ರಾಮನಗರದಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ
5Posts
Auto Updates

25ನೇ ದಿನದ ಲೈವ್‌ ಬ್ಲಾಗ್

2 weeks agoSeptember 26, 2025 12:00 pm

ಸಾರ್ವಜನಿಕ ಸಮಾವೇಶ ಆರಂಭ.

ಸಾಣೇಹಳ್ಳಿ ಕಲಾತಂಡದಿಂದ ವಚನ ಗಾಯನ.

ಶರಣೆ ಶಾರದಾ ನಾಗೇಂದ್ರ ಅವರಿಂದ ವಚನ ಪ್ರಾರ್ಥನೆ.

ಡಾ. ಎಂ.ಎಸ್. ಶಂಕ್ರಪ್ಪ ಅವರು ಸರ್ವರನ್ನು ಸ್ವಾಗತಿಸಿದರು.

ಪೂಜ್ಯರು ಹಾಗೂ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಸಮಾವೇಶ ಉದ್ಘಾಟಿಸಿದರು.

ಅ.ಭಾ.ವೀ‌.ಲಿಂ.ಮಹಾಸಭಾ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.

ದಾವಣಗೆರೆಯಲ್ಲಿ ನಡೆದ ನಮ್ಮ ಮಹಾಸಭಾದ ಅಧಿವೇಶನದಲ್ಲಿ ಸರ್ಕಾರಕ್ಕೆ ನಾವು ಮನವಿ ಮಾಡಿಕೊಂಡಿದ್ದೆವು. ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿತು. ಈ ಸಂದರ್ಭದಲ್ಲಿ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುವೆ ಎಂದು ಸಚ್ಚಿದಾನಂದ ಮೂರ್ತಿಯವರು ಹೇಳಿದರು.

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿದರು.

ನಾಗನೂರ ಗುರುಬಸವ ಮಠದ ಬಸವಗೀತಾ ಮಾತಾಜಿ ಅವರಿಂದ ಅನುಭಾವ.

ರಾಜಸತ್ತೆಯ ವ್ಯವಸ್ಥೆಯಲ್ಲಿ ಪ್ರಜಾಸತ್ತೆಯ ಆಶಯಗಳನ್ನು ಈಡೇರಿಸಿದ ಮಹಾನುಭಾವರು ಬಸವಣ್ಣನವರು. ಸರ್ವರಿಗೂ ಸರ್ವಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟವರು ಬಸವಣ್ಣನವರು. ಬಸವಣ್ಣನವರನ್ನು ನಾವೆಲ್ಲ ಸದಾ ಸ್ಮರಣೆ ಮಾಡಬೇಕು ಎಂದು ಬಸವಗೀತಾ ಮಾತಾಜಿ ಹೇಳಿದರು.

ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಅವರಿಂದ ಅನುಭಾವ.

ಸಂಸದರಾದ ಡಾ. ಮಂಜುನಾಥ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.

ಬಸವಣ್ಣನವರು ಹೇಳಿದಂತೆ ದಯೆ, ಕರುಣೆ, ವಿಶ್ವಾಸ, ನಂಬಿಕೆಯಿಂದ ಬದುಕೋಣ. ಅವಶ್ಯಕತೆ ಇದ್ದವರಿಗೆ ಹಂಚಿ ತಿನ್ನಬೇಕು ಕಿತ್ತು ತಿನ್ನಬಾರದು. ಹಳಸಿದ್ದು ಕೊಡದೆ ಉಳಿಸಿಟ್ಟದ್ದು ಕೊಡಬೇಕು. ಅಹಂಕಾರ, ಅಸೂಯೆ, ಅನುಮಾನ ಯಾರಿಗೂ ಇರಬಾರದು. ಸಮಯ, ಸಂತೃಪ್ತಿ ನಿಜವಾದ ಸಂಪತ್ತು ಎಂದು ಡಾ. ಮಂಜುನಾಥ್ ಹೇಳಿದರು.

ತುಮಕೂರು ಸಿದ್ದಗಂಗಾಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳಿಂದ ಆಶೀರ್ವಚನ.

