ಮುಂಡರಗಿ
ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ ಶ್ರೀಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ಬಾಮಿಗಳ ಬಗ್ಗೆ ಹಗುರವಾಗಿ ಬಾಯಿ ಹರಿಬಿಟ್ಟದ್ದನ್ನು ಭಕ್ತರು ತೀವ್ರವಾಗಿ ಖಂಡಿಸಿದರು.
ಸೋಮವಾರ ಸಂಜೆ ಜಗದ್ಗುರು ತೋಂಟದಾರ್ಯ ಮಠದಲ್ಲಿ ಶ್ರೀ ಮಠದ ಭಕ್ತರ ಸಭೆ ನಡೆಯಿತು.
ಸಭೆಯಲ್ಲಿ ಮುಖಂಡ ಪಾಲಾಕ್ಷಿ ಗಣದಿನ್ನಿ ಮಾತನಾಡಿ, ಬಸವಾದಿ ಶರಣರ ತತ್ವಾದರ್ಶಗಳನ್ನು ನಿಜಗುಣಾನಂದ ಶ್ರೀಗಳು ನಾಡಿನಾದ್ಯಂತ ಭಿತ್ತರಿಸುತ್ತಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಕಂದಾಚಾರ, ಮೇಲು ಕೀಳು ಹೋಗಲಾಡಿಸುವಲ್ಲಿ, ವೈಚಾರಿಕತೆ ಬೆಳಸುವಲ್ಲಿ ಶ್ರೀಗಳ ಶ್ರಮವನ್ನು ಪರಿಗಣಿಸದೆ ಅವಾಚ್ಯ ಶಬ್ದಗಳಿಂದ ಯತ್ನಾಳರು ನಿಂದಿಸಿರುವದು ಖೇದಕರ ಮತ್ತು ಖಂಡನಾರ್ಹವೆಂದರು.
ಹೀಗೆ ತನ್ನ ನಾಲಿಗೆಯನ್ನು ಹರಿಬಿಟ್ಟರೆ ಮುಂದಿನ ದಿನಗಳಲ್ಲಿ ಯತ್ನಾಳ ಪಾಟೀಲರ ವಿರುದ್ಧ ತೀವ್ರ ಹೋರಾಟ ಮಾಡಲಾಗುವದು ಎಂದರು.
ಕೊಟ್ರೇಶ ಅಂಗಡಿ ಅವರು ಮಾತನಾಡಿ, ಪಾಟೀಲರು ತಮ್ಮ ಅಜ್ಞಾನದ ಮಾತುಗಳಿಂದ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರಲ್ಲವೆಂದು ಹೇಳಿದ್ದನ್ನು ಖಂಡಿಸಿದರು.
ದೇವು ಹಡಪದ ಹಾಗೂ ಪುಷ್ಪ ಶಿರಿ ಸಹ ಮಾತನಾಡಿ ಯತ್ನಾಳ ನಿಂದನೆಯ ವರ್ತನೆ ಖಂಡಿಸಿದರು.
ಶ್ರೀಮಠದ ಭಕ್ತಾಧಿಗಳು ಉಪಸ್ಥಿತರಿದ್ದು ಯತ್ನಾಳರ ಟೀಕೆಯನ್ನು ಒಮ್ಮತದಿಂದ ವಿರೋಧಿಸಿದರು.
ಶಿವಯೋಗಿ ಕೊಪ್ಪಳ, ಎಚ್. ವಿರೂಪಾಕ್ಷಗೌಡ್ರ, ಬಸನಗೌಡ್ರ ಪಾಟೀಲ, ಅಶೋಕ ಹುಬ್ಬಳ್ಳಿ, ಶರಣಪ್ಪ ಕುಬಸದ, ಸದಾಶಿವಯ್ಯ ಕಬ್ಬೂರಮಠ, ಸುಖನ್ಯಾ ಕಬ್ಬೂರಮಠ, ಪ್ರಭಾವತಿ ಕುಬಸದ, ಅನ್ನಕ್ಕ ಸಜ್ಜನರ, ಶಿವಗಂಗಾ ನವಲಗುಂದ, ಶಾಂತಾ ಕುಬಸದ, ಗಾಯತ್ರಿ ಹಿರೇಮಠ, ಗೀತಾ ಬೆಳವಟಿಗಿಮಠ, ಶಾರದಾ ಹಳ್ಳಿಗುಡಿ, ವಿಜಯಲಕ್ಷ್ಮಿ ಹೂಗಾರ, ಉಮಾ ಕೊಪ್ಪಳ, ಮತ್ತಿತರರು ಭಾಗವಹಿಸಿದ್ದರು.
ಶಿವಯೋಗಿ ಗಡ್ಡದ ಸ್ವಾಗತಿಸಿ ಎಲ್ಲರಿಗೂ ವಂದಿಸಿದರು.
ಯತ್ನಾಳ್ ಮೊದಲು ಬಸವಣ್ಣನವರ ಬಗ್ಗೆ ಕೀಳಾಗಿ ಮಾತನಾಡಿದ, ನಮ್ಮ ಅಸ್ಮಿತೆ ಬಗ್ಗೆ ಕೀಳಾಗಿ ಮಾತನಾಡಿದ , ಈಗ ನಮ್ಮ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡ್ತಾ ಇದಾನೆ, ಅವನಿಗೆ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಮತ್ತು ಸಮಸ್ತ ಲಿಂಗಾಯತರಿಂದ ಒಕ್ಜೊರಲಿನ ಎಚ್ಚರಿಕೆ ಕೊಡಬೇಕು , ವಿಜಯಪುರ ಬಂದ್ ಮಾಡಿ ಮನೆಗೆ ಮುತ್ತಿಗೆ ಹಾಕಿ ಎಚ್ಚರಿಕೆ ಕೊಡಬೇಕು, ಆ ತಾಕತ್ರು ನಮಗಿದೆ .
ಈ ಆಸಾಮಿ ಮಿತಿಮೀರಿ ಮಾತನಾಡುತ್ತದ್ದಾನೆ. ಒಬ್ಬ ಲಿಂಗಾಯತನಾಗಿ ಧರ್ಮಗುರು ಬಸವೇಶ್ವರರ ಬಗ್ಗೆ ಅವಹೇಳನ ಮಾಡುತ್ತಿರುವದು ತನ್ನ ಅವನತಿ ತಾನೇ ತಂದುಕೊಂಡಂತೆ. ಇದಕ್ಕೆ ಒಂದೇ ದಾರಿ ಜಾ. ಲಿ. ಮ ಮತ್ತು ಮಠಾಧಿಪತಿಗಳ ವಕ್ಕೂದಿಂದ ಅವರ ಮನೆಗೆ ಮುತ್ತಿಗೆ ಹಾಕಿ ಛೀಮಾರಿ ಹಾಕುವದು. ಜಾ. ಲಿ. ಮ ಬಹಿರಂಗ ಪತ್ರಿಕಾ ಹೇಳಿಕೆ ನೀಡಿ ಎಚ್ಚರಿಕೆ ಕೊಡಬೇಕು. ರಾಷ್ಟ್ರೀಯ ಬಸವದಳ ಯಾಕೋ ಸುಮ್ಮನೆ ಕೂತಂತಿದೆ. ಅವರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಛೇಡಿಸಬೇಕು.