ಚನ್ನಗಿರಿ:
ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶರಣೆ ನೀಲಾಂಬಿಕೆ ಅವರ ಸ್ಮರಣೋತ್ಸವ ಹಾಗೂ ಮಾಸಿಕ ಶಿವಾನುಭವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿ ಗುರುಬಸವ ಸ್ವಾಮೀಜಿ ‘ಶರಣೆ ನೀಲಾಂಬಿಕೆ ಮಾದರಿ ಮಹಿಳೆ’ಯಾಗಿದ್ದಾರೆ ಎಂದರು.
ಶರಣೆ ನೀಲಾಂಬಿಕೆ ತಾಯಿ ಎಂದಿಗೂ ವಸ್ತು, ಒಡವೆಗಳಿಗೆ ಆಸೆಪಟ್ಟವರಲ್ಲ. ಸತ್ಯ, ಶುದ್ಧ ಕಾಯಕವೇ ಶ್ರೇಷ್ಠವೆಂದು ತಿಳಿದವರು. ಕಾಯಕದ ಬದ್ಧತೆ ಇರಿಸಿಕೊಂಡ ಮಾದರಿ ಮಹಿಳೆಯಾಗಿದ್ದರು’ ತಿಳಿಸಿದರು.

ತಮ್ಮ ವಚನಗಳಲ್ಲಿ ಪತಿ ಬಸವಣ್ಣನವರನ್ನು ಸ್ಮರಿಸಿಕೊಂಡಿದ್ದಾರೆ. ಅರಿವು, ಆಚಾರ, ವಿವೇಕ ಹಾಗೂ ಮಾನವೀಯ ಮೌಲ್ಯಗಳಿಂದ ಮನುಷ್ಯ ಶ್ರೇಷ್ಠ ಸಂತನಾಗುತ್ತಾನೆ ಎಂದುವುದನ್ನು ತಿಳಿಸಿಕೊಟ್ಟವರು ಶರಣೆ ನೀಲಾಂಬಿಕೆ ಎಂದರು.

ಡಿವೈಎಸ್ಪಿ ಸ್ಯಾಮ್ ವರ್ಗಿಸ್ ಮಾತನಾಡಿ ಶರಣ ಬಸವಣ್ಣರವರ ತತ್ವಗಳು ನಮ್ಮ ಜೀವನಕ್ಕೆ ಆದರ್ಶವಾಗಿವೆ ‘ಶಿವಶರಣೆಯರ ವಚನಗಳು ಹಾಗೂ ಬಸವ ತತ್ವಗಳೆ ನಮ್ಮ ಬದುಕಿಗೆ ಆದರ್ಶ, ಕಾಯಕವೇ ಕೈಲಾಸ ಎನ್ನುವ ಬಸವಣ್ಣವರ ನುಡಿ ಎಲ್ಲರಂತೆ ನನಗೂ ಚೈತನ್ಯ ತುಂಬಿದೆ. 12ನೇ ಶತಮಾನದ ವಚನ ಸಾಹಿತ್ಯ ಹಾಗೂ ಅನುಭವ ಮಂಟಪ ಸರ್ವ ಕಾಲಕ್ಕೂ ಸತ್ಯವನ್ನು ಸಾರುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಯು. ಚನ್ನಬಸಪ್ಪ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ನೂತನ ನಿರ್ದೇಶಕರಾಗಿ ಅಯ್ಕೆಯಾದ ಎಸ್.ಜೆ.ಕಿರಣ್ ರವರಿಗೆ ಗೌರವಿಸಲಾಯಿತು. ಹೊಸದುರ್ಗದ ಆದ್ರಿಕಟ್ಟೆಯ ನಿವೃತ್ತ ಶಿಕ್ಷಕ ಜಿ. ಬಸವರಾಜಪ್ಪ ಉಪನ್ಯಾಸ ನೀಡಿದರು.

ತರೀಕೆರೆಯ ಸಾಹಿತಿ ಮಸಸುಳಿ ಮೋಹನ್, ರಾಣೇಬೆನ್ನೂರಿನ ವಕೀಲ ಉಮೇಶ್, ಮಹಾದೇವಪ್ಪ, ಗುರುಲಿಂಗಪ್ಪ ಗೌಡ್ರು, ಧನಂಜಯ್, ಕೆ.ಜಿ. ಶಿವಮೂರ್ತಿ, ಎಂ.ಬಿ. ನಾಗರಾಜ್ ಕಾಕನೂರು, ಎಸ್.ಆರ್. ಕುಮಾರ್, ಸುನೀತಾ ರಾಜು, ಟಿ.ವಿ. ಚಂದ್ರಪ್ಪ, ಬಿ. ರಾಜೇಶ್ ಉಪಸ್ಥಿತರಿದ್ದರು.