ಹೃದಯದಲ್ಲಿಟ್ಟು ಪೂಜೆಗೊಳ್ಳುತ್ತಿರುವವರು ಬಸವಣ್ಣನವರು. ಇವತ್ತಿನ ಜೀವಪರ ಜನಪರ ಚಿಂತನೆ ಅದು ಏನಿದ್ದರೂ 12ನೇ ಶತಮಾನದ ಬಸವಾದಿ ಶರಣರದೇ ಆಗಿದೆ. ಎಲ್ಲ ಸಮಸ್ಯೆಗಳಿಗೆ ಬಸವಾದಿ ಶರಣರ ವಚನಗಳಲ್ಲಿ ಪರಿಹಾರ ಸೂತ್ರಗಳಿವೆ. ಧರ್ಮಕ್ಕೆ ಹೊಸ ಭಾಷ್ಯ ಬರೆದವರು ಬಸವಣ್ಣನವರು. ರಾಮನಗರದಲ್ಲಿ ಈ ಕಾರ್ಯಕ್ರಮದ ಮೂಲಕ ಬಸವಣ್ಣನವರ ಸತ್ಯದರ್ಶನ ಮಾಡಿಸಿದ್ದೀರಿ ಎಂದು ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಕಾರ್ಯಕ್ರಮ ಯಶಸ್ಸಿಗಾಗಿ ಶ್ರಮಿಸಿದವರನ್ನು ಸತ್ಕರಿಸಲಾಯಿತು.

ಕಲ್ಯಾಣಗೀತೆಯೊಂದಿಗೆ ಸಮಾವೇಶ ಮಂಗಲಗೊಂಡಿತು.

2 weeks agoSeptember 26, 2025 11:15 am

ಸಾಮರಸ್ಯ ನಡಿಗೆ

ಕೆಂಪೇಗೌಡ ವೃತ್ತದಿಂದ ಆರಂಭವಾದ ಜಾಥಾ. ಶರಣೆಯರಿಂದ ವಚನ ಕಟ್ಟುಗಳ ಮೆರವಣಿಗೆ. ಅರ್.ವಿ.ಸಿ.ಎಸ್. ಕಲ್ಯಾಣ ಮಂಟಪದವರಿಗೆ ಸಾಗಿತು.

2 weeks agoSeptember 26, 2025 10:27 am

ಬೈಕ್‌ ರ್ಯಾಲಿ ಆರಂಭ

2 weeks agoSeptember 26, 2025 10:24 am

ಬಸವ ರಥಕ್ಕೆ ಸ್ವಾಗತ

ಅರ್ಚಕರಹಳ್ಳಿ ಗೇಟ್ ಬಳಿ ಪೂಜ್ಯರು ಹಾಗೂ ಗಣ್ಯರು ಬಸವ ರಥವನ್ನು ಬರಮಾಡಿಕೊಂಡರು.

2 weeks agoSeptember 26, 2025 10:15 am

ಇಂದಿನ ಕಾರ್ಯಕ್ರಮ

ಮುಂಜಾನೆ 9 ಗಂಟೆಗೆ ಅರ್ಚಕರಹಳ್ಳಿ ಗೇಟ್ ನಲ್ಲಿ ಬಸವರಥಕ್ಕೆ ಸ್ವಾಗತ.

ಮೆರವಣಿಗೆ

‘ಬಸವ ಬೈಕ್ ರ್ಯಾಲಿ’, ನಂತರ ಕೆಂಪೇಗೌಡ ವೃತ್ತದಿಂದ ರಾಯರದೊಡ್ಡಿ ವೃತ್ತದವರೆಗೆ ವಿವಿಧ ಜನಪದ ಕಲಾತಂಡದೊಂದಿಗೆ, ಶರಣೆಯರಿಂದ ವಚನ ಕಟ್ಟುಗಳ ಮೆರವಣಿಗೆ, ಜಾಥಾ.

ಬಹಿರಂಗ ಸಮಾವೇಶ:

ಮುಂಜಾನೆ 11 ಗಂಟೆಗೆ ಸಾರ್ವಜನಿಕ ಸಮಾವೇಶ ಮಾಗಡಿ ರಸ್ತೆಯ ವಿವೇಕಾನಂದ ನಗರದ ಆರ್.ವಿ. ಸಿ. ಎಸ್. ಕಲ್ಯಾಣ ಮಂಟಪದಲ್ಲಿ.

ಅನುಭಾವ:

ನಾಗನೂರ ಗುರುಬಸವ ಮಠದ ಬಸವಗೀತಾ ಮಾತಾಜಿ, ಮಣಕವಾಡಿ ಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಅವರಿಂದ ಧಾರ್ಮಿಕ ಉಪನ್ಯಾಸ.

Share This Article
Leave a comment

Leave a Reply

Your email address will not be published. Required fields are marked *