ಬಸವಕಲ್ಯಾಣ
ಮಹಿಳೆಯಲ್ಲಿ ಅದ್ಬುತ ಶಕ್ತಿ ಇದೆ. ಕಚೇರಿ ಕೆಲಸಗಳ ಜೊತೆ ಕುಟುಂಬವನ್ನು ಮುನ್ನಡೆಸುತ್ತಾರೆ. ಹೆಣ್ಣು ದೇಶದ ಕಣ್ಣು ಎಂದು ತುಮಕೂರು ಸಿದ್ಧಗಂಗಾ ಆಸ್ಪತ್ರೆಯ ಕಾರ್ಯಾಚರಣೆ ವ್ಯವಸ್ಥಾಪಕರು ಮತ್ತು ಪ್ರಾಧ್ಯಪಕರಾದ ಡಾ. ಜಿ. ಬಿ. ರೂಪಾ ನುಡಿದರು.
ಅವರು ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಮೂರನೇ ದಿನ ಬುಧವಾರ ಮಹಾಶಕ್ತಿ ಕೂಟಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಹಿಳೆ ಜಾಗೃತಿಯಾಗಿ ನನ್ನಲಿ ಶಕ್ತಿಯಿದೆ ಎಂದು ತಿಳಿದರೆ ಅಸಾಧ್ಯವಾದುದ್ದನ್ನು ಸಾಧಿಸಬಹುದು.
ಅಸಾಧ್ಯವೆಂಬುದು ಮಹಿಳೆಯ ಶಬ್ದಕೋಶದಲ್ಲಿಲ್ಲ. ನಮ್ಮನ್ನು ನಾವು ಮೊದಲು ಅರಿತು ಕೊಳ್ಳಬೇಕು. ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ, ಚಿಕ್ಕ ಚಿಕ್ಕ ಸಾಧನೆಗಳಿಗೆ ಸಂಭ್ರಮಿಸಬೇಕು ವಚನಗಳನ್ನು ಪಸರಿಸಬೇಕು. ಆಡುವ ಮಾತುಗಳಲ್ಲಿ ಸಕಾರಾತ್ಮಕವಾಗಿರಬೇಕು.
ನಮ್ಮ ಮಕ್ಕಳಿಗೆ ಆಸ್ತಿ, ಒಡವೆ, ಮನೆ ಎಲ್ಲಾ ಲೆಕ್ಕವನ್ನು ಕೊಡುತ್ತೇವೆ. ಅದರ ಜೊತೆ ಸಂಸ್ಕೃತಿಯ ಲೆಕ್ಕವನ್ನು ಕೊಡಬೇಕು. ಇಂಥ ಕಾರ್ಯಕ್ರಮಕ್ಕೆ ನಮ್ಮ ಮಕ್ಕಳನ್ನು ಕರೆತರಬೇಕು. ಅದರಲ್ಲಿನ ಒಂದು ಶಬ್ದವಾದರೂ ಅವರು ಕಲಿತರೆ ವಚನಕಾರರ ಆಶಯಗಳು ಈಡೇರುತ್ತವೆ ಎಂದರು.

ಸಾನಿಧ್ಯ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿದೆ. ಪ್ರಕೃತಿಯನ್ನು ಮುನ್ನಡೆಸುವ ಸಾಮರ್ಥ್ಯ ಮಹಿಳೆಗಿದೆ. ಹೆಣ್ಣಿನ ಸಾಮರ್ಥ್ಯವನ್ನೇ ಗುರುತಿಸಿಯೇ ೧೨ನೇ ಶತಮಾನದಲ್ಲಿ ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಹೇಳಿದ್ದಾರೆ.
ಸ್ತೀಯರಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ, ಅವರು ಸಬಲೀಕರಣ ಸಾಧಿಸಬೇಕೆನ್ನುವುದೇ ಮಹಾಶಕ್ತಿ ಕೂಟಗಳ ರಚನೆಯ ಉದ್ದೇಶವಾಗಿದೆ. ಕಲ್ಯಾಣ ರಾಜ್ಯ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಜಿಲ್ಲಾ ನಿವೃತ್ತ ಶಸ್ತ್ರಚಿಕಿತ್ಸಕರಾದ ಡಾ. ಸುಶೀಲಾಬಾಯಿ ಹೊಳಕುಂದೆ ಮಾತನಾಡಿ, ಶರಣ ಸಾಹಿತ್ಯ, ಮಹಿಳಾ ಸಾಹಿತ್ಯಕ್ಕೆ ಧರ್ಮ ಪ್ರಸಾರ ಜಾಗ್ರತಿ ಹಾಗೂ ಸಾಮಾಜಿಕ ಕ್ರಾಂತಿಗೆ ಶರಣೆಯರ ಕೊಡುಗೆ ಅಪಾರವಾಗಿದೆ ಎಂದರು.
ಶರಣ ಸೇವಾ ನಾಯಕ ಪ್ರಶಸ್ತಿ ಸ್ವೀಕರಿಸಿ ಸುವರ್ಣಾ ಚಿಮಕೋಡೆ ಮಾತನಾಡಿದರು. ಸೋನಾಲಿ ನೀಲಕಂಠೆ, ಮಮತಾ ಭೂಸೆ, ಜಯಶ್ರೀ ಬಿರಾದಾರ, ರೇಣುಕಾ ಹೋಗ್ತಾಪೂರೆ, ರಾಜಶ್ರೀ ಖೂಬಾ, ಜಯಶ್ರೀ ಬಿರಾದಾರ, ಕೋಮಲಾ ಸಿರಿಗೇರೆ ತಮ್ಮ ಮಹಾಶಕ್ತಿ ಕೂಟಗಳು ಮಾಡಿದ ಕಾರ್ಯಗಳ ಬಗ್ಗೆ ಸವಿವರವಾಗಿ ಹೇಳಿದರು.
ಸುವರ್ಣಾ ಶಾಶೆಟ್ಟೆ, ಸೋನಾಲಿ ಜಾಧವ, ಸುವರ್ಣಾ ಆನಂದವಾಡಿ. ರಾಣಿ ಮಡಿವಾಳ, ಸುಹಾಸಿನಿ ಮಿರಜಾದಾರ, ಶೋಭಾ ಔರಾದೆ, ಜಯಮತಿ ದಾವಲಜಿ, ಲೀಲಾವತಿ ರಾಂಪೂರೆ, ಭಾರತಿಬಾತಿ ಜೋಗಧನಕರ, ಸೀಮಾ ಮಹಾಮೂನಿ, ಗಾಯತ್ರಿ ಕೋಳೆ, ಕವಿತಾ ಸಜ್ಜನ, ಕೋಮಲಾ ಸಿರಿಗೇರೆ ಪ್ರತಿನಿಧಿಗಳಾಗಿ ಭಾಗವಹಿಸಿದರು.
ರಾಜಮತಿ ಭುರಾಳೆ. ಡಾ. ಪ್ರಿಯಾಂಕಾ ಮಂಠಾಳೆ, ಸರಳಾ ಪಾಟೀಲ ಉಪಸ್ಥಿತರಿದ್ದರು. ಸೋನಾಲಿ ನೀಲಕಂಠೆ ಮತ್ತು ಸಂಗಡಿಗರು ವಚನ ಉಗ್ಘಡನೆ ಮಾಡಿದರೆ, ಮಮತಾ ಭೂಸೆ ಸಂಗಡಿಗರು ಗೀಗಿ ಪದ ಹಾಡಿದರು. ತರಂಗಿಣಿ ಮಹಾಶಕ್ತಿ ಕೂಟದವರಿಂದ ವಚನ ತಾಳ ನೃತ್ಯ ಅದ್ಭುತವಾಗಿ ಮೂಡಿ ಬಂತು.
ಪ್ರೊ. ಮೀನಾಕ್ಷಿ ಬಿರಾದಾರ ಸ್ವಾಗತಿಸಿದರೆ, ವಿಜಯಲಕ್ಷ್ಮೀ ಹೂಗಾರ ನಿರೂಪಿಸಿದರು.