ಹುಬ್ಬಳ್ಳಿ
ಮೂಲಪೀಠ ನಿರ್ಮಾಣಕ್ಕೆ ಜಾಗ ಹುಡುಕುವ ಕೆಲಸ ನಡೆದಿದೆ, ಶೀಘ್ರದಲ್ಲೇ ಬಾಗಲಕೋಟೆಯಲ್ಲಿ ದೊಡ್ಡ ಸಭೆ ಮಾಡುತ್ತೇವೆ, ಎಂದು ಕೂಡಲಸಂಗಮದ ಜಯಮೃತ್ಯುಂಜಯ ಶ್ರೀ ಶುಕ್ರವಾರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ನಮ್ಮಲ್ಲಿ ಇರುವುದೊಂದೆ ಪೀಠ. ಕೂಡಲಸಂಗಮ ಪಂಚಮಸಾಲಿ ಪೀಠ. ಪಂಚಮಸಾಲಿ ಸಮಾಜದಲ್ಲಿ ಮೂರು ಅಥವಾ ನಾಲ್ಕನೆಯ ಪೀಠವಿಲ್ಲ.
ನಾವು ಕಟ್ಟಿರುವ ಕಟ್ಟಡವನ್ನು ಟ್ರಸ್ಟಿನವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಟ್ರಸ್ಟ್ನ್ನು ನಮ್ಮ ಹೆಸರಿಗೆ ಮಾಡುತ್ತಾರೆ ಎಂದುಕೊಂಡು ಪೀಠವನ್ನು ಅಲ್ಲಿ ಸ್ಥಳಾಂತರ ಮಾಡಲಾಗಿತ್ತು. ಆದರೆ, ಅವರು ಮಾಡದೇ ಇರುವುದರಿಂದ ಪೀಠವನ್ನು ಬೇರೆಡೆ ಸ್ಥಳಾಂತರ ಮಾಡುತ್ತಿದ್ದೇವೆ, ಎಂದು ಹೇಳಿದರು.
ನಮ್ಮಲ್ಲಿ ಸಣ್ಣ ಭಿನ್ನಾಭಿಪ್ರಾಯ ಸರಿಹೋಗುತ್ತದೆ ಎಂದುಕೊಂಡಿದ್ದೇವು. ಆದರೆ, ಭಿನ್ನಾಭಿಪ್ರಾಯ ಬಹಳವಾಗಿದೆ.
