ಚಿಕ್ಕಮಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ
13Posts
Auto Updates

ಅಭಿಯಾನದ 19ನೇ ದಿನದ ಲೈವ್ ಬ್ಲಾಗ್

ಚಿಕ್ಕಮಗಳೂರು

2 weeks agoSeptember 20, 2025 9:56 pm

ಫೋಟೋಗಳಲ್ಲಿ ಸಂಜೆಯ ಸಮಾವೇಶ

2 weeks agoSeptember 20, 2025 8:42 pm

ಕಲ್ಯಾಣ ಗೀತೆಯೊಂದಿಗೆ ಸಮಾರಂಭ ಮಂಗಲ.

2 weeks agoSeptember 20, 2025 7:42 pm

ಆಶೀರ್ವಚನ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳಿಂದ, ಕೂಡಲಸಂಗಮ ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ಅವರಿಂದ, ಭಾಲ್ಕಿ ಬಸವಲಿಂಗ ಪಟ್ಟದ್ದೇವರಿಂದ, ಡಾ. ಬಸವ ಮರುಳಸಿದ್ದ ಸ್ವಾಮೀಜಿ ಅವರಿಂದ ಆಶೀರ್ವಚನ.

ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಸತ್ಕರಿಸಲಾಯಿತು.

2 weeks agoSeptember 20, 2025 6:58 pm

ಚಿಂತನೆ

ಹಂದಿಗುಂದದ ಶಿವಾನಂದ ಶ್ರೀಗಳಿಂದ ‘ನಾ ದೇವನಲ್ಲದೆ ನೀ ದೇವನೆ’ ವಿಷಯವಾಗಿ ಅನುಭಾವ. ಚಿಂತಕಿ,

ಭದ್ರಾವತಿಯ ಗಂಗಾಂಬಿಕ ಬಸವರಾಜ್ ಅವರಿಂದ ‘ಅರಿದೊಡೆ ಶರಣ ಮರೆದೊಡೆ ಮಾನವ’ ವಿಷಯವಾಗಿ ಅನುಭಾವ.

ಸ್ವಾಗತ ಸಮಿತಿ ಗೌರವಾಧ್ಯಕ್ಷ ಶಾಸಕ, ಎಚ್. ಡಿ. ತಮ್ಮಯ್ಯ ಅವರಿಂದ ಆಶಯ ನುಡಿ.

2 weeks agoSeptember 20, 2025 6:36 pm

ಸಂಜೆಯ ಸಮಾವೇಶ

ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಸಮಾರಂಭ ಆರಂಭ. ಅಕ್ಕನ ಬಳಗದ ಸದಸ್ಯರಿಂದ ಬಸವ ಪ್ರಾರ್ಥನೆ. ಮಹಡಿಮನೆ ಸತೀಶ ಅವರಿಂದ ಸ್ವಾಗತ.

ಹಾಸನದ ಪುಷ್ಪಗಿರಿ ಪೂಜ್ಯರು ನಾಳೆ ನಡೆಯುವ ಹಾಸನ ಅಭಿಯಾನ ಕಾರ್ಯಕ್ರಮಕ್ಕೆ ಸರ್ವರನ್ನು ಆಹ್ವಾನಿಸಿ ಮಾತನಾಡಿದರು. ಪೂಜ್ಯರು, ಗಣ್ಯರು ಬಸವಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟನೆ. ಸ್ವಾಗತ ಸಮಿತಿ ಅಧ್ಯಕ್ಷರಾದ ಬಿ.ಎನ್. ಚಿದಾನಂದ ಅವರಿಂದ ಪ್ರಾಸ್ತಾವಿಕ ನುಡಿ.

2 weeks agoSeptember 20, 2025 9:53 pm

ಫೋಟೋಗಳಲ್ಲಿ ಸಾಮರಸ್ಯ ನಡಿಗೆ

2 weeks agoSeptember 20, 2025 6:53 pm

ಪಾದಯಾತ್ರೆಯಲ್ಲಿ ಐದು ಸಾವಿರ ಜನ

5 ಸಾವಿರಕ್ಕೂ ಹೆಚ್ಚು ಬಸವಾಭಿಮಾನಿಗಳು ಪಾದಯಾತ್ರೆಯಲ್ಲಿ ಇದೇ ಪ್ರಥಮ ಬಾರಿಗೆ ಪಾಲ್ಗೊಂಡು ಚಿಕ್ಕಮಗಳೂರಲ್ಲಿ ಇತಿಹಾಸ ನಿರ್ಮಾಣಗೊಂಡಿದೆ ಎಂದು ಸಮಾರಂಭದಲ್ಲಿ ಘೋಷಿಸಲಾಯಿತು.

