ಹುಬ್ಬಳ್ಳಿ: ಚಿಂತನಾ ಶಿಬಿರದೊಂದಿಗೆ ನೂತನ ‘ಅನುಭವ ಮಂಟಪ’ದ ಅನಾವರಣ

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ

ಪ್ರಗತಿಪರ ರೈತರು, ದಾಸೋಹಿಗಳಾದ ಮುರಿಗೆಪ್ಪ ಪಂಚಲಿಂಗಪ್ಪ ಯಕಲಾಸಪುರ ನಿರ್ಮಿಸಿರುವ ‘ಅನುಭವ ಮಂಟಪ’ ಅಕ್ಟೋಬರ್ 26, ಮುಂಜಾನೆ 11 ಗಂಟೆಗೆ ಉದ್ಘಾಟನೆಯಾಗಲಿದೆ.

‘ಶರಣರ ಚಿತ್ಕಾಯ ಸ್ವರೂಪಗಳ’ ಕಾರ್ಯಕ್ರಮದ ಉದ್ಘಾಟನೆ ಮತ್ತು “ವೀರಮ್ಮ ಫಾರ್ಮ್ ಹೌಸ್” ಉದ್ಘಾಟನೆ ಕೂಡ ನಡೆಯಲಿದೆ.

ಸಮಾರಂಭದ ದಿವ್ಯಸಾನಿಧ್ಯವನ್ನು ಗದಗ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ, ಶಿರಟ್ಟಿ ಫಕೀರ ಸಿದ್ದರಾಮ ಸ್ವಾಮೀಜಿ, ಶಿವಮೊಗ್ಗ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತಿತರ ಪೂಜ್ಯರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹೈದರಾಬಾದ್ ಮುಖ್ಯ ಪೊಲೀಸ ಆಯುಕ್ತ ವಿಶ್ವನಾಥ್ ಸಜ್ಜನರ ಭಾಗವಹಿಸುತ್ತಿದ್ದು, ಅಧ್ಯಕ್ಷತೆಯನ್ನು ಮುರಿಗೆಪ್ಪ ಪಂಚಲಿಂಗಪ್ಪ ಯಕಲಾಸಪುರ ವಹಿಸುವರು.

250 ಜನ ಕೂರಬಹುದಾದ ಅನುಭವ ಮಂಟಪದಲ್ಲಿ ಪ್ರಸಿದ್ಧ ಕಲಾವಿದ ಎಂ.ಸಿ. ಚಟ್ಟಿ ಅವರ ಕಲಾಕೃತಿಗಳು ಸೇರಿದಂತೆ 155 ಬಸವಾದಿ ಶರಣರ ಫೋಟೋ ಅಳವಡಿಸಲಾಗಿದೆ. ಮಠಾಧೀಶರು, ಭಕ್ತರ ಬಳಕೆಗಾಗಿ ಮುಡಿಪಾಗಿರುವ ಅನುಭವ ಮಂಟಪದಲ್ಲಿ ದಾಸೋಹ ಸೇವೆಯೂ ಲಭ್ಯವಿರುತ್ತದೆ.

ಬಸವತತ್ವಾಧಾರಿತ ಚಿಂತನಾ ಶಿಬಿರ

ನೂತನ ಅನುಭವ ಮಂಟಪದ ಉದ್ಘಾಟನಾ ಸಮಾರಂಭ ನಿಮಿತ್ಯ ಎರಡು ದಿನಗಳ ಬಸವ ತತ್ವಾಧಾರಿತ ಮುಕ್ತ ಚಿಂತನ ಶಿಬಿರ ನಡೆಯಲಿದೆ.

ಅಕ್ಟೋಬರ್ ೨೪, ೨೫ ರಂದು ನಡೆಯುವ ಚಿಂತನ ಶಿಬಿರದಲ್ಲಿ ಪೂಜ್ಯ ಉಳವಿಯ ಚೆನ್ನಬಸವಾನಂದ ಸ್ವಾಮೀಜಿಯವರ ದಿವ್ಯ ನೇತೃತ್ವವಹಿಸುತ್ತಾರೆ.

೨೪/೧೦/೨೦೨೫ ಶುಕ್ರವಾರ

ಅನುಭಾವ ಚಿಂತನ – ೦೧
ವಿಷಯ: “ಕಲ್ಲು ಕಟ್ಟಿಗೆ ಲೋಹದ ಪ್ರತಿಮೆಗಳು ದೇವರಲ್ಲವೆಂದರೆ ಇಷ್ಟಲಿಂಗ ಹೇಗೆ ದೇವರು?
ಅನುಭಾವ – ಪೂಜ್ಯ ವೆಂಕಟಾಪೂರ ಶರಣರು, ಸಿರುಗುಪ್ಪ.
ಸಮಯ : ಬೆಳಿಗ್ಗೆ ೦೯ ರಿಂದ ೧೧ ಗಂಟೆ

ಅನುಭಾವ ಚಿಂತನ ೦೨
ವಿಷಯ : “ಅನುಭವ ಮಂಟಪ ಮತ್ತು ಶೂನ್ಯ ಪೀಠ”
ಅನುಭಾವ – ಪಿ. ರುದ್ರಪ್ಪ, ಸಿಂಧನೂರು.
ಸಮಯ : ಬೆಳಿಗ್ಗೆ ೧೧:೩೦ ರಿಂದ ೦೧:೩೦

ಅನುಭಾವ ಚಿಂತನ ೦೩
ಚಿಂತನ ವಿಷಯ : “ಶರಣರ ಸಾಹಿತ್ಯದಲ್ಲಿ ಕಲ್ಯಾಣಕ್ರಾಂತಿ ಮತ್ತು ಶರಣರ ಲಿಂಗೈಕ್ಯದ ಪರಿ”
ಅನುಭಾವ – ಪಂಚಾಕ್ಷರಿ ಹಳೆಬೀಡು, ಬೆಂಗಳೂರು.
ಸಮಯ : ಮಧ್ಯಾಹ್ನ ೦೩ ರಿಂದ ೦೫ ಗಂಟೆ

ಅನುಭಾವ ಚಿಂತನ ೦೪
ಚಿಂತನ ವಿಷಯ : ‘ನಮಶಿವಾಯ ಲಿಂಗವು, ಓಂ ನಮಃ ಶಿವಾಯ ಬಸವಣ್ಣನು’, ‘ಪ್ರಥಮಂತು ಬಸವಣ್ಣ ದ್ವಿತಿಯಂತು ಲಿಂಗವು’ ‘ವಸುದೆ ಹುಟ್ಟದ ಮುನ್ನ ಬಸವಣ್ಣ ಹುಟ್ಟಿದನು’
ಅನುಭಾವ – ಶ್ರೀಧರ ಮುರಾಳೆ, ಕಬ್ಬೂರ.
ಸಮಯ : ಮಧ್ಯಾಹ್ನ ೫:೩೦ ರಿಂದ ೭:೩೦ ಗಂಟೆ

೨೫/೧೦/೨೦೨೫ ಶನಿವಾರ

ಅನುಭಾವ ಚಿಂತನ ೦೫
ಚಿಂತನ ವಿಷಯ : “ಲಿಂಗಾಂಗ ಸಾಮರಸ್ಯ”
ಅನುಭಾವ – ಭಾರತಿ ಕೆಂಪಯ್ಯ, ಬೆಂಗಳೂರು.
ಸಮಯ : ಬೆಳಿಗ್ಗೆ ೦೯ ರಿಂದ ೧೧ ಗಂಟೆ

ಅನುಭಾವ ಚಿಂತನ ೦೬
ಚಿಂತನ ವಿಷಯ : ‘ಪಾದೋದಕ ಪ್ರಸಾದ’
ಅನುಭಾವ – ಶಶಿಧರ ಕರವೀರಶೆಟ್ಟರ, ಹುಬ್ಬಳ್ಳಿ.
ಸಮಯ : ಬೆಳಿಗ್ಗೆ ೧೧:೩೦ ರಿಂದ ೦೧:೩೦ ಗಂಟೆ

ಅನುಭಾವ ಚಿಂತನ ೦೭
ಚಿಂತನ ವಿಷಯ : ‘ಜನನ ಮರಣ ರಹಿತರಾದ ಶರಣರ ನೆಲೆ ಯಾವುದು?’
‘ಶರಣರು ಮರಳಿ ಮರ್ತ್ಯಕ್ಕೆ ಬರುತ್ತೇವೆ ಎಂದುದರ ಗೂಢಾರ್ಥವೇನು?’
ಅನುಭಾವ – ಪೂಜ್ಯ ಬಸವದೇವರು, ಬಸವಕಲ್ಯಾಣ.
ಸಮಯ : ಮಧ್ಯಾಹ್ನ ೦೩ ರಿಂದ ೦೫ ಗಂಟೆ

ಅನುಭಾವ ಚಿಂತನ ೦೮
ಚಿಂತನ ವಿಷಯ : ‘ಸಮ್ಯಕ್ ಜ್ಯಾನ ಸತ್ಕ್ರಿಯೆಗಳ ಮಹತ್ವ’
ಅನುಭಾವ – ಶಿವಾನಂದ ಅರಭಾವಿ, ಬೈಲಹೊಂಗಲ.
ಸಮಯ : ಬೆಳಿಗ್ಗೆ ೫:೩೦ ರಿಂದ ೭:೩೦ ಗಂಟೆ

ಶಿಬಿರದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಸಂಖ್ಯೆಯಲ್ಲಿ ಸಂಪರ್ಕಿಸಬಹುದು 8317473511, 9591318100.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
2 Comments
  • ಒಳ್ಳೆಯ ಕಾರ್ಯ, ಲಿಂಗ ಧರ್ಮದ ಎಲ್ಲಾ ಲಿಂಗವಂತರುಗಳು ತಮ್ಮ ತಮ್ಮ ಊರಲ್ಲಿ ಹೊಂದಿರುವ ಸ್ಥಳಗಳಲ್ಲಿ ಇದೆ ತರಹ ಅನುಭಾವ ಮಂಟಪಗಳನ್ನು ಕಟ್ಟಬೇಕು. ಅಂದಾಗ ಈ ಲಿಂಗ ಧರ್ಮವು ವಿಶ್ವ ವ್ಯಾಪಿಯಾಗಲು ಅನುಕೂಲವಾಗುತ್ತದೆ ಶರಣಾರ್ಥಿ.
    ಪೀಠಾಧಿಪತಿಗಳು
    ಅಲ್ಲಮಪ್ರಭು ಅನುಭಾವ ಪೀಠ
    ಕರಾವಳಿ ಭಾರತ ದೇಶ

    • ಶರಣ ಮರಗೆಪ್ಪ.ಪ.ಯಕಲಾಸಪುರ ಇವರು ಪ್ರಗತಿಪರ ರೈತರು ಕಾಯಕ ಜೀವಿ ದಾಸೋಹ ಸೇವೆ ಮಾಡುತ್ತ ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಸಲ್ಲಿಸಿದ್ದಾರೆ ಇಂದು ಅವರು ಅನುಭವ ಮಂಟಪ ಜೂತೆಗೆ ೧೫೫ ಶರಣ-ಶರಣೆಯರ ಚಿತ್ರಪಟ ಮೂರ್ತಿ ಅನಾವರಣ ಶರಣ ಚಿಂತನೆ ಅನುಭಾವ ಸತತ ಮೂರು ದಿನಗಳ ವರೆಗೆ ಸ್ವಂತ ಖರ್ಚಿನಲ್ಲಿ ಇದು ಒಂದು ಅವಿಸ್ಮರಣೀಯ ದಿನವಾಗಲಿದೆ ಬಸವಾದಿ ಶರಣರ ಹಾರೈಕೆ ಸದಾ ಇವರ ಮೇಲೆ ಇರಲಿ
      ಶುಭಾಶಯಗಳೂಂದಿಗೆ
      ಶಿವಕುಮಾರ್. ಚ.ರಾಮನಕೂಪ್ಪ
      ಗದಗ

Leave a Reply

Your email address will not be published. Required fields are marked *