ಬಸವ ಮೀಡಿಯಾ: ಜೂಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಆದಾಯ, ವೆಚ್ಚ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ಬಂಧುಗಳೇ,

ಶರಣು ಶರಣಾರ್ಥಿಗಳು.

ನಿಮಗೆ ತಿಳಿದಿರುವ ಹಾಗೆ ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾ ಓದುಗರ ದಾಸೋಹದಿಂದಲೇ ನಡೆಯುತ್ತಿರುವ ಪತ್ರಿಕೆ.

ಬಸವ ಮೀಡಿಯಾಕ್ಕೆ ಬರುವ ನೆರವನ್ನು ಅತ್ಯಂತ ಜವಾಬ್ದಾರಿ ಮತ್ತು ಪಾರದರ್ಶಕತೆಯಿಂದ ನಿರ್ವಹಿಸಲು ಬದ್ಧರಾಗಿದ್ದೇವೆ.

ನಮ್ಮ ಟ್ರಸ್ಟಿನ ನಿಯಮದ ಅನುಸಾರವಾಗಿ ಮೂರು ತಿಂಗಳಿಗೊಮ್ಮೆ (ಏಪ್ರಿಲ್ 7, ಜೂಲೈ 7, ಅಕ್ಟೋಬರ್ 7 ಮತ್ತು ಜನವರಿ 7) ನಮ್ಮ ಆದಾಯ ಮತ್ತು ವೆಚ್ಚದ ಲೆಕ್ಕವನ್ನು ಬಹಿರಂಗವಾಗಿ ಪ್ರಕಟಿಸುತ್ತೇವೆ. (ಕೆಲಸದ ಒತ್ತಡದಿಂದ ಎರಡು ದಿನಗಳ ವಿಳಂಬವಾಗಿದೆ, ಕ್ಷಮೆಯಿರಲಿ.)

ಬಸವ ಮೀಡಿಯಾದ ಪ್ರತಿಯೊಂದು ವೆಚ್ಚವು ಟ್ರಸ್ಟಿಗಳ ಸಭೆಯಲ್ಲಿ ಚರ್ಚೆಯಾಗಿ ಅಂಗೀಕೃತವಾಗಿರುತ್ತದೆ. ನಮ್ಮ ಸಲಹಾ ಮಂಡಳಿಯ ಪ್ರತಿಯೊಬ್ಬ ಸದಸ್ಯರಿಗೂ ಬಸವ ಮೀಡಿಯಾದ ಲೆಕ್ಕವನ್ನು ಪರಿಶೀಲಿಸುವ ಅಧಿಕಾರವಿರುತ್ತದೆ. ವರ್ಷಕ್ಕೊಮ್ಮೆ ಬರುವ ಲೆಕ್ಕ ಪರಿಶೋಧನಾ ವರದಿಯನ್ನೂ ಹೀಗೆಯೇ ಪ್ರಕಟಿಸುತ್ತೇವೆ.

ಜೂಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳ ಲೆಕ್ಕದ ವಿವರ

ನಮಗೆ ಬರುವ ಪ್ರತಿಯೊಂದು ದಾಸೋಹವೂ ವೆಬ್ಸೈಟಿನಲ್ಲಿ 24 ಗಂಟೆಗಳ ಒಳಗೆ ಈ ಲಿಂಕಿನಲ್ಲಿ ದಾಖಲಾಗುತ್ತವೆ.

https://basavamedia.com/basava-media-balaga/

ಬಸವ ಮೀಡಿಯಾ ಪ್ರಕಾಶನದಿಂದ ಎರಡು ಪುಸ್ತಕಗಳು ಪ್ರಕಟವಾಗಿವೆ. ಅವುಗಳ ಖರ್ಚು, ಆದಾಯವನ್ನು ವರ್ಷದ ಕೊನೆಗೆ ಲೆಕ್ಕ ಪರಿಶೋಧಕರ ವರದಿಯ ಮೂಲಕ ತೋರಿಸುತ್ತೇವೆ.

ಎರಡು ವರ್ಷಗಳಿಗೆ 35 ಲಕ್ಷ ಅವಶ್ಯವಿದೆ

ಬಸವ ಮೀಡಿಯಾವನ್ನು ನಡೆಸಲು ನಮಗೆ ಮೂರು ಪೂರ್ಣಾವಧಿ ಸಿಬ್ಬಂದಿಯ ಅವಶ್ಯಕತೆಯಿದೆ. ಜೊತೆಗೆ ನಮ್ಮ ಓದುಗರು ಬೆಳೆದ ಹಾಗೆ ನಮ್ಮ ವೆಬ್ಸೈಟ್ ಗೆ ಸಂಬಂದಿಸಿದ ಖರ್ಚುಗಳೂ ಬೆಳೆಯುತ್ತವೆ.

ಇವುಗಳನ್ನು ನಿಭಾಯಿಸಲು ನಮಗೆ ಮುಂದಿನ ಎರಡು ವರ್ಷಗಳಿಗೆ 35 ಲಕ್ಷ ರೂಪಾಯಿ ಅವಶ್ಯಕತೆಯಿರುತ್ತದೆ. ಬಸವ ಅನುಯಾಯಿಗಳು ತನು-ಮನ-ಧನದೊಂದಿಗೆ ಬಸವ ಮೀಡಿಯಾ ಜೊತೆ ಕೈ ಜೋಡಿಸಲು ಕೋರುತ್ತಿದ್ದೇವೆ.

ಧನ್ಯವಾದ
ಬಸವ ಮೀಡಿಯಾ ಟ್ರಸ್ಟಿಗಳ ಪರವಾಗಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
2 Comments
  • ಬಸವ ಮಿಡಿಯಾ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡಲು ಮುಂಚೂಣಿಯಲ್ಲಿರುವ ಒಂದು ಉತ್ತಮ ಮಾದ್ಯಮ. ಶರಣುಶರಣಾರ್ಥಿಗಳು

Leave a Reply

Your email address will not be published. Required fields are marked *