ಮೆರವಣಿಗೆಯಲ್ಲಿ 15 ಟ್ರ್ಯಾಕ್ಟರ್ಗಳ, 500 ಬೈಕುಗಳ ಬೃಹತ್ ರ್ಯಾಲಿ ನಡೆಯಿತು. ಪಾದಯಾತ್ರೆಯ ತುಂಬಾ ಎಲ್ಲೆಲ್ಲೂ ಬಸವ ಧ್ವಜಗಳು ಹಾರಾಡಿದವು.

2 weeks agoSeptember 20, 2025 5:05 pm

ಸಾಮರಸ್ಯ ನಡಿಗೆ

ತಾಲೂಕ ಕಚೇರಿ ಆವರಣದಿಂದ ಕಲಾಮಂದಿರದವರೆಗೆ ನಡೆದ ಪಾದಯಾತ್ರೆ.

2 weeks agoSeptember 20, 2025 1:13 pm

ಕಲ್ಯಾಣ ಗೀತೆಯೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಮಂಗಲ.

2 weeks agoSeptember 20, 2025 12:19 pm

ಸಂವಾದದ ಚಿತ್ರಗಳು

2 weeks agoSeptember 20, 2025 11:59 am

ಬಂದ ಪ್ರಶ್ನೆಗಳು

  • ಲಿಂಗಾಯತರಷ್ಟೇ ಏಕೆ ಲಿಂಗಧಾರಣೆ ಮಾಡಬೇಕು?
  • ಬರುವ ಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಏನಂತ ಬರಿಸಬೇಕು?
  • ಅಸಹಾಯಕರ ಕಂಡು ಅಸಹ್ಯಪಡುವ ಜನರ ಬಗ್ಗೆ ಏನು ಹೇಳುತ್ತೀರಿ?
  • ಇಷ್ಟಲಿಂಗ ಎಂದರೇನು?
  • ಲಿಂಗಾಯತರಷ್ಟೇ ಏಕೆ ಲಿಂಗಧಾರಣೆ ಮಾಡಬೇಕು?
  • ಬರುವ ಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಏನಂತ ಬರಿಸಬೇಕು?
  • ಅಸಹಾಯಕರ ಕಂಡು ಅಸಹ್ಯಪಡುವ ಜನರ ಬಗ್ಗೆ ಏನು ಹೇಳುತ್ತೀರಿ?
    ಇಷ್ಟಲಿಂಗ ಎಂದರೇನು?
  • 1008 ಎಂದು ಸ್ವಾಮಿಗಳ ಜೊತೆಗಿರುತ್ತಲ್ಲ ಏನದು?
  • ಶ್ರೀ ಮ.ನಿ. ಪ್ರ. ಎಂದರೇನು?
  • ಇಂದಿನ ದಿನಗಳಲ್ಲಿ ಆಸೆಗಳನ್ನು ಇಟ್ಟುಕೊಳ್ಳುವುದು ತಪ್ಪಾ?
  • ಲಿಂಗಾಯತರ ಮನೆಯಲ್ಲಿ ಬೇರೆಯವರನ್ನು ಬಿಟ್ಟುಕೊಳ್ಳುವುದಿಲ್ಲ ಏಕೆ?
  • ಲಿಂಗದೀಕ್ಷೆ ಪಡೆದು ಲಿಂಗಪೂಜೆ ಮಾಡುವವರು ಅನ್ಯ ದೇವರ ಪೂಜೆ ಮಾಡಬಾರದೇಕೆ?
  • ನಿಜವಾದ ಧರ್ಮ ಯಾವುದು? ಮನುಷ್ಯ ಧರ್ಮಕ್ಕಿಂತ ದೊಡ್ಡದಿದೆಯಾ?
  • ರುದ್ರಾಕ್ಷಿ ಮಹತ್ವವೇನು, ಸ್ವಾಮಿಗಳಷ್ಟೇ ಏಕೆ ಹಾಕಿಕೊಳ್ಳಬೇಕು?
  • ವಿಭೂತಿ ಧಾರಣೆಯ ಮಹತ್ವವೇನು?
  • ವಚನಗಳು ಅನುಭವವೇ, ಅನುಭಾವವೇ?
  • ಶರಣರದು ಅನುಭಾವ ಮಂಟಪವಾಗದೇ, ಅನುಭವ ಮಂಟಪವೇಕೆ?
  • ಏಕಾಗ್ರತೆ ಸಾಧಿಸುವುದು ಹೇಗೆ?
  • ವೈದ್ಯ ಸಂಗಣ್ಣರ ವಚನವೊಂದರ ತ್ರಿಸಂಧಿ ಶಬ್ದದ ಅರ್ಥವೇನು?
  • ಜೈನ, ಬೌದ್ಧ ಧರ್ಮದಂತೆ ‘ಲಿಂಗಾಯತ’ ಸ್ವತಂತ್ರ ಧರ್ಮವಾಗುವುದು ಯಾವಾಗ?
  • ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದರೆ ಧರಿಸುವುದೇಕೆ?
  • ಹೆಣ್ಣಿಗೆ ದೇವಸ್ಥಾನದ ವಿಗ್ರಹ ಮುಟ್ಟುವ ಹಕ್ಕಿಲ್ಲ. ತಾವು ಸ್ವಾಮಿಗಳು ಇದಕ್ಕೆ ಅವಕಾಶ ಕೊಡುತ್ತೀರಾ?
  • ‘ಶರಣರ ಗುಣ ಮರಣದಲ್ಲಿ ಕಾಣು’ ಇದನ್ನು ಯಾವ ರೀತಿ ವ್ಯಾಖ್ಯಾನಿಸಬೇಕು, ಅರ್ಥೈಸಿಕೊಳ್ಳಬೇಕು?
  • ಮರಣವೇ ಮಹಾನವಮಿ ಹೇಗೆ?

2 weeks agoSeptember 20, 2025 11:27 am

ಅಭಿಯಾನಕ್ಕೆ ಚಾಲನೆ

ಬಸವ ಮರುಳಸಿದ್ದ ಸ್ವಾಮೀಜಿ ಅವರಿಂದ ಆಶಯ ನುಡಿಗಳು.

ಪೂಜ್ಯರು ಹಾಗೂ ಗಣ್ಯರಿಂದ ಬಸವ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ.

2 weeks agoSeptember 20, 2025 10:51 am

ಇಂದಿನ ಕಾರ್ಯಕ್ರಮ

ಧ್ವಜಾರೋಹಣ
ಬೆಳಿಗ್ಗೆ 10.30 ಗಂಟೆಗೆ ಶ್ರೀ ಬಸವತತ್ವ ಪೀಠದಲ್ಲಿ ಷಟಸ್ಥಲ ಧ್ವಜಾರೋಹಣ.

ಸಂವಾದ
ಬೆಳಿಗ್ಗೆ 11 ಗಂಟೆಗೆ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ.

ಮೆರವಣಿಗೆ
ಸಂಜೆ 4 ಗಂಟೆಗೆ ಪಾದಯಾತ್ರೆ, ತಾಲೂಕು ಕಚೇರಿ ಆವರಣದಿಂದ ಮಹಾತ್ಮ ಗಾಂಧಿ ರಸ್ತೆಯ ಮೂಲಕ ಕಲಾಮಂದಿರದವರೆಗೆ.

ಬಹಿರಂಗ ಸಭೆ
ಸಂಜೆ 6 ಗಂಟೆಗೆ ಸಾರ್ವಜನಿಕ ಸಮಾರಂಭ, ಕುವೆಂಪು ಕಲಾಮಂದಿರದಲ್ಲಿ.

ನಾಟಕ
ರಾತ್ರಿ 8 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ.

Share This Article
Leave a comment

Leave a Reply

Your email address will not be published. Required fields are marked *