ದಾವಣಗೆರೆ
ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕ, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು ರಾಷ್ಟ್ರೀಯ ಬಸವದಳದ ಜಿಲ್ಲಾ ಸಮ್ಮೇಳನ ನಿರ್ಣಯ ಕೈಗೊಂಡಿದೆ.
ಭಾನುವಾರ ನಗರದಲ್ಲಿ ನಡೆದ ಸಮ್ಮೇಳನದ ದಿವ್ಯ ಸಾನಿಧ್ಯವಹಿಸಿ ಕೂಡಲ ಸಂಗಮದ ಬಸವಧರ್ಮ ಪೀಠದ ಪೂಜ್ಯ ಮಾತೆ ಗಂಗಾದೇವಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.






