ಸೊಲ್ಲಾಪುರ:
ಸೊಲ್ಲಾಪುರದ ಸಿದ್ದರಾಮೇಶ್ವರರ ಐಕ್ಯ ಕ್ಷೇತ್ರದಿಂದ ಬಸವಕಲ್ಯಾಣದವರೆಗೆ 7 ಜನ ಪೂಜ್ಯರು ಹಾಗೂ ಸಾಧಕರಿಂದ ಸೈಕಲ್ ಯಾತ್ರೆ ಹಮ್ಮಿಕೊಳ್ಳಲಾಯಿತು.
ಅಕ್ಟೊಬರ್ 26 ರಿಂದ 28ವರೆಗೆ ನಡೆದ ಯಾತ್ರೆಯ ನೇತೃತ್ವವನ್ನು ಅನುಭವ ಮಂಟಪದ ಸಂಚಾಲಕರಾದ ಪೂಜ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು.
ಅ. 26ರಂದು ಮುಂಜಾನೆ ಏಳು ಗಂಟೆಗೆ ಸೊಲ್ಲಾಪುರದ ಶಿವಯೋಗಿ ಸಿದ್ದರಾಮೇಶ್ವರ ಐಕ್ಯ ಸ್ಥಳದಲ್ಲಿ ಬಸವಾದಿ ಶರಣರನ್ನು ಸ್ಮರಣೆ ಮಾಡಿಕೊಂಡು ಪೂಜ್ಯರು ತಮ್ಮ ತಮ್ಮ ಸೈಕಲ್‍ಗಳೊಂದಿಗೆ ಯಾತ್ರೆ ಪ್ರಾರಂಭಿಸಿದರು.

ಮೊದಲ ದಿನದ ಯಾತ್ರೆ 46 ಕಿಮೀ ಗಳನ್ನು ಕ್ರಮಿಸಿ ನಳದುರ್ಗದ ಶಿವಲಿಂಗೇಶ್ವರ ಮಠದಲ್ಲಿ ಅನುಭವ ಮಂಟಪ ಕಾರ್ಯಕ್ರಮಕ್ಕೆ ಆಮಂತ್ರಿಸಿ ಅಲ್ಲಿಯೇ ವಾಸ್ತವ್ಯ ಮಾಡಲಾಯಿತು. ಎರಡನೇ ದಿನ 27 ರಂದು ನಳದುರ್ಗದ ಶಿವಲಿಂಗೇಶ್ವರ ಮಠದಿಂದ ಬೆಳಿಗ್ಗೆ 7ಕ್ಕೆ ಹೊರಟು ಮಾರ್ಗ ಮಧ್ಯದಲ್ಲಿ ಮಧ್ಯಾಹ್ನ ಏಳಿ ಎಂಬ ಗ್ರಾಮದಲ್ಲಿ ಅನುಭವ ಮಂಟಪ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲಾಯಿತು .
ನಂತರ ಪೂಜೆ ಪ್ರಸಾದ ಮುಗಿಸಿ ಅಲ್ಲಿಂದ ಮುಂದೆ ಸಾಗಿ ಅಚಲ ಬೆಟ್ಟ ಎಂಬ ಸ್ಥಳಕ್ಕೆ ತಳ್ಳಿ ಎರಡನೇ ದಿನದ ವಾಸ್ತವ್ಯ ಮಾಡಲಾಯಿತು. ದಿನಾಂಕ 28ರಂದು ಸಾಯಂಕಾಲ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಈ ಯಾತ್ರೆ ತೆರಳಿ ಮುಕ್ತಾಯಗೊಳ್ಳಲಿದೆ.

ಇದೊಂದು ವಿನೂತನ ಬಗೆಯ ಧರ್ಮ ಪ್ರಸಾರ ಕಾರ್ಯವಾಗಿದ್ದು ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತಾ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಮತ್ತು ಉತ್ತಮ ದೈಹಿಕ ಆರೋಗ್ಯಕ್ಕಾಗಿ ಸೈಕಲ್ ಬಳಸುವ ಸಂದೇಶವನ್ನು ಸಾರುತ್ತಿದೆ. ವಾಹನಗಳ ಮಿತಿಮೀರಿದ ಬಳಕೆಯ ಇಂದಿನ ಕಾಲದಲ್ಲಿ ಮಾಲಿನ್ಯ ರಹಿತ ಸೈಕಲ್ ಬಳಕೆ ಅತ್ಯುತ್ತಮವಾಗಿದೆ.
ಈ ಸೈಕಲ್ ಯಾತ್ರೆಯಲ್ಲಿ ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಬಸವಲಿಂಗ ಸ್ವಾಮಿಗಳು, ಪೂಜ್ಯ ಬಸವ ದೇವರು, ಪೂಜ್ಯ ಪ್ರಭುಲಿಂಗ ಸ್ವಾಮಿಗಳು ಹಾಗೂ ಪೂಜ್ಯ ಶಿವ ಸ್ವಾಮಿಗಳು, ಯೋಗ ಗುರು ಲೋಕೇಶ್ ಗುರೂಜಿಯವರು, ರಾಮಚಂದ್ರ ಎರ್ನಾಳೆ, ವೀರೇಶ್, ಸಂಜು ಸಕ್ರಿಯವಾಗಿ ಭಾಗಿಯಾಗಿದ್ದಾರೆ. ವಾಹನಗಳಲ್ಲಿ ಚಲಿಸಿ ಧರ್ಮ ಪ್ರಸಾರ ಮಾಡುತ್ತಿರುವ ಇವತ್ತಿನ ಕಾಲದಲ್ಲಿ ಸೈಕಲ್ ಗಳಲ್ಲಿ ಚಲಿಸುವ ಮುಖಾಂತರ ಧರ್ಮಪ್ರಸಾರ ಕಾರ್ಯಕ್ಕೆ ಮುಂದಾಗಿರುವ ಇಂತಹ ಯುವ ಧರ್ಮಪ್ರಸಾರಕ ಜಂಗಮರ ನಡೆ ಆದರ್ಶಪ್ರಾಯವಾಗಿದೆ.
ಸ್ವಾಗತ:

