ಬಾಗಲಕೋಟೆ
ರಾಜ್ಯದಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಆ ಬಗ್ಗೆ ಪರಿಶೀಲಿಸಿ ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಅದೇ ರೀತಿ ಕ್ರಮ ಕೈಗೊಳ್ಳಿ ಅಂತಾ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರೋದಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ RSS ಚಟುವಟಿಕೆ ನಿಷೇಧಿಸುವಂತೆ ಸಿಎಂಗೆ ತಾವು ಪತ್ರ ಬರೆದಿರುವ ವಿಚಾರವನ್ನ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆರೆಸ್ಸೆಸ್ ವಿರೋಧಿ. ರಾಷ್ಟ್ರೀಯ ಸವಯಂ ಸೇವಕ ಸಂಘ ರಿಜಿಸ್ಟರ್ ಆಗಿರುವ ಕಾಪಿ ತೋರಿಸಿ ಎಂದು ಅವಾಲು ಹಾಕಿರುವುದಲ್ಲದೆ, RSS ತೆಗೆದರೆ ಬಿಜೆಪಿನೇ ಇರಲ್ಲ ಎಂದಿದ್ದಾರೆ. ಆರೆಸ್ಸೆಸ್ ಚಟುವಟಿಕೆಗಳನ್ನ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ ಅಂತಲೂ ತಿಳಿಸಿದ್ದಾರೆ.
ಹೌದು ವೇಸ್ಟ್ ಸಂಘ ಪರಿವಾರ ಇದು. ಇದರಿಂದ ಏನೂ ಪ್ರಯೋಜನವಿಲ್ಲ ಮುಗ್ಧರು ಇದರ ಬಲೆಗೆಬಿದ್ದು ಒದ್ದಾಡುತ್ತಿದ್ದಾರೆ.ದೇಶ ಪ್ರೇಮದ ಬಗ್ಗೆ ಶಾಲೆಯಲ್ಲಿ ಹೇಳಿಕೊಡೊದಿಲ್ಲವೆ ಇವರೆ ಹೇಳಬೇಕೆ ಸಿಂಧೂ ಉಚ್ಚಾರಣೆ ಹೊಗಿ ಹಿಂದೂ ಆಗಿದೆ ಅಷ್ಟೇ ಸನಾತನ ದ ಹೆಸರು ಹೇಳಿದರೆ ಅಷ್ಟ ದಿಕ್ಕಿನಲ್ಲಿ ಸಮಸ್ಯೆ ಗಳು ಎದುರು ಆಗುತ್ತವೆ ಎಂದು ತಿಳಿದು ಸನಾತನಿಗಳು ಹಿಂದೂ ಹಿಂದೂ ಹಿಂದೂ ಎಂದು ಕನವರಿಸೊದು ನೋಡಿ ಕೆಲವು ಬೌದ್ಧರು, ಜೈನರು, ಲಿಂಗಾಯತರು, ಮುಂತಾದವರು ಇಲಿ ಹೊಗಿದೆ ಅಂತ ಹೇಳೊಬದಲು ಹುಲಿನೆ 🐯 ಹೊಗಿದೆ ಎನ್ನೊರೀತಿಯಲ್ಲಿ ವರ್ತಿಸುತ್ತಿದ್ದಾರೆ ಇದರಿಂದಾಗಿ ಸಮಾಜದಲ್ಲಿ ಶಾಂತಿ ಹಾಳಾಗುತ್ತದೆ ಅಷ್ಟೇ ಹಿಗೆ ಆಗಲು ಕಾರಣ ಇಗಿನ ಕೆಲವು ವಿದ್ವಾಂಸರು ಮಳ್ಳರಂತೆ ನಾಟಕ ಪ್ರದರ್ಶನ ಮಾಡಿ ಜನರನ್ನು ಯಾಮಾರಿಸುವು ಒಂದು ದೊಡ್ಡ ಸಾಧನೆ ಮಾಡಿದ್ದಾರೆ ಅನ್ನೊ ರೀತಿಯಲ್ಲಿ ಬಿಂಬಿಸುವ ಮೂಲಕ ತಮ್ಮ ಮನೆಯ ಬೆಳೆಯನ್ನು ಬರೆಯಿಸಿ ಕೊಳ್ಳುತ್ತಾರೆ ಇದರ ಅರಿವು ಮೂಡಿಸುವಲ್ಲಿ ಅನೆಕ ಮಾಧ್ಯಮಗಳು ವಿಪಲ ವಾಗಿವೆ ಇಂತಹ ಸಂದರ್ಭದಲ್ಲಿ ಬಸವ ಮೀಡಿಯಾ ತನ್ನದೆ ಆದ ರೀತಿಯಲ್ಲಿ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೆ .ಬಸವ ಮೀಡಿಯಾ ದವರಿಗೆ ನನ್ನ ತುಂಬು ಹೃದಯ ದ ಧನ್ಯವಾದಗಳು ಹಾಗೂ ಶರಣು ಶರಣಾರ್ಥಿ ಗಳು.🙏