27ನೇ ದಿನದ ಲೈವ್ ಬ್ಲಾಗ್
ಫೋಟೋಗಳಲ್ಲಿ ಸಾರ್ವಜನಿಕ ಸಮಾವೇಶ









ಸಾರ್ವಜನಿಕ ಸಮಾವೇಶ
ಸಾರ್ವಜನಿಕ ಸಮಾವೇಶ ಆರಂಭಕ್ಕೆ ಮೊದಲು ಸಾಣೇಹಳ್ಳಿ ಕಲಾತಂಡದಿಂದ ವಚನ ಗಾಯನ.
ತೋಟಪ್ಪ ಉತ್ತಂಗಿ ಅವರ ನೇತೃತ್ವದಲ್ಲಿ ಶರಣೆಯರಿಂದ ಬಸವ ಪ್ರಾರ್ಥನೆ.
ಶಿರಸಿ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಸ್ವಾಗತ.
ಚಿಂತಕ ಡಾ. ಜೆ.ಎಸ್. ಪಾಟೀಲ ಅವರಿಂದ ‘ವಚನಗಳ ನೆಲೆಯಲ್ಲಿ ಅಧಿಕಾರ’ ವಿಷಯವಾಗಿ ಉಪನ್ಯಾಸ.
ಸಾಹಿತಿ ಎಸ್. ಜಿ. ಸಿದ್ಧರಾಮಯ್ಯ ಅವರಿಂದ ‘ಶರಣರು ಮತ್ತು ಬಹುಸಂಸ್ಕೃತಿ’ ವಿಷಯವಾಗಿ ಉಪನ್ಯಾಸ.
ಹುಲಸೂರು ಶ್ರೀಗಳಿಂದ ಕಾರ್ಯಕ್ರಮದಲ್ಲಿ ಆಶೀರ್ವಚನ.
ಹುಬ್ಬಳ್ಳಿಯಿಂದಲೇ ಅಭಿಯಾನದ ಜೊತೆ ಸುತ್ತಾಡುತ್ತಿರುವ ಸೈಕ್ಲಿಸ್ಟ್ ಗಳನ್ನು ಸತ್ಕರಿಸಲಾಯಿತು.
ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ಅವರಿಂದ ಆಶೀರ್ವಚನ.
ಡಾ. ಬಸವಕುಮಾರ ಸ್ವಾಮೀಜಿ ಅವರಿಂದ ಆಶಯ ನುಡಿಗಳು.
ಡಾ. ಬಸವಲಿಂಗ ಪಟ್ಟದ್ದೇವರು ಅವರಿಂದ ಆಶೀರ್ವಚನ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಂದ ಆಶೀರ್ವಚನ.
ವೈದ್ಯಶ್ರೀ ಚೆನ್ನಬಸವಣ್ಣ ಅವರಿಂದ ಸಂದೇಶದ ಮಾತು.
ಡಾ. ತೋಂಟದ ಸಿದ್ಧರಾಮ ಶ್ರೀಗಳಿಂದ ಸಮಾರೋಪ ನುಡಿಗಳ ಆಶೀರ್ವಚನ.
4 ಕಿ.ಮೀ. ದೂರ ಸಾಗಿದ ಮೆರವಣಿಗೆ
ಆಂಬುಲೆನ್ಸ್ ಗೆ ದಾರಿ ಬಿಟ್ಟುಕೊಟ್ಟ ಬಸವಭಕ್ತರು.


ಅಂಬೇಡ್ಕರ್ ಪ್ರತಿಮೆಗೆ ಗೌರವಾರ್ಪಣೆ.

ಬೃಹತ್ ಮೆರವಣಿಗೆ
ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭಗೊಂಡ ಬೃಹತ್ ಮೆರವಣಿಗೆ, ಪಾದಯಾತ್ರೆ. ಒನಕೆ ಓಬವ್ವ ವೃತ್ತದವರೆಗೆ ಸಾಗುವುದು.


















ರೂಪಕ ಪ್ರದರ್ಶನ
ಚಿತ್ರದುರ್ಗ ಜಮುರಾ ಕಲಾವಿದರಿಂದ ‘ಬಿಜ್ಜಳ ಮತ್ತು ಬಸವಣ್ಣ’ ರೂಪಕ ಪ್ರದರ್ಶನ. ನಿರ್ದೇಶನ ವೈ.ಡಿ. ಬದಾಮಿ.


ರೂಪಕ ವೀಕ್ಷಿಸುತ್ತಿರುವ ಪೂಜ್ಯರು



ಆನೆಯನೇರಿಕೊಂಡು ಹೋದಿರೆ ನೀವು
ವಚನ ಝೇಂಕಾರದಲ್ಲಿ ಆನೆಯನೇರಿಕೊಂಡು ಹೋದಿರೆ ನೀವು ವಚನ ಗಾಯನ
ಸಂವಾದ ಕಾರ್ಯಕ್ರಮದ ಸಮಾರೋಪ
ಗದಗ ತೋಂಟದ ಡಾ. ಸಿದ್ಧರಾಮ ಶ್ರೀಗಳಿಂದ ಸಂವಾದ ಕಾರ್ಯಕ್ರಮದ ಸಮಾರೋಪ ನುಡಿ.



ಪ್ರಶ್ನೋತ್ತರ ಆರಂಭ
ಜಾತಿಗಣತಿ ಸಮೀಕ್ಷೆಯಲ್ಲಿ ಲಿಂಗಾಯತರು ಜಾತಿ ನಮೂದಿಸುವುದು ಎಷ್ಟು ಸೂಕ್ತ?
ಸಂಸಾರ ಕಟ್ಟಿಕೊಂಡ ಜನಸಾಮಾನ್ಯರು ಶ್ರೇಷ್ಠರೊ? ಸನ್ಯಾಸತ್ವದ ಮಠಾಧೀಶರು ಶ್ರೇಷ್ಠರೊ? ಯಾರ ಬದುಕು ಪರಿಪೂರ್ಣ, ಸಂಪೂರ್ಣ?
ಪಂಚಮಸಾಲಿಗಳು ಧಾರ್ಮಿಕವಾಗಿ ಲಿಂಗಾಯತರೆ, ಹಿಂದುಗಳೆ?
ಆಧ್ಯಾತ್ಮ ಮತ್ತು ಶರಣ ತತ್ವಕ್ಕೂ ನಂಟಿದೆಯೇ? ಇದ್ದರೆ ಯಾವ ತರ?
ಬಸವ ಸಂಸ್ಕೃತಿ ಮತ್ತು ಉಳಿದ ಸಂಸ್ಕೃತಿಗೂ ಇರುವ ವ್ಯತ್ಯಾಸ?
ಜಂಗಮ ಮತ್ತು ಶರಣ ಇವೆರಡರ ನಡುವಿನ ವ್ಯತ್ಯಾಸ?
ಮಠಾಧೀಶರು ಶಿಕ್ಷಣ ಸಂಸ್ಥೆ ಕಟ್ಟಿಕೊಂಡು ಅದರಲ್ಲಿ ಮುಳುಗಿ, ಧಾರ್ಮಿಕ ಕಾರ್ಯ ಮಾಡುವಲ್ಲಿ ಹಿಂದುಳಿದಿದ್ದಾರೆ ಇದಕ್ಕೇನಂತೀರಿ?
ಲಿಂಗಾಯತ ಧರ್ಮವನ್ನು ಬಸವಧರ್ಮ ಅಥವಾ ಮಾನವಧರ್ಮ ಎಂದು ಕರೆದರೆ ಒಳ್ಳೆಯದಲ್ಲವೆ?
ಜಾತಿ ಉಪಜಾತಿ ಧರ್ಮ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸಿದರೆ ತಪ್ಪಾಗುತ್ತ?
ಇಷ್ಟಲಿಂಗ ಏಕೆ ಕಪ್ಪಾಗಿದೆ?
ಇವತ್ತಿನ ಸರ್ಕಾರ ಹಿಂದುಗಳನ್ನು ವ್ಯವಸ್ಥಿತವಾಗಿ, ಪರೋಕ್ಷವಾಗಿ ತುಳಿಯುತ್ತಿದೆ. ನೀವು ಮಠಾಧೀಶರು ಏಕೆ ಮಾತನಾಡುತ್ತಿಲ್ಲ?
ಜಾತ್ಯತೀತ ರಾಷ್ಟ್ರದಲ್ಲಿ ಜಾತಿಪೀಠಗಳು ಬೇಕೆ?
ಶ್ರೇಷ್ಠವಾದ ಯೋಗವೆಂದರೆ ಅದು ಶಿವಯೋಗ. ಆದರೆ ಅದು ಬೇರೆ ಯೋಗಗಳಂತೆ ಹೆಚ್ಚು ಪ್ರಚಾರದಲ್ಲಿಲ್ಲ ಮತ್ತು ಪ್ರಸಾರದಲ್ಲಿಲ್ಲ ಏಕೆ?
ವೀರಶೈವ-ಲಿಂಗಾಯತ ಪದ ಇದು ಹೇಗೆ ಬಂತು?
ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂದು ಘೋಷಣೆಯಾದ ಮೇಲೆ, ಶಾಲೆಗಳನ್ನು ವಚನ ಗಾಯನ ಮೂಲಕ ಯಾಕೆ ಆರಂಭಿಸಲು ಒತ್ತಾಯ ಮಾಡಬಾರದು?
ಸಮಸಮಾಜ ಹೇಳಿದ ಬಸವಣ್ಣನ ನಾಡಿನಲ್ಲಿ ಧರ್ಮ ಕಾಲಂನಲ್ಲಿ ನಾವು ಏನು ಬೆರೆಸಬೇಕು?
ಬಸವಣ್ಣನವರಿಗೆ ಗುರುಗಳಿದ್ದರೆ? ಇದ್ದರೆ ಅವರು ಯಾಕೆ ಪ್ರಚಾರದಲ್ಲಿಲ್ಲ?
ವಚನ ಝೇಂಕಾರದ ಝೇಂಕಾರ
ಕಳಬೇಡ ಕೊಲಬೇಡ ವಚನ ಗಾಯನ
ಬಸವ ಪುತ್ಥಳಿಗೆ ಪುಷ್ಪಾರ್ಪಣೆ
ತೋಟಪ್ಪ ಉತ್ತಂಗಿ ಅವರಿಂದ ಬಸವ ಪ್ರಾರ್ಥನೆ.
ಬಸವ ಪುತ್ಥಳಿಗೆ ಪೂಜ್ಯರು, ಗಣ್ಯರಿಂದ ಪುಷ್ಪಾರ್ಪಣೆ.

ಬಾಗಲಕೋಟೆಯ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳಿಂದ ಸರ್ವರಿಗೂ ಸ್ವಾಗತ.
ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳಿಂದ ಪ್ರಾಸ್ತಾವಿಕ ಮಾತುಗಳು.
ವಚನ ಝೇಂಕಾರದಲ್ಲಿ ‘ದಯವಿಲ್ಲದ ಧರ್ಮ ಅದಾವುದಯ್ಯ’ ವಚನ ಗಾಯನ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಂದ ದಿಕ್ಸೂಚಿ ನುಡಿ.

ವಚನ ಝೇಂಕಾರದಲ್ಲಿ ‘ಸತ್ಯದ ನಿಲುವು ಅರಿಯದೇ ಹೋದಿರಲ್ಲ’ ವಚನ ಗಾಯನ.
ವಚನ ಝೇಂಕಾರದಲ್ಲಿ ‘ಬೆಳೆದ ಭೂಮಿಯಲ್ಲಿ ಒಂದು ಪ್ರಳಯದ ಕಸ ಹುಟ್ಟಿ’ ವಚನ ಗಾಯನ.
ನಾಡಗೀತೆಯೊಂದಿಗೆ ಸಮಾವೇಶಕ್ಕೆ ಚಾಲನೆ.
ಪೂಜ್ಯರು, ಗಣ್ಯರು, ಶರಣೆಯರು ಮತ್ತು ಶರಣರ ವೇಷಧಾರಿ ಮಕ್ಕಳು ನಾಡಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.



ವಚನ ಝೇಂಕಾರ
ಸಾವಿರಾರು ಶರಣ ಶರಣೆಯರಿಂದ ವಚನ ಝೇಂಕಾರ, ವಚನ ಗಾನಸುಧೆ ಮೊಳಗಿತು.
ಈ ಝೇಂಕಾರ ಕಾರ್ಯಕ್ರಮದ ಕೊನೆಯವರೆಗೂ ಮುಂದುವರೆಯಲಿದೆ.




ಎಲ್ಲ ಪೂಜ್ಯರು ಮತ್ತು ಶರಣರಿಂದ ಧ್ವಜಗೀತೆ
ಡಾ, ಬಸವಲಿಂಗ ಪಟ್ಟದೇವರು ಅವರಿಂದ ಷಟಸ್ಥಲ ಧ್ವಜಾರೋಹಣ. ಪೂಜ್ಯರು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಬಸವಭಕ್ತರು ಉಪಸ್ಥಿತರಿದ್ದರು. ತೋಟಪ್ಪ ಉತ್ತಂಗಿ ಎಲ್ಲರಿಗೂ ಧ್ವಜಗೀತೆ ಹಾಡಿಸಿದರು.



10.30ಕ್ಕೆ ವಚನ ಝೇಂಕಾರ
ಕಾರ್ಯಕ್ರಮದ ಸ್ಥಳ
ಅನುಭವ ಮಂಟಪ, ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ.



ಇಂದಿನ ಕಾರ್ಯಕ್ರಮ
ಶಿವಯೋಗ
ಬೆಳಿಗ್ಗೆ 8 ಗಂಟೆಗೆ ಸಹಜ ಶಿವಯೋಗ.
ವಚನ ಝೇಂಕಾರ
ಬೆಳಿಗ್ಗೆ 10.30 ಗಂಟೆಗೆ ವಚನ ಝೇಂಕಾರ, ಏಕಕಾಲಕ್ಕೆ 5000 ಶರಣ-ಶರಣೆಯರ ಕಂಠಸಿರಿಯಿಂದ ವಚನಗಾನ ಸುಧೆ.
ಸಂವಾದ
ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ವಚನ ಸಂವಾದ.
ಬಹುಮಾನ ವಿತರಣೆ
ಜಮುರಾ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ.
ಮೆರವಣಿಗೆ
ಸಂಜೆ 4 ಗಂಟೆಗೆ ಪಾದಯಾತ್ರೆ, ಮೆರವಣಿಗೆ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಹೊರಟು, ಗಾಂಧಿವೃತ್ತ, ಅಂಬೇಡ್ಕರ್ ವೃತ್ತದ ಮುಖಾಂತರ ಒನಕೆ ಓಬವ್ವ ವೃತ್ತದವರೆಗೆ ಸಾಗುವುದು.
ಬಹಿರಂಗ ಸಭೆ
ಸಂಜೆ 6 ಗಂಟೆಗೆ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾವೇಶ.
ನಾಟಕ
ರಾತ್ರಿ 8.30 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.