ಸೈಕಲ್ ಯಾತ್ರೆ ಮಂಗಳವಾರ ಮುಂಜಾನೆ 11 ಗಂಟೆಗೆ ಬಸವಕಲ್ಯಾಣ ತಲುಪಿತು ಪಟ್ಟಣದ ಮಹಾದ್ವಾರದ ಬಸವೇಶ್ವರ ಪುತ್ಥಳಿ ಹತ್ತಿರ ಯಾತ್ರಿಗಳನ್ನು ಭಾಲ್ಕಿ ಹಿರೇಮಠದ ಗುರುಬಸವಪಟ್ಟದ್ದೇವರು ಬರಮಾಡಿಕೊಂಡರು.
ಮುಂದೆ ಅನುಭವ ಮಂಟಪದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಸ್ವಾಗತ ಮಾಡಿಕೊಂಡು ಅವರು ಮಾತನಾಡುತ್ತ, ಸೊಲ್ಲಾಪುರದಿಂದ ಬಸವಕಲ್ಯಾಣದವರೆಗೆ ಗುರುಗಳಾದವರು ಸೈಕಲ್ ಯಾತ್ರೆ ಮಾಡಿಕೊಂಡು ಬಂದದ್ದು ಅಪರೂಪವಾದದ್ದು. ಶರಣ ಸಿದ್ದರಾಮೇಶ್ವರರನ್ನು ಕರೆದುಕೊಂಡು ಬಸವಕಲ್ಯಾಣಕ್ಕೆ ಬಂದಂತಾಯ್ತು ಎಂದು ಸಂತಸಪಟ್ಟರು.
ವಾತಾವರಣದ ಸ್ವಚ್ಛತೆ ಮತ್ತು ದೇಹಕ್ಕೆ ವ್ಯಾಯಾಮದ ದೃಷ್ಟಿಯಿಂದ ಸೈಕಲ್ ತುಳಿಯುವುದು ಒಳ್ಳೆಯದು ಎಂದರು.

ಈ ಸಂದರ್ಭದಲ್ಲಿ ಬಸವಪರ ಸಂಘಟನೆ ಪ್ರಮುಖರಾದ ರವೀಂದ್ರ ಕೋಳಕೂರ, ಶ್ರೀಕಾಂತ ಬಡದಾಳೆ, ಆಕಾಶ ಖಂಡಾಳೆ, ಜಗನ್ನಾಥ ಪತಂಗೆ, ಅಶೋಕ ಕುಂಬಾರ ಹಾಗೂ ಬಸವ ಅನುಯಾಯಿಗಳು ಹಾಜರಿದ್ದರು.

ಬಸವ ತತ್ವ ಸರಳ ಹಾಗೂ ಸಾಮಾಜಿಕ ಸಮಾನತೆ ತರಲು ಮಾಡಿದ ಎಲ್ಲ ಮಹನೀಯರಿಗೂ ಶುಭವಾಗಲಿ. ತಮಗೆಲ್ಲ ಬಡವ ನಾಡಿಗೆ ತುಂಬು ಹೃದಯದ ಸ್ವಾಗತ ಮತ್ತು ಧನ್ಯವಾದಗಳು. ಶರಣು ಶರಣಾರ್ಥಿ ಎಲ್ಲರಿಗೂ ಶುಭವಾಗಲಿ.
ಸೊನ್ನಲಿಗೆಯಿಂದ ಬಸವಣ್ಣನವರ ಕಲ್ಯಾಣಕ್ಕೆ ಸೖಕಲನಲ್ಲಿ ಯಾತ್ರೆ ಮಾಡಿದ ಎಲ್ಲಾ ಶರಣಬಂಧುಗಳಿಗೆ ಕಲ್ಯಾಣನಗರದ ಎಲ್ಲ ಶರಣರು ಗುರುವರ್ಯರು ಬರಮಾಡಿಕೊಂಡು ಹಿರಿಮೆ ಮೆರೆದಿದ್ದಾರೆ.
ಬಸವಾದಿ ಶರಣರ ಆಶೀರ್ವಾದ ನಿಮ್ಮೇಲಿರಲಿ
ಶರಣರ ನಾಡಿಗೆ ಸುಸ್ವಾಗತ.
.