ಚರ್ಚೆ: ಕನ್ನೇರಿ ಸ್ವಾಮಿ ಪರವಾಗಿ ನಿಂತಿರುವ ನಾಯಕರಿಗೆ ಪಾಠ ಕಲಿಸಬೇಕು

ಬೆಂಗಳೂರು

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.

ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.

ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ದಾವಣಗೆರೆಯ ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಸವಬಳ್ಳಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.

1) ಅಭಿಯಾನದ ಮೇಲೆ, ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಉದ್ವೇಗ ಬಂದಿರುವುದು ಯಾಕೆ?

ಶತಮಾನಗಳಿಂದ ಜನರ ಜಾಗೃತಿ ಒಪ್ಪದ ಅವರಿಗೆ ಉದ್ವೇಗ ಬಂದಿರುವುದು ಸಹಜ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಜನರಲ್ಲಿ ಶರಣತತ್ವದ ಬಗ್ಗೆ ಅರಿವು ಮೂಡಿಸಿರುವುದು ಅವರ ಅಸ್ತಿತ್ವಕ್ಕೆ ಕುತ್ತು ತಂದಿದೆ.

ಅದಕ್ಕೆ ಉದ್ವೇಗಕ್ಕೆ ಒಳಗಾಗಿ ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಕುಸ್ತಿಗೆ ಬಿಟ್ಟು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

2) ಲಿಂಗಾಯತರ ಮೇಲೆ ಕೆಲವು ಸ್ವಾಮೀಜಿಗಳನ್ನು, ನಾಯಕರನ್ನು ಛೂ ಬಿಟ್ಟಿದ್ದಾರೆ. ಲಿಂಗಾಯತರ ವಿರುದ್ಧ ಸಮಾವೇಶ, ಹೋರಾಟ ಮಾಡುವ ಬೆದರಿಕೆ ಹಾಕಿದ್ದಾರೆ. ಇವರ ಉದ್ದೇಶವೇನು?

ಲಿಂಗಾಯತ ಮಠಾಧೀಶರ ಒಗ್ಗಟ್ಟು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕೆಲವು ಸಂಘ ಪರಿವಾರದ ಕಾವಲು ನಾಯಿಗಳಂತಿರುವ ಮಠಾಧೀಶರ ಮೂಲಕ ಈ ಐಕ್ಯತೆ ಒಡೆಯಲು ಯೋಜನೆ ರೂಪಿಸಿದ್ದಾರೆ.

ಲಿಂಗಾಯತರ ವಿರುದ್ಧ ಸಮಾವೇಶ ಮಾಡುತ್ತಿರುವುದು ಜಾಗೃತವಾಗಿರುವ ಜನರನ್ನು ಮತ್ತೆ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ. ಇವರು ಸಮಾವೇಶ ಮಾಡಲಿ, ಅಲ್ಲಿ ಬಸವಾದಿ ಶರಣರ ವಿಚಾರಗಳ ಬಗ್ಗೆ ಚರ್ಚೆ ಆಗಲಿ. ಆಗ ಬಸವತತ್ವಕ್ಕೆ ಇನ್ನೂ ಬಾರದೇ ಇರುವ ಜನರಿಗೆ ಈ ವೈದಿಕರ ಕಪಟ ನಾಟಕ ತಿಳಿಯುತ್ತದೆ.

ಲಿಂಗಾಯತ ಮಠಾಧೀಶರ ಒಗ್ಗಟ್ಟು ಅವರಿಗೆ ನುಂಗಲಾರದ ತುತ್ತಾಗಿದೆ.

3) ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಮೇಲೆ ಬಳಕೆಯಾಗುತ್ತಿರುವ ಭಾಷೆಗೆ ನಿಮ್ಮ ಪ್ರತಿಕ್ರಿಯೆ ಏನು?

ಲಿಂಗಾಯತ ಮಠಾಧೀಶರ ಬಗ್ಗೆ ಆಗಲಿ, ಲಿಂಗಾಯತ ನಾಯಕರ ಬಗ್ಗೆ ಆಗಲಿ ಹಗುರವಾಗಿ ಮಾತನಾಡಿದ ಭಾಷೆ ಖಂಡಿತಾ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ.

ಈ ದೇಶದ ಸುಪ್ರೀಂ ಕೋರ್ಟ್ ಸಹ ಇದು ಒಬ್ಬ ನಾಗರಿಕ ಮನುಷ್ಯ ಆಡುವ ಮಾತು ಇದಲ್ಲ ಎಂದು ಹೇಳಿದೆ. ಹಾಗಾಗಿ ಇಂಥ ಭಾಷೆ ಯಾರಿಗೂ ಬಳಸಬಾರದು ಇದನ್ನು ನಾವು ಖಂಡಿಸುತ್ತೇವೆ.

4) ಈ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಪರವಾಗಿ ಬಸವ ಸಂಘಟನೆಗಳು ನಿಲ್ಲಬೇಕೆ? ಅವರೇನು ಮಾಡಬೇಕು?

ಬಸವಪರ ಸಂಘಟನೆಗಳು ಈ ಸಮಯದಲ್ಲಿ ಲಿಂಗಾಯತ ಮಠಾಧೀಶರ ಪರವಾಗಿ ಮತ್ತು ಲಿಂಗಾಯತ ನಾಯಕರ ಪರವಾಗಿ ನಿಲ್ಲಲೇಬೇಕು. ಇದು ಬಸವಪರ ಸಂಘಟನೆಗಳ ಆದ್ಯ ಕರ್ತವ್ಯವಾಗಿದೆ.

ಬಸವ ಸಂಸ್ಕೃತಿ ಅಭಿಯಾನದ ವಿರುದ್ಧ ಅವಹೇಳನಕಾರಿ ಮಾತನಾಡಿದ ಕನ್ನೇರಿ ಸ್ವಾಮಿಯ ಪರವಾಗಿ ನಿಂತಿರುವ ರಾಜಕೀಯ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು.

ಹಾಗೂ ತಮ್ಮ ಸ್ವಾರ್ಥ ಸಾಧನೆಗಾಗಿ ಲಿಂಗಾಯತ ಮಠಾಧೀಶರ ವಿರುದ್ಧ ಇರುವ ರಾಜಕೀಯ ನಾಯಕರಿಗೆ ಬಸವಪರ ಸಂಘಟನೆಗಳು ನೇರವಾಗಿ ಪ್ರಶ್ನೆ ಮಾಡಬೇಕು.

5) ಈ ಬೆಳವಣಿಗೆಗೆಳಿಂದ ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆಯೇ? ಅದನ್ನು ಉಳಿಸಿಕೊಳ್ಳುವುದು ಹೇಗೆ?

ಲಿಂಗಾಯತ ಧರ್ಮದ ಒಳ ಜಗಳದಲ್ಲಿ ಸೂಲಿಬೆಲೆ ಅಂತಹ ಕೋಮುವಾದಿಗಳು ಬೇಳೆ ಬೇಯಿಸಿಕೊಳ್ಳಲು ಬಂದಿದ್ದಾರೆ. ಇದನ್ನು ಲಿಂಗಾಯತ ಧರ್ಮದ ಜನ ಅರ್ಥಮಾಡಿಕೊಳ್ಳಬೇಕು.

ಇಂಥಹ ಹೊರಗಿನ ಜನರಿಂದ ಲಿಂಗಾಯತ ಧರ್ಮದ ಒಳಗೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಇದರಿಂದ ಲಿಂಗಾಯತ ಧರ್ಮದ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತಿದೆ.

6) ಸಾರ್ವಜನಿಕ ಸಂವಾದದಲ್ಲಿ ನಾವೂ ಸಭ್ಯತೆ ಕಳೆದುಕೊಳ್ಳಬೇಕೇ? ನಮ್ಮ ಸೈದ್ಧಾಂತಿಕ ವಿರೋಧಿಗಳ ಮೇಲೆ ಇದೇ ಭಾಷೆ ಬಳಸಬೇಕೇ?

ನಮ್ಮದು ಮೃದು ವಚನವೇ ಸಕಲ ಜಪಂಗಂಳಯ್ಯ ಎಂದು ಸಾರಿದ ಪರಂಪರೆ. ಈ ಹಿನ್ನೆಲೆಯಲ್ಲಿ ನಾವು ಸಾರ್ವಜನಿಕ ಸಂವಾದದಲ್ಲಿ ಸಭ್ಯತೆ ಕಳೆದುಕೊಳ್ಳಬಾರದು.
ಸೈದ್ಧಾಂತಿಕ ವಿರೋಧಿಗಳಿಗೆ ನಮ್ಮ ವಚನ ಸಾಹಿತ್ಯದ ಮೂಲಕವೇ ಉತ್ತರ ಕೊಡಬೇಕು.

7) ಈ ಸಮಯದಲ್ಲಿ ಬಸವಾದಿ ಶರಣರಿದ್ದರೆ ಏನು ಮಾಡುತ್ತಿದ್ದರು?

ಈ ಸಮಯದಲ್ಲಿ ಬಸವಾದಿ ಶರಣರು ಇದ್ದಿದ್ದರೆ ವಚನಗಳನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದಂತೆ, ತತ್ವದ ಉಳಿವಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಆಗುತ್ತಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು