‘ಹಿಂದೂ’ ಎಂದು ಬರೆಸಿದರೆ ಲಿಂಗಾಯತರು ಮತ್ತೆ ಶೂದ್ರರಾಗುತ್ತಾರೆ

ಲಿಂಗಾಯತರು ಇಂದು ವೈದಿಕರ ಗುಲಾಮಗಿರಿ ಮಾಡುವಷ್ಟು ಮುಗ್ದರಾಗಿಲ್ಲ

ಬೆಂಗಳೂರು

ಕರ್ನಾಟಕದಲ್ಲಿ ನಡೆಯಲಿರುವ “ಸಾಮಾಜಿಕ-ಶೈಕ್ಷಣಿಕ” ಜಾತಿಗಣತಿಯ ಧರ್ಮದ ಕಾಲಮ್ಮಿನಲ್ಲಿ (ಕಾಲಂ ೮: ಕ್ರಮಸಂಖ್ಯೆ ೯) ಬಸವಾನುಯಾಯಿಗಳು “ಲಿಂಗಾಯತ” ಎಂದು ಬರೆಸಲು ತೀರ್ಮಾನಿಸಿದ್ದಾರೆ.

ಇದೊಂದು ಚಾರಿತ್ರಿಕ ಘಟನೆಯಾಗಿದೆ. ಇದು ಬಸವ ಸಂವಿಧಾನಕ್ಕೆ ಲಿಂಗಾಯತರು ನೀಡುತ್ತಿರುವ ಗೌರವವಾಗಿದೆ. ಏಕೆಂದರೆ ಬಸವ ಸಂವಿಧಾನವನ್ನು ಒಪ್ಪಿದವರು ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನವನ್ನು ಒಪ್ಪಿದಂತೆ: ಭಾರತ ಸಂವಿಧಾನವನ್ನು ಒಪ್ಪಿದವರು ಬಸವ ಸಂವಿಧಾನವನ್ನು ಒಪ್ಪಿದಂತೆ. ಬಸವ ಸಂವಿಧಾನವನ್ನು ಒಪ್ಪದವರು ಡಾ. ಬಿ. ಆರ್. ಭಾರತ ಸಂವಿಧಾನದ ವಿರೋಧಿಗಳು.

ಬಸವ ಸಂವಿಧಾನದ ಮೂಲ ಸಿದ್ಧಾಂತವು ಸಮಾನತೆ: ಭಾರತ ಸಂವಿಧಾನದ ಮೂಲ ಪ್ರಣಾಳಿಕೆಯೂ ಸಮಾನತೆ ಮತ್ತು ಮಾನವ ಹಕ್ಕುಗಳು.

ಈ ಹಿನ್ನೆಲೆಯಲ್ಲಿ ರಾಜ್ಯದ ಲಿಂಗಾಯತರಿಗೆ ಕೆಲವು ರಾಜಕೀಯ ನಾಯಕರು ಮತ್ತು ಸನಾತನ ವೀರಶೈವರು ಜಾತಿಗಣತಿಯಲ್ಲಿ ‘ಹಿಂದೂ’ ಎಂದು ಬರೆಸಬೇಕು ಎಂದು ಕರೆ ಕೊಡುತ್ತಿದ್ದಾರೆ. ಇಲ್ಲಿನ ಸೈದ್ಧಾಂತಿಕ ವಿಪರ‍್ಯಾಸವನ್ನು ಗಮನಿಸಬೇಕು.

“ಹಿಂದೂ’ ಎಂಬುದು ಮೂಲತಃ ಚಾತುರ್ವರ್ಣ ಪ್ರಣೀತವಾದುದು. ಈ ಜಾತುರ್ವರ್ಣದಲ್ಲಿ ಲಿಂಗಾಯತರಿಗೆ ಜ್ಞಾನದ ಗುತ್ತಿಗೆ ಹಿಡಿದ ಮೊದಲ ವರ್ಣ ಬ್ರಾಹ್ಮಣ ವರ್ಣದಲ್ಲಿ ಸ್ಥಾನವಿಲ್ಲ. ಅವರಿಗೆ ‘ಇರಿದು ಮೆರೆಯುವ’ ಕ್ಷತ್ರಿಯ ವರ್ಣದಲ್ಲಿ ಜಾಗವಿಲ್ಲ; ಅದೇ ರೀತಿಯಲ್ಲಿ ವ್ಯಾಪಾರ-ವ್ಯವಹಾರ ಮಾಡುವ ವೈಶ್ಯ ವರ್ಣದಲ್ಲಿಯೂ ಸ್ಥಾನವಿಲ್ಲ.

ಈ ಮೂರು ವರ್ಣಗಳು “ದ್ವಿಜ” ವರ್ಣಗಳು. ಆದ್ದರಿಂದ “ಪುರುಷ”ನ ಪಾದದಲ್ಲಿ ಜನಿಸಿದ ಶೂದ್ರ ವರ್ಣದಲ್ಲಿ ಲಿಂಗಾಯತರು ಸೇರಬೇಕಾಗುತ್ತದೆ. ಈ ಚಾತುರ್ವರ್ಣ ಶೂದ್ರರಿಗೆ ಜ್ಞಾನದ ಮೇಲೆ ಹಕ್ಕಿಲ್ಲ. ಅಕ್ಷರದ ಮೇಲೆ ಹಕ್ಕಿಲ್ಲ. ವೇದಗಳನ್ನು ಶೂದ್ರರು ಪಠಿಸುವಂತಿಲ್ಲ. ಅವರು ಮೊದಲ ಮೂರು ವರ್ಣಗಳ “ಸೇವೆ’ಯನ್ನು ಮಾಡುವ ಹಕ್ಕನ್ನು ಮಾತ್ರ ಹೊಂದಿದವರಾಗಿರುತ್ತಾರೆ.

ಲಿಂಗಾಯತರು ಏಕೆ ಶೂದ್ರರಾಗಬೇಕು? ಅವರಿಗೆ ಜ್ಞಾನದ ಹಕ್ಕನ್ನು ನಿರಾಕರಿಸುವ ಅಧಿಕಾರವನ್ನು ಚಾತುರ್ವರ್ಣಕ್ಕೆ ಕೊಟ್ಟವರಾರು?

ಚಾತುರ್ವರ್ಣ ಪ್ರಣೀತ ಹಿಂದೂ ಧರ್ಮದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾದ “ಧಾರ್ಮಿಕ, ಆರ್ಥಿಕ, ಶೈಕ್ಷಣಿಕ” ಹಕ್ಕುಗಳಿಗೆ ಅನರ್ಹರು. ಅವರು ಸದಾ ಮೈಲಿಗೆ. ಇಂತಹ ಧರ್ಮಕ್ಕೆ ಬಸವ ಪ್ರಣೀತ ಲಿಂಗಾಯತರು ಏಕೆ ಸೇರಬೇಕು? ಮಹಾ ಅಸಮಾನತೆಯ, ಮಹಾವಿಧ್ವಂಸಕಾರಿಯಾದ ಹಾಗೂ ಸಮಾಜದಲ್ಲಿ ಮಹಾಶ್ರೇಣಿಯತೆಯನ್ನು ಪ್ರತಿಪಾದಿಸುವ ಚಾತುರ್ವರ್ಣ ವ್ಯವಸ್ಥೆಗೆ ಸರ್ವತಂತ್ರ ಸ್ವತಂತ್ರರಾದ ಲಿಂಗಾಯತರು ಏಕೆ ಸೇರಬೇಕು?

ಈ ವಿಷಮತೆಯನ್ನು ಅರ್ಥ ಮಾಡಿಕೊಳ್ಳಲಾರದ “ಕುಂಕುಮಧಾರಿ” ಸನಾತನಿಗಳು ಸ್ವಾಭಿಮಾನವನ್ನು ಮೂಲೆಗೆ ತಳ್ಳಿ “ಅಧಿಕಾರ”, “ಹಣ”, “ಅಂತಸ್ತು”ಗಳಿಗೆ ಗುಲಾಮರಾಗಿ ಜಾತಿಗಣತಿಯಲ್ಲಿ ಲಿಂಗಾಯತರು “ಹಿಂದೂ” ಎಂದು ಬರೆಸಬೇಕು ಎಂಬ ಠರಾವು ಹೊರಡಿಸುತ್ತಿದ್ದಾರೆ.

ಇಂದು ಲಿಂಗಾಯತರು ಇಟ್ಟಿಗೆ ಹೊರುವ ಮುಗ್ದರಾಗಿ ಉಳಿದಿಲ್ಲ.

ಪಾದಪೂಜೆ, ಪಾದ ಸೇವೆಯನ್ನು ದಿಕ್ಕರಿಸಿದವರು ಲಿಂಗಾಯತರು. ಅವರು ಜ್ಞಾನದ ಹಕ್ಕುದಾರರಾಗಿದ್ದಾರೆ. ಅವರು ಯಾರ ಪಾದದ ನೆಲೆಯಿಂದ ಮೂಡಿದವರಲ್ಲ. ಜಾತಿಗಣತಿಯಲ್ಲಿ ಲಿಂಗಾಯತರು “ಹಿಂದೂ’ ಎಂದು ಬರೆಸಬೇಕು ಎನ್ನುವವರು ಚಾತುರ್ವರ್ಣ ಪ್ರಣೀತ “ವೈದಿಕರ” ಗುಲಾಮರಾಗಿರಲಿ. ಲಿಂಗಾಯತರಿಗೆ ಅಂತಹ ಸ್ಥಿತಿಯಿಲ್ಲ.

ಬಸವ ಪ್ರಣಿತ ಲಿಂಗಾಯತರು “ವೇದಕ್ಕೆ ಒರೆಯ ಕಟ್ಟಿದವರು”, ಬಸವ ಪರಿಭಾಷೆಯಲ್ಲಿ ಹೇಳುವುದಾದರೆ “ವಿಪ್ರಬಲೆ”ಯನ್ನು ಪುಡಿಪುಡಿ ಮಾಡಿದವರು. “ನ್ಯಾಯ ನಿಷ್ಠರಿಗಳು”. ಲಿಂಗಾಯತರು ಯಾರಿಗೂ ಅಂಜುವವರಲ್ಲ. ಏಕೆಂದರೆ ಅವರು ಕೂಡಲಸಂಗಮದೇವರ ರಾಜತೇಜದಲ್ಲಿದ್ದಾರೆ.

ನೀವು ಬೇಕಾದರೆ ದ್ವಿಜವರ್ಣಗಳ, ಸನಾತನಿಗಳ ಗುಲಾಮರಾಗಿರಿ. ನಾವು ಸರ್ವತಂತ್ರ ಸ್ವತಂತ್ರ ಸ್ವಾಭಿಮಾನಿ ಸಮಾನತಾ ಲಿಂಗಾಯತ ಧರ್ಮದ ಕಟ್ಟಾಳುಗಳು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
12 Comments
  • 🙏🙏ಶರಣ ಬಂದುಗಳೆ
    ನಾನು ಸತ್ಯಶುದ್ಧ ಕೃಷಿ ಕಾಯಕದಿಂದ ಸತ್ಯಮಾರ್ಗದಿಂದ ಬಸವ ತತ್ವನಿಷ್ಟನಾಗಿದ್ದೇನೆ
    ಬಸವ ತತ್ಪ ಸಿದ್ಧಾಂತವಿರುವುದು ಮೂಲತ ಮಾನವ ಅರಿವು ಸದಾಚರ ನಡೆನುಡಿಸಿದ್ದಾಂತದ ಮೂಲಕ
    ಅಂತರಂಗ ಬಹಿರಂಗದಲ್ಲಿ ಒಂದೆಯಾಗಿ ನಮ್ಮ ಇಬದುಕಿನಲ್ಲಿಯೇ ಲೌಕಿಕ ಪಾರಮಾರ್ಥ ಸಾದಿಸಿ ಸಂತೋಷ ಹಾಗೂ ನೆಮ್ಮದಿಯ ಬದುಕು ಸಾಗಿಸುವುದು
    ಸ್ಪರ್ಗ ನರಕ ಇಲ್ಲಿಯೇ ಕಾಣವುದು
    ಬಸವ ತತ್ವ ನಿಂತ ನೀರಲ್ಲ ಅತ್ಯಂತ ಚಲನಶೀಲ ಜಂಗಮತ್ವ
    ಕೇವಲ ಇತಿಹಾಸದ ಹಿಂದುಧರ್ಮ ವಿರೋಧಿಸದೆ ಸಕಾಲದಲ್ಲಿ ಯಾವುದು ಅವಶ್ಯಕ ಅವರಂತೆ ನಡೆವುದು
    ಪ್ರತಿಯೊಬ್ಬ ಬಸವಾನುಯಾಯಿ ಲಿಂಗಾಯತನೆ
    ಧರ್ಮದ ಮಾನ್ಯತೆ ಸಿಕ್ಕಮೇಲೆ ಎಲ್ಲಾ ಸರಿಯಾಗುತ್ತದೆ
    🙏🙏

    • ಇದು ಕರ್ನಾಟಕ ಸರ್ಕಾರದ ಸಮೀಕ್ಷೆ
      ಈಗಾಗಲೇ ಕರ್ನಾಟಕ ಸರ್ಕಾರ ಲಿಂಗಾಯತಕ್ಕೆ ಧರ್ಮದ ಮಾನ್ಯತೆ ನೀಡಿಯಾಗಿದೆ ಅದನ್ನು ಕೇಂದ್ರಕ್ಕೆ ಅನುಮತಿಗಾಗಿ ಕಳಿಸಲಾಗಿದೆ
      ದಯವಿಟ್ಟು ಧರ್ಮ ಕಾಲಮ್ನಲ್ಲಿ ಲಿಂಗಾಯತ ಜಾತಿ ಕಾಲಮ್ನಲ್ಲಿ ನಮ್ಮ ಮೂಲ ಕಾಯಕ (ಬಡಿಗ ಕುಂಬಾರ,…) ಬರೆಸಿ ಇವುಗಳೇ ಜಾತಿಯಾಗಿರುವದು ದುರಂತ

  • ಇದು ಕರ್ನಾಟಕ ಸರ್ಕಾರದ ಸಮೀಕ್ಷೆ
    ಈಗಾಗಲೇ ಕರ್ನಾಟಕ ಸರ್ಕಾರ ಲಿಂಗಾಯತಕ್ಕೆ ಧರ್ಮದ ಮಾನ್ಯತೆ ನೀಡಿಯಾಗಿದೆ ಅದನ್ನು ಕೇಂದ್ರಕ್ಕೆ ಅನುಮತಿಗಾಗಿ ಕಳಿಸಲಾಗಿದೆ
    ದಯವಿಟ್ಟು ಧರ್ಮ ಕಾಲಮ್ನಲ್ಲಿ ಲಿಂಗಾಯತ ಜಾತಿ ಕಾಲಮ್ನಲ್ಲಿ ನಮ್ಮ ಮೂಲ ಕಾಯಕ (ಬಡಿಗ ಕುಂಬಾರ,…) ಬರೆಸಿ ಇವುಗಳೇ ಜಾತಿಯಾಗಿರುವದು ದುರಂತ

    • Absolutely 💯 Sir for putting it loud and clear. We should not be referred as Hindus. We are Lingayats, staunch believer of Basava Tatva and lead a life of equality and social justice and dignity for all. We should have Religion, Caste and Sub caste as only Lingayat. Innocent people are so brainwashed and lured with the power of money that they are inclined towards calling as Hindus. Lingayats for long have enjoyed the status of dignity, but if they chose to be Hindus then as rightly said they will be treated like a piece of s**t. They will be reduced to only vote bank, devoid of opportunities. Look what Yogi is doing in UP, for 57 government openings in a cooperative bank, he has filled 53 seats from the Brahmins, Kshatriya, Vaishyas and from family members affiliation with the government. Only 4 lower hierarchy jobs were given to SC/ST. It’s a two day old story. Our Lingayats need massive awareness session for not reduced to such menials.

    • ಜಾತಿ ಕಲಂಲ್ಲಿ ಲಿಂಗಾಯತ
      ಧರ್ಮದ ಕಲಂಲ್ಲಿ ಲಿಂಗಾಯತ ಬರೆಸಿದರೆ ಸರಿಯೇ? ತಜ್ಞರು ಪ್ರಾಜ್ಞರು ದೃಡಿಕರಿಸಿ🙏🙏

  • 🙏🙏 ಶರಣ ಬಂದುಗಳೆ
    ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರವಿಲ್ಲ ಎಂದು ಅನೇಕ ತಜ್ಞರು ಪರಿಣಿತರು ಹೇಳಿಕೆ ನೀಡಿದ್ದಾರೆ
    ಆದರೂ ಸಾಮಾಜಿಕ ಆರ್ಥಿಕ ಸಮೀಕ್ಷೆಯ ಹೆಸರಲ್ಲಿ ಜಾತಿಗಣತಿ ನಡೆಸಲಾಗುತ್ತಿದೆ
    ನಾನು ಇದರಲ್ಲಿ ವಿಷೇಷ ಜ್ಞಾನವೇನು ಇಲ್ಲ ಆದರೆ ಅನೇಕ ವರ್ಷಗಳಿಂದ ಇದೊಂದ ಹಳೆಯ ವರದಿಯಿಂದ ಬರಿ ಗೊಂದಲ ಉಂಟಾಗುತ್ತಿದೆ
    ಲಿಂಗಾಯತರು ಎಷ್ಟಿದ್ದಾರೆ ಎನ್ನುವ ಸತ್ಯಬೇಕು
    ಉಪಜಾತಿಯಲ್ಲಿ ತಮ್ಮ ಉಪಜಾತಿ
    ಜಾತಿ ಕಲಂಲ್ಲಿ ಎಲ್ಲರು ಲಿಂಗಾಯತ ಎಂದು
    ಧರ್ಮದ ಕಲಂ ಅವರವರ ಉವೇಚನೆಗೆ ಬಿಟ್ಟರೆ ಒಳ್ಳೆಯದು ಎಂದು ನನ್ನ ಅನಿಸಿಕೆ
    ಒಟ್ಟಾರೆ ನೈಜ ಲಿಂಗಾಯತರ ಸಂಖ್ಯೆ ಸತ್ಯಕ್ಕೆ ಹತ್ತಿರವಿರಬೇಕು 🙏🙏

    • ವಿಶ್ವಗುರು ಬಸವಣ್ಣನವರು ಧರ್ಮಗುರು, ಲಿಂಗಾಯತ ಧರ್ಮ ಸ್ಥಾಪಕರು.
      ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಇದು ಐತಿಹಾಸಿಕ ಸತ್ಯ . ವಚನ ಸಾಹಿತ್ಯ ಧರ್ಮಸಹಿತೆ. ವೀರಶೈವ ಅವೈಜ್ಞಾನಿಕ ಪೌರಾಣಿಕವಾಗಿರುವ ವಿಷಯವನ್ನು ಪ್ರಸ್ತಾಪಿಸುತ್ತದೆ. ಐತಿಹಾಸಿಕ ದಾಖಲೆಗಳಿಲ್ಲ. ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ನಮ್ಮದೇ ಎಂದು ಹೇಳುತ್ತಾ. ಎಲ್ಲ ೭೭೦ ಶರಣರು ವಚನ ಸಾಹಿತ್ಯದ ಮುಖಾಂತರ ಯಾವುದನ್ನು ಬಹಿಷ್ಕರಿಸಿದರು, ಅದನ್ನ ನೇ ಪಾಲಿಸುವ ವೀರಶೈವ ಒಂದು ಪಂತ, ಶೈವದ ಶಾಖೆ ಮಾತ್ರ. ಎಲ್ಲವನ್ನು ಕಳೆದುಕೊಳ್ಳುತ್ತೇವೆ ಎಂದು ಗೊತ್ತಾದಾಗ ವೀರಶೈವಾದಿಗಳು, ರಾಜಕಾರಣಿಗಳು ಮುಖವಾಡ ಧಾರಿಗಳು. ಲಿಂಗಾಯತರನ್ನು ಹಿಂದೂ ಮತ್ತು ವೀರಶೈವದ ಗುಲಾಮರನ್ನಾಗಿ ಮಾಡುತ್ತಿದ್ದಾರೆ.

      *ಹಿಂದೂ ಸಮಾಜವೆಂದು ನಾವೆಲ್ಲರೂ ಒಂದೇ.*

      ಹಿಂದೂ ಒಂದು ಮಹಾನ ಸಂಸ್ಕೃತಿ ಎಂಬ ತಾಯಿ.
      ಆ ಸಂಸ್ಕೃತಿಯನ್ನು ಅಡಕವಾಗಿಟ್ಟುಕೊಂಡು ಹುಟ್ಟಿರುವ ಧರ್ಮಗಳೇ ಅದರ ಮಕ್ಕಳು.
      ಆ ಹಿಂದೂ ಸಂಸ್ಕೃತಿ ರೂಪ ತಾಯಿಯ ಜೊತೆ ಭಾರತೀಯ ಜನ್ಶ ಧರ್ಮಗಳು “ಓಂ”ಕಾರವೆಂಬ ಕರುಳಿನ ರೂಪದಲ್ಲಿ ಜೋಡಿಸಲ್ಪಟ್ಟಿವೆ.
      ಅದು ಯಾವಾಗಲೂ ಹಾಗೆ ಇರುತ್ತದೆ.

      ಜಗತ್ತಿನ ಸಂಸ್ಕೃತಿಯಲ್ಲಿ ಒಂದೆರಡು ಧರ್ಮಗಳಷ್ಟೇ ಜಗತ್ತನ್ನು ವ್ಯಾಪಿಸಿವೆ.

      ಆದರೆ ಹಿಂದೂ ಸಂಸ್ಕೃತಿಯು ಒಂದು ವಟವ್ರಕ್ಷ್ಯವಿದ್ದಂತೆ. ಅದನ್ನು ಯಾರು ಅಲ್ಲಾಡಿಸಲು ಆಗುವುದಿಲ್ಲ.

      ಹಿಂದೂವನ್ನು ನೀವು ಸ್ವತಂತ್ರ ಧರ್ಮ ಎಂದು ಪರಿಗಣಿಸಿದರೆ, ಈಗಾಗಲೇ ಭಾರತ ಸರ್ಕಾರದಿಂದ ಧರ್ಮವೆಂದು ಮಾನ್ಯತೆ ಪಡೆದ ಜೈನ್, ಶಿಖ, ಬೌದ್ಧ, ಮುಂತಾದವು ಹೊರಗೆ ಹೋಗುತ್ತವೆ.
      ಆಗ ಹಿಂದೂ ಧರ್ಮದ ಸಂಖ್ಯೆ ಕಡಿಮೆಯಾಗುವುದಿಲ್ಲವೆ. ಆದರೆ ಲಿಂಗಾಯಿತರಿಗಷ್ಟೇ ಏಕೆ ಬೇರೇ ನ್ಯಾಯ…

