ಯಲಬುರ್ಗಾ
ತಾಲೂಕಿನ ಕಲ್ಲಭಾವಿ ಗ್ರಾಮದಲ್ಲಿ ಬುಧವಾರ ಮಲ್ಲಿನಾಥ ಶರಣರ ಸ್ಮರಣಾರ್ಥ ೨೦೨ ನೇ ಮಾಸಿಕ ಸಂಚಾರಿ ಶಿವಾನುಭವ ಗೋಷ್ಠಿ ನಡೆಯಿತು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕಲ್ಲಭಾವಿ ಗ್ರಾಮದ ವಿರುಪಾಕ್ಷಯ್ಯ ಸ್ವಾಮೀಜಿ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಿಮ್ಮನಗೌಡ ಚಿಲ್ಕರಾಗಿ ಭಾಗವಹಿಸಿ ಮಾತನಾಡುತ್ತಾ, ಬಸವಾದಿ ಶರಣ ಶರಣೆಯರು ದೇವರನ್ನು ಹೊರಗಡೆ ಹುಡುಕುವುದನ್ನು ಸಂಪೂರ್ಣವಾಗಿ ಅಲ್ಲಗಳೆದರು. ಕಾರಣ ದೇವರು ನಮ್ಮ ಒಳಗಡೆ ಇರುವುದನ್ನು ಮರೆತು ತಿರುಗುವದು ವ್ಯಥ೯ ಪ್ರಲಾಪವೆಂದು ವಚನಗಳ ಮೂಲಕ ಸಾಧಕರಿಗೆ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯರಾದ ಬಸವರಾಜಪ್ಪ ವೆಂಕಟಾಪುರ ಸಿರುಗುಪ್ಪ ಇವರು ವಹಿಸಿ, ಅನುಭಾವ ನೀಡುತ್ತ, ನಿರಾಕಾರವಾದ ದೇವರನ್ನು ಸಾಕಾರ ರೂಪದಲ್ಲಿ ಇಷ್ಟಲಿಂಗ ರೂಪದಲ್ಲಿ ಶರಣರು ಕೊಟ್ಟಿರುತ್ತಾರೆ. ಶಿವಯೋಗದ ಮೂಲಕ ಮನಸ್ಸನ್ನು ಅಮನಸ್ಕಗೊಳಿಸುವ ಸಾಧನವನ್ನು ಕಲಿಸಿದವರು ಶರಣರು ಎಂದರು.

ಕಾಯ೯ಕ್ರಮದಲ್ಲಿ ಮರಕಟ್ಟ ಗ್ರಾಮದ ಬಸವ ಕೇಂದ್ರದ ಅದ್ಯಕ್ಷರಾದ ಅಮರೇಶಪ್ಪ ಬಳ್ಳಾರಿ, ಶರಣಬಸಪ್ಪ ತುರುವಿಹಾಳ, ದೇವಪ್ಪ ಕಾನಹಾಳ, ಗಂಗಮ್ಮ ವೀರಬಧ್ರಪ್ಪ ಕುರಕುಂದಿ, ರುದ್ರಪ್ಪ ಸೂಳಿಕೇರಿ, ಹಂಪಣ್ಣ ತಾವರಗೇರಿ, ಶರಣಪ್ಪ ಹಿರೇಬಮ್ಮನಾಳ, ಲಕ್ಷಣಸಿಂಗ್ ತಾವರಗೇರಾ, ಶರಣಪ್ಪ ಹಸಬಿ, ಮರಕಟ್ಟ ಬಸವ ಕೇಂದ್ರದ ಗೌರವಾಧ್ಯಕ್ಷ ಹನಮಗೌಡ ಬಳ್ಳಾರಿ, ಶಂಕ್ರಗೌಡ ಮುಸಲಾಪೂರ, ಬಾಲಪ್ಪ ಕರುವಿನ, ಮಲ್ಲೇಶಪ್ಪ ಮಾಟಲದಿನ್ನಿ, ರೇಣುಕಪ್ಪ ಮಂತ್ರಿ, ಶಂಕ್ರಪ್ಪ ತಾಳಕೇರಿ, ಅಮರಪ್ಪ ಯಡ್ಡೋಣಿ, ದೇವಪ್ಪ ಕೋಳೂರ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ದ್ಯಾಮಣ್ಣ ದೇವಲ್ ಮತ್ತಿತರರು ಭಾಗವಹಿಸಿದ್ದರು.
ಪ್ರಾಸ್ತಾವಿಕ ನುಡಿಗಳನ್ನು ಬಸವರಾಜಪ್ಪ ಇಂಗಳದಾಳ ಆಡಿದರು. ವಚನ ಗಾಯನವನ್ನು ಬಸವರಾಜಪ್ಪ ವರದಾಪೂರ, ಬಸಣ್ಣ ಹಿರೇವಂಕುಲಕುಂಟಿ ಇವರು ಮಾಡಿದರು. ನಿರೂಪಣೆಯನ್ನು ಬಸವರಾಜಪ್ಪ ದೇವಲ್ ನೆರವೇರಿಸಿದರು.