ನನ್ನನ್ನು ಯಾಕೆ ದ್ವೇಷಿಸುತ್ತೀರಿ: ಲಿಂಗಾಯತರಿಗೆ ಸಿದ್ದರಾಮಯ್ಯ ಪ್ರಶ್ನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಾಗಲಕೋಟೆ

‘ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಾಡಲಿಲ್ಲ. ನಾನು ಮಾಡಿದೆ. ಆದರೂ ನನ್ನನ್ನು ಏಕೆ ದ್ವೇಷಿಸಿತ್ತೀರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಪ್ರಶ್ನಿಸಿದರು.

ಜಿಲ್ಲೆಯ ಬಂಡಿಗಣಿ ಮಠದಲ್ಲಿ ಸೋಮವಾರ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಹಾಕುವಂತೆ ಆದೇಶಿಸಿದ್ದೇನೆ” ಎಂದರು.

ಆಗ ಕಾಶಪ್ಪನವರ, ‘ಇಲ್ಲ ಸರ್‌. ನಾವು ಬಹಳ ಪ್ರೀತಿ ಮಾಡುತ್ತೇವೆ‘ ಎಂದರು. ಅದಕ್ಕೆ ಸಿದ್ದರಾಮಯ್ಯ, ‘ನೀನು ಮಾಡಲ್ಲಪ್ಪ. ನೀನು ನನ್ನ ಅಭಿಮಾನಿ ಯಾವಾಗಲೂ. ಕೆಲವರು ಯಾಕೆ ದ್ವೇಷಿಸುತ್ತಾರೆ ಎಂಬುದು ನನಗಂತೂ ಗೊತ್ತಿಲ್ಲ. ನಾನು ಬಸವಣ್ಣನವರ ಕಟ್ಟಾ ಅನುಯಾಯಿ. 2013ರಲ್ಲಿ ಬಸವ ಜಯಂತಿಯಂದೇ ಪ್ರಮಾಣ ವಚನ ಸ್ವೀಕರಿಸಿದೆ. ಬಸವಣ್ಣನವರ ಸಮ ಸಮಾಜ ನಿರ್ಮಾಣವೇ ಸರ್ಕಾರದ ಗುರಿ’ ಎಂದರು.

ಬಸವಣ್ಣನವರ ವಚನ ಇರುವುದು ಭಾಷಣ ಮಾಡುವುದಕಲ್ಲ, ಅನುಸರಿಸಲು. ಎಲ್ಲರರೋ ಕಾಯಕ ಮಾಡಬೇಕು, ಬಂದುದನ್ನು ಹಂಚಿಕೊಂಡು ತಿನ್ನಬೇಕು, ಎಂದು ಹೇಳಿದರು.

ಕಳೆದ ವಾರ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯನವರನ್ನು ಲಿಂಗಾಯತ ಮಠಾಧಿಪತಿಗಳು ಸನ್ಮಾನಿಸಿದನ್ನು ಕೆಲವು ಸಂಘಟನೆಗಳ ಜೊತೆ ಗುರಿತಿಸಿಕೊಂಡಿರುವ ಲಿಂಗಾಯತರು ವಿರೋಧಿಸಿದ್ದಾರೆ.

ಸೋಮವಾರ ಕನ್ನೇರಿ ಸ್ವಾಮಿಯ ವಿರುದ್ಧ ಸಿಂಧನೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಯಚೂರಿನ ಬಸವ ಕೇಂದ್ರದ ಅರವಿ ನಾಗನಗೌಡ್ರು, “ನಾವು ಸಿದ್ದರಾಮಯ್ಯನವರನ್ನು ಸನ್ಮಾನಿಸಿರುವುದು ಇಂತಹ ಅಯೋಗ್ಯ ಸ್ವಾಮಿಗಳು ಸಹಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯನವರು ಬಸವಣ್ಣನವರನ್ನು ಜಗತ್ತಿಗೆ ಹಾಗೂ ಇಡೀ ಮನುಕುಲಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ನಾವು ಅದಕ್ಕಾಗಿ ಅವರನ್ನು ಗೌರವಿಸಿದ್ದೇವೆ,” ಎಂದು ಹೇಳಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

https://www.prajavani.net/district/bidar/lingayat-religion-basava-kalyana-rally-3580267
Share This Article
Leave a comment

Leave a Reply

Your email address will not be published. Required fields are marked *