      ಅದಕ್ಕಾಗಿ ಸರಿಯಾಗಿ ತಿಳಿದುಕೊಳ್ಳಿ. ಸುಪ್ರೀಂ ಕೋರ್ಟ್, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ, ಏನು ಹೇಳಿದ್ದಾರೆ ನೋಡಿ. ಲಿಂಕ್ ಕೊಡುತ್ತಿದ್ದೇನೆ.
      https://youtube.com/clip/UgkxOiJ_h6OFEdF0jQdpozWPQHcrLojEgpzf?feature=shared. माननीय पंतप्रधान नरेंद्र मोदींचे वक्तव्य हिंदू एक वे ऑफ लाईफ…

  • 🙏🙏ಶರಣ ಬಂದುಗಳೆ
    ಬಸವ ತತ್ಪ ಸಿದ್ಧಾಂತ ಇಂದು ವಿಶ್ವವ್ಯಾಪಿಯಾಗಿದೆ
    ಯಾರು ಭಾವಚಿತ್ರ ಹಾಕಿದರೆಷ್ಟು ಬಿಟ್ಟರೆಷ್ಟು
    🙏🙏

    • ಅಣ್ಣ ಬಸವಣ್ಣ ನವರು ಹುಟ್ಟುಹಾಕಿದ ಧರ್ಮ ಲಿಂಗಾಯತ ಧರ್ಮ. ಇದನ್ನು ಒಪ್ಪುವವರೆಲ್ಲರೂ ಲಿಂಗಾಯತರೇ. ಕೆಲವು ವೀರಶೈವರ ಬರಹ, ಮಾತುಗಳಿಗೆ ಕಿವಿಗೊಡದೇ ಲಿಂಗಾಯತರೆಲ್ಲರೂ
      ಧರ್ಮ ಕಾಲಂ ನಲ್ಲಿರುವ “ಇತರ” ರು ಎದುರಿಗೆ ಲಿಂಗಾಯತ ಎಂದು ಬರೆಸೋಣ ಹಾಗೂ ಉಪಜಾತಿ ಯಲ್ಲಿ ನಮ್ಮ ನಮ್ಮ ಪಂಚಮ,ಬಣಜಿಗ, ಪಂಚಮಸಾಲಿ, ಗಾಣಿಗ, ಹಡಪದ,ಮುಂತಾದ ಉಪಜಾತಿ ಬರೆಸೋಣ.

  • ಸತ್ಯ ಮತ್ತು ಸಮರ್ಪಕವಾದ ವಿಚಾರವನ್ನ ಚಂದ್ರಣ್ಣನವರು ಹೇಳಿದ್ದಾರೆ

  • ಕೇಂದ್ರ ಸರ್ಕಾರದ ಜಾತಿ ಗಣತಿ ಎಂಬುದು ಹಿಂದುತ್ವವಾದಿಗಳ ಗಣತಿ ಅದರಲ್ಲಿ ಲಿಂಗಾಯತರನ್ನೂ ಸಮೂಹಸನ್ನಿಗೊಳಿಸಿ ಪ್ರತ್ಯೇಕ ಧರ್ಮವಾದ ಲಿಂಗಾಯತರನ್ನು ಹಿಂದು ಲಿಂಗಾಯತರನ್ನಾಗಿ ಮಾಡುವ ಹುನ್ನಾರ ದಟ್ಟವಾಗಿ ಅಡಗಿರುವಂತಹದು. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರದಿದ್ದಿದ್ದರೆ ಆಗಲೇ ಸುಪ್ರೀಂ ಕೋರ್ಟಿನಿಂದ ಸ್ಟೇ ತರತಿದ್ರು. ಹಾಗಾಗಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರ ಬಳಸಿಯೇ ಇದನ್ನ ಮಾಡ್ತಿರುವದು

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು