ಬೆಂಗಳೂರು
ಅಕ್ಟೋಬರ್ 9 ರಂದು ಮಹಾರಾಷ್ಟ್ರದ ಬೀಳೂರು ಗ್ರಾಮದಲ್ಲಿ ಬಸವ ಸಂಸ್ಕೃತಿ ಅಭಿಯಾನ ಕುರಿತು, ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ಬಗ್ಗೆ ಅನಾಗರಿಕ ಮಾತುಗಳು ಆಡಿದ್ದು, ಈತನ ಸಂಸ್ಕೃತಿ ಯಾವುದು ಎಂಬುದನ್ನು ತೋರಿಸುತ್ತದೆ.
ಅಸಹಿಷ್ಣುತೆ ಮನಸ್ಸಿನ ಈ ಸ್ವಾಮೀಜಿ ಮತಾಂಧ, ಮನುವಾದಿ ಸಂಘಿಗಳ ಕೃಪಾಫೋಷಿತ ತಂಡದ ಕಾಲಾಳು. ಅವರು ಹೇಳಿದಂತೆ ಕೇಳುವ ಗುಲಾಮಿ ಸಂತತಿಗಳಿಗೆ ಬಸವ ಸಂತಾನ ಬಗ್ಗಲ್ಲ, ಕುಗ್ಗಲ್ಲ. ನೀವು ಕಾಗೆ, ಗೂಬಿಗಳಂತೆ ಕೂಗಿದಷ್ಟು ಬಸವ ಸಂತತಿ ಎತ್ತರ ಎತ್ತರಕ್ಕೆ ಬೆಳೆಯುತ್ತದೆ.
ನಿಮ್ಮ ಮಾತುಗಳು ನಿಮಗೆ ಬಹುಮಾನವಾಗಿ ಮರಳಿ ಕೊಡುತ್ತಿದ್ದೇವೆ ಸ್ವೀಕರಿಸಿ. ನಿಮ್ಮ ಹತಾಶೆಯ ಮಾತುಗಳು ನಿಮ್ಮ ಹೇಡಿತನ ಎತ್ತಿ ತೋರಿಸುತ್ತದೆ. ಮತ್ತೂಬ್ಬರಿಗೆ ಮಸಿ ಬಳೆಯಲು ಹೋದರೆ ನಿಮ್ಮ ಕೈಗಳು ಮಸಿಯಾಗುತ್ತವೆ ಎಂಬ ಸಾಮನ್ಯ ಪ್ರಜ್ಞೆ ಇಲ್ಲದ ಅವಿವೇಕಿ ಸ್ವಾಮೀಜಿ ನೀವು.
ಬಸವ ಸಂಸ್ಕೃತಿ ಅಭಿಯಾನ ನಿಮ್ಮಂತಹ ಜನರನ್ನು ಇವ ನಮ್ಮವ ಎನ್ನುವ ಔದಾರ್ಯ ಹೊಂದಿದೆ. ಶರಣರ ದಂಡು ನಿಮ್ಮಂತಹ ಕಸಕಡ್ಡಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಾ ಸಾಗುವ ಗಟ್ಟಿಕಾಳುಗಳ ಒಕ್ಕೂಟವಾಗಿದೆ.ನಿಮ್ಮ ಅಹಂಕಾರ ಇಳಿಸಲು ಶರಣರ ದಂಡು ಸಜ್ಜಾಗಿ ಬರುವ ಕಾಲ ದೂರವಿಲ್ಲ.