ತಪ್ಪಿಲ್ಲದಿದ್ದರೆ ಎದೆಯ ಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ: ಶಿವಾನಂದ ಶ್ರೀ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಕೂಡಲಸಂಗಮ

ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಿದ ಬಸವ ಕಾರ್ಯಕರ್ತರಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಭಿನಂದನಾ ಸಮಾರಂಭವನ್ನು ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಅಭಿಯಾನದ ನಂತರ ಸೃಷ್ಟಿಯಾಗಿರುವ ಸುಳ್ಳು ಆರೋಪ, ವಿವಾದಗಳಿಗೆ ಪ್ರತಿಕ್ರಿಯೆ ನೀಡಿದರು.

ಯಾರ ಹೆಸರೂ ಹೇಳದೆ, “ತಪ್ಪಾಗಿದ್ದರೆ ತಲೆ ಮೇಲೆ ಕಾಲಿಟ್ಟುಕೊಂಡು ಕ್ಷಮೆ ಕೇಳುತ್ತೇವೆ. ತಪ್ಪಿಲ್ಲದಿದ್ದರೆ ನಿಮ್ಮ ಎದೆಯ ಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ,” ಎಂದು ಎಚ್ಚರಿಕೆ ನೀಡಿದರು.

ಕನ್ನೇರಿ ಸ್ವಾಮಿಯ ಬೆಂಬಲಿಗರು ಹೇಳುತ್ತಿರುವ ಸುಳ್ಳುಗಳಿಗೆ ವೇದಿಕೆಯಿಂದ ತೀಕ್ಷ್ಣ ತಿರುಗೇಟು ಬರುತ್ತಿದ್ದಂತೆಯೇ ಸಭೆಯಲ್ಲಿದ್ದ ಸಾವಿರಕ್ಕೂ ಹೆಚ್ಚು ಬಸವ ಸಂಘಟನೆಗಳ ಕಾರ್ಯಕರ್ತರು ಚಪ್ಪಾಳೆ ಹೊಡೆದು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಹುಲಿ ಚರ್ಮ ಹೊದ್ದ ಕತ್ತೆಯ ಕಥೆಯನ್ನೂ ಶ್ರೀಗಳು ಹೇಳಿದರು. ಕಾಡಿನಲ್ಲಿ ಸಿಕ್ಕ ಹುಲಿಯ ಚರ್ಮ ಹೊದ್ದು ಒಂದು ಕತ್ತೆ ಇತರ ಪ್ರಾಣಿಗಳನ್ನು ಹೆದರಿಸಲು ಹೋಯಿತು. ಆದರೆ ಮೈ ಮರೆತು ಹುಲಿಯಂತೆ ಗರ್ಜಿಸಲು ಹೋದಾಗ ಅದರ ಸತ್ಯ ಹೊರಗೆ ಬಂದಿತು ಎಂದು ಶ್ರೀಗಳು ಹೇಳಿದರು.

ಅಭಿಯಾನದ ಯಶಸ್ಸಿನ ಬಗ್ಗೆ ಮಾತನಾಡುತ್ತ ಶ್ರೀಗಳು ಬೆಂಗಳೂರಲ್ಲಿ ನಡೆದ ಸಮಾರೋಪ ಸಮಾರಂಭಕ್ಕೆ ಯುಗದ ಉತ್ಸಾಹದಂತೆ ಜನ ಸೇರಿದ್ದರು. “ಸಮಾರಂಭಕ್ಕೆ ಬೀದರದಿಂದ ವಿಶೇಷ ರೈಲು ತಂದದ್ದೇ ಒಂದು ವಿಶೇಷವಾಗಿತ್ತು. ಉಡುಪಿ, ಮಂಗಳೂರಲ್ಲೂ ಅಭಿಯಾನ ಯಶಸ್ವಿಯಾಯಿತು. ಮಾಡುವವ, ಮಾಡಿಸುವವ ಬಸವಣ್ಣ ಎನ್ನುವಂತೆ ಎಲ್ಲವೂ ಸುಸೂತ್ರವಾಗಿ ನಡೆದವು,” ಎಂದು ಹೇಳಿದರು.

“ಅಭಿಯಾನವನ್ನು ಯಶಸ್ಸು ಮಾಡಿದ್ದು ಒಕ್ಕೂಟವಲ್ಲ ನಾಡಿನ ಬಸವಭಕ್ತರು ಯಶಸ್ಸು ಮಾಡಿದರು. ದುಡಿದಂಥ ತಾವೆಲ್ಲ ಬಸವಭಕ್ತರಲ್ಲ, ಬಸವ ಸ್ವರೂಪಿಗಳೇ ತಾವಾಗಿದ್ದೀರಿ ಎಂದು ನಾವು ತಿಳಿದಿದ್ದೇವೆ. ಅಭಿಯಾನದ ಯಶಸ್ಸು ಇಡೀ ನಾಡಿನ ತುಂಬಾ ಸಂಚಲನವನ್ನು ಮೂಡಿಸಿದೆ. ಅದಕ್ಕೆ ಕೆಲವರು ತಲೆಕೆಡಿಸಿಕೊಂಡು ಹೊಟ್ಟೆಉರಿಯಿಂದ ಸಭೆಗಳನ್ನು ನಡೆಸುತ್ತಿದ್ದಾರೆ, ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
3 Comments
  • RSS ತನ್ನ ಹೊಟ್ಟೆ ಉರಿಯನ್ನು ಹೊರಹಾಕಲು ಇತರರನ್ನು ಬಳಸಿಕೊಂಡು ತಾನು ನಿಚ್ಚಾಳ ವಾಗಿ ಇರಲುಬಯಸಿದೆ.100 ವರುಷದಲ್ಲಿ ಅದು ಇದೇ ಮಾಡುತ್ತಾಬಂದಿದೆ.ತನ್ನ ಹುಳುಕನ್ನು ತಾನೇ ಹೊರಹಾಕಿಕೊಳ್ಳುತ್ತಿದೆ.

  • ಈ ಸ್ವಾಮಿಗಳ ಹೇಳಿಕೆ ಬಗ್ಗೆ ಅಭಿಪ್ರಾಯ ಏನು. ತಲೆಯ ಮೇಲೆ ಕಾಲು ಎದೆಯ ಮೇಲೆ ಕಾಲು ಇದು ಬಸವ ತತ್ವಕ್ಕೆ ಒಪ್ಪಿಗೆಯೇ

  • ಹೌದು,
    ಇದು ಪ್ರತಿಕ್ರಿಯಾತ್ಮಕವಾದ ಹೇಳಿಕೆ. ಅದು ಬಸವ ತತ್ವಕ್ಕೂ ಒಪ್ಪಿತ ಜೊತೆಗೆ ಸರ್ವಸಮ್ಮತ.
    ಹೇಳಿಕೆಯನ್ನು ಸರಿಯಾಗಿ ಹಾಗೂ ಸಾಂದರ್ಭಿಕವಾಗಿ ಅರಿತರೆ ಸಾಕು.
    ದಯವಿಟ್ಟು
    ಬಸವಾಯತರಲ್ಲಿ ಕಳಕಳಿಯ ವಿನಂತಿ ಏನೆಂದರೆ,
    ಆರ್ ಎಸ್ ಎಸ್. ಅನ್ನು ಈ ವಿಷಯದಲ್ಲಿ ಸುಮ್ಮಸುಮ್ಮನೆ ಎಳೆದು ತಂದು ಅಲ್ಲಸಲ್ಲದ ಮಾತುಗಳನ್ನು ಆಡಬೇಡಿ.
    ಅದು ಬಸವ ಧರ್ಮಿಯರಿಗೆ ಭೂಷಣವಲ್ಲ.
    ಆರ್ ಎಸ್ . ಎಸ್ . ಅನ್ನು ಒಪ್ಪಲಾಗದಿದ್ದರೆ ಸುಮ್ಮನಿರಿ
    ಸುಮ್ಮನೆ ತೆಗಳುವುದರಿಂದ ಪ್ರಯೋಜನವಾದರೂ ಏನು?

Leave a Reply

Your email address will not be published. Required fields are marked *