ಹೊನ್ನಾಳಿ
ರಾಷ್ಟ್ರೀಯ ಬಸವದಳ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಘಟಗಳ ಸರ್ವಸದಸ್ಯರ ಸಭೆ ಹೊನ್ನಾಳಿ ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ರವಿವಾರ ನಡೆಯಿತು.
ಸಭೆಯ ನಂತರ ಕಲ್ಯಾಣ ಮಂಟಪದ ಹೊರಗಡೆ, ಲಿಂಗಾಯತ ಮಠಾಧಿಪತಿಗಳಿಗೆ ಅವಹೇಳನಕಾರಿಯಾಗಿ ಮಾತನಾಡಿದ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಯ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು. ಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ಅವರಿಗೆ ಧಿಕ್ಕಾರ ಹಾಕಲಾಯಿತು.
v
ಅವರೇ ಹೇಳಿದಂತೆ ಅವರ ಭಾಷೆಯಲ್ಲೇ ನಾವು ಕನ್ನೇರಿ ಸ್ವಾಮಿಯನ್ನು ಸತ್ಕರಿಸಿ ಕಳಿಸೋಣ ಎಂದು ನಾರೇಶಪ್ಪ ಮಾತನಾಡಿದರು.

ನೂತನ ಸಮಿತಿ
ಸಭೆಯಲ್ಲಿ ರಾಷ್ಟ್ರೀಯ ಬಸವದಳದ ಜಿಲ್ಲಾ ಸಮಿತಿ ಅಧ್ಯಕ್ಷ ವೈ. ನಾರೇಶಪ್ಪ, ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ವೀಣಾ ಮಂಜುನಾಥ, ಸಂಚಾಲಕರಾದ ಬಸವರಾಜಪ್ಪ ಮಾಸ್ತರ್, ಪ್ರೊ. ನಾಗರಾಜ ಅವರು ಉಪಸ್ಥಿತರಿದ್ದು ಸಂಘಟನೆ ಬಲಗೊಳಿಸುವ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ತಾಲೂಕು ಹಾಗೂ ನ್ಯಾಮತಿ ತಾಲ್ಲೂಕು ನೂತನ ಸಮಿತಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಹೊನ್ನಾಳಿ ತಾಲ್ಲೂಕು
ಅಧ್ಯಕ್ಷ – ಕೆ.ಜಿ. ಬಸವರಾಜಪ್ಪ
ಉಪಾಧ್ಯಕ್ಷೆ – ಶಾರದಾ ಕಣಗೊಟಕೆ
ಕಾರ್ಯದರ್ಶಿ – ಬಿ.ವಿ. ಬಸವರಾಜ
ಸಹಕಾರ್ಯದರ್ಶಿ – ಆರ್.ಎಸ್. ರಘು
ಖಜಾಂಚಿ – ಸುವರ್ಣಮ್ಮ ಈ. ಹೊನ್ನಾಳಿ
ಸಂಚಾಲಕರು – ಚಂದ್ರಕಲಾ ಕಟ್ಟಿಗೆ, ಎ.ಜಿ. ಪ್ರಕಾಶಣ್ಣ.
ನ್ಯಾಮತಿ ತಾಲ್ಲೂಕು
ಅಧ್ಯಕ್ಷ – ಸಿ.ವಿ. ನಾಗರಾಜಪ್ಪ
ಉಪಾಧ್ಯಕ್ಷ – ಡಿ.ಎಂ. ಬಸವರಾಜಪ್ಪ
ಕಾರ್ಯದರ್ಶಿ – ಎಂ. ಶಿವರಾಜ
ಖಜಾಂಚಿ – ಎಂ. ಜಯದೇವಪ್ಪ
ಸಂಚಾಲಕ – ಪಿ.ಜಿ. ಉಮೇಶ.

ದಾವಣಗೆರೆ ಜಿಲ್ಲಾ ನೂತನ ಸಮಿತಿ ಈಗಾಗಲೇ ರಚನೆಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭ ನವ್ಹೆಂಬರ್ 2 ರಂದು ದಾವಣಗೆರೆಯಲ್ಲಿ ನಡೆಯಲಿದೆ. ಪೂಜ್ಯ ಡಾ. ಗಂಗಾ ಮಾತಾಜಿ, ಎನ್. ಚಂದ್ರಮೌಳಿ ಸೇರಿದಂತೆ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಭಾಗವಹಿಸುತ್ತಾರೆ. ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿ ಸಭೆ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ವೈ. ನಾರೇಶಪ್ಪ ಹೇಳಿದರು.