ಲಿಂಗಾಯತ ಧರ್ಮ ಮಾನ್ಯತೆ ಪಡೆದಿಲ್ಲದಿದ್ದರೆ ಏನಾಯಿತು? ನಾವು ಲಿಂಗಾಯತ ಧರ್ಮದವರೇ ಆಗಿದ್ದೇವೆ. ನಾವು “ಲಿಂಗಾಯತ” ಎಂದು ಧರ್ಮದ ಕಲಂನಲ್ಲಿ ಬರೆಸಬೇಕು. ಹಾಗೆಯೇ ಜಾತಿ ಕಲಂನಲ್ಲಿ “ಲಿಂಗಾಯತ” ಎಂದೇ ಬರೆಸಬೇಕು. ಉಪಜಾತಿ ಕಲಂನಲ್ಲಿ ನಮ್ಮ “ಉಪಪಂಗಡ” ಬರೆಸಬೇಕು. ಇದರಿಂದ ಲಿಂಗಾಯತರು ಒಗ್ಗಟ್ಟಾಗಲು ಸಾಧ್ಯ ಹಾಗೂ ಲಿಂಗಾಯತ ಧರ್ಮದ ಮಾನ್ಯತೆಗೆ ಅನುವಾಗುತ್ತದೆ.
ಶರಣು ಶತಣಾರ್ಥಿಗಳು
ಏನಾಗಿದೆ ನಿಮಗೆ ಜಯಮೃತ್ಯುಂಜಯ ಸ್ವಾಮಿಗಳೆ ಏನು ನಿಮ್ಮ ಮುಖವಾಡ….ಬಾಯಲ್ಲಿ ಒಂದು ಮನಸ್ಸಿನಲ್ಲಿ ಒಂದು ಇಷ್ಟೊಂದು ಗೊಂದಲದಲ್ಲಿ ಇದ್ದೀರಿ….ನಿಮ್ಮ ಶಿಷ್ಯರಿಗೆ ಹೇಗೆ ಉಪದೇಶ ಕೊಡುತ್ತೀರಿ.
ಬಸವ ಸಂಸ್ಕೃತಿಯವರಾದ ನಾವು ,ಲಿಂಗಾಯತ ಧರ್ಮ ಸಂಸ್ಥಾಪಕ “ಬಸವಣ್ಣ” ನವರ ಅನುಯಾಯಿಗಳು.ಬಸವಣ್ಣ ನಮ್ಮ ಧರ್ಮ ಗುರು – ನಾವು ಲಿಂಗಾಯತರು.
ಕಾರಣ ಮುಂದಿನ ಜಾತಿ ಗಣತಿಯ ಧರ್ಮ ಕಾಲಂನಲ್ಲಿ
ಆಯ್ಕೆಮಾಡಿ ಲಿಂಗಾಯತ ಎಂದು ಬರೆಸೋಣ ಹಾಗೂ ಉಪ ಜಾತಿ ಕಾಲಂ ನಲ್ಲಿ — ಪಂಚಮ,/ ಬಣಜಿಗ/ಗಾಣಿಗ/ ಸಾದರ/ ,,,,, ,, ಇತ್ಯಾದಿ ಬರೊಸೋಣ. ಅಂದಾಗ ಮಾತ್ರ ಲಿಂಗಾಯತ ಸಮುದಾಯದ ಜನಸಂಖ್ಯೆಯ ಈ ಗಣತಿಯಿಂದ ನಿಖರವಾಗಿ ಹೊರತರುವುದು.
ಮತ್ತು ಮುಖ್ಯ ವಾಗಿ ಹಿಂದು/ ವೀರಶೈವ/ ವೀರಶೈವ ಲಿಂಗಾಯತ ಹೀಗೆಲ್ಲ ಗೊಂದಲಕ್ಕೆ ಕಿವಿಗೊಡದೇ “ಲಿಂಗಾಯತ” ಎಂದೋ ಧರ್ಮ ಕಾಲಂನಲ್ಲಿ ಬರೆಸೋಣ. ನಮ್ಮ ಒಗ್ಗಟ್ಟಿನ ಪ್ರದರ್ಶನ ತೋರಿಸೋಣ.
ಹಿಂದು / ವೀರಶೈವರ / ವೀರಶೈವ-ಲಿಂಗಾಯತ
ಒಮ್ಮನವಾದರೆ ಒಡನೆ ನುಡಿವನು, ಇಮ್ಮನವಾದರೆ ನುಡಿಯನು ನುಡಿಯನು ನಮ್ಮ ಕೂಡಲ ಸಂಗಮದೇವರು.
ಧರ್ಮದ ಕಾಲಂ ನಲ್ಲಿ ಇತರ ಎಂದು ಇದೆ. ಇದರ ಮುಂದೆ ಲಿಂಗಾಯತವೆಂದು ಬರೆಯಬೇಕು. ಜಾತಿಯಲ್ಲಿ ಮತ್ತೆ ಲಿಂಗಾಯತವೆಂದು ಬರೆಯಬೇಕೆಂಬ ದ್ವಂದ್ವ ಏಕೆ?
ವಿಶ್ವ ಧರ್ಮವಾಗುವ ಎಲ್ಲ ಅರ್ಹತೆ ಹೊಂದಿರುವ ಬಸವ ಪ್ರಣೀತ ಲಿಂಗಾಯತ ಧರ್ಮವನ್ನು ಇಲ್ಲಿಯವರೆಗು ಜಾತಿಯ ಮಟ್ಟಕ್ಕೆ ಇಳಿಸಿರುವುದಕ್ಕೆ ಕಿಂಚಿತ್ತಾದರೂ ಪಶ್ಚಾತ್ತಾಪ ಬೇಡವೆ?
ಜಾತಿಯ ಮುಂದೆ ಲಿಂಗಾಯತವೂ ಬೇಡ, ವೀರಶೈವವೂ ಬೇಡ, ವೀರಶೈವ ಲಿಂಗಾಯತವೂ ಬೇಡ. ಏಕೆಂದರೆ ಇವು ಯಾವೂ ಜಾತಿಯು ಅಲ್ಲ ವೃತ್ತಿಗಳೂ ಅಲ್ಲ.
ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಡಿದ ಮೃತ್ಯುಂಜಯ ಸ್ವಾಮಿಗಳಿಗೇಕೆ ಹಿಂದೂ ಎನ್ನುವ ನಕಾರಾತ್ಮಕ ಬುದ್ದಿ ಏಕೇಬಂತು?