ಬೇಲೂರಿನ ನೀಲಾ ನಾಗಭೂಷಣ ಪ್ರಥಮ, ಚಿಂಚೋಳಿಯ ಜಗದೀಶ ಚಿಮ್ಮನಚೂಡು ದ್ವಿತೀಯ
ಬಸವಕಲ್ಯಾಣ:
ನಗರದಲ್ಲಿ 46ನೇ ಅನುಭವಮಂಟಪ ಉತ್ಸವ ಅಂಗವಾಗಿ ಭಾನುವಾರ ನಡೆದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಬೇಲೂರಿನ ನೀಲಾ ನಾಗಭೂಷಣ ಅವರು 1106 ವಚನಗಳನ್ನು ಕಂಠಪಾಠ ಹೇಳಿ ಪ್ರಥಮ ಸ್ಥಾನ ಪಡೆದರು. ಅವರಿಗೆ ನವೆಂಬರ್ 29ರಂದು ನಡೆಯುವ ಕಾರ್ಯಕ್ರಮದಲ್ಲಿ 20,000 ನಗದು ಬಹುಮಾನ, ಪ್ರಮಾಣ ಪತ್ರ ನೀಡಲಾಗುತ್ತದೆ.

ಚಿಂಚೋಳಿಯ ಜಗದೀಶ ವೀರಪ್ಪ ಚಿಮ್ಮನಚೂಡು ಅವರು 951 ವಚನಗಳನ್ನು ಕಂಠಪಾಠ ಹೇಳಿ ದ್ವಿತೀಯ ಬಹುಮಾನ, 15,000 ನಗದು, ಬೈಲಹೊಂಗಲದ ವಿನಾಯಕ ಗುಜನಾಳ ಮದನಬಾವಿ
788 ವಚನಗಳನ್ನು ಹೇಳಿ ತೃತೀಯ ಬಹುಮಾನ 10,000 ನಗದು ಪಡೆದರು. ರಾಯಬಾಗ ತಾಲ್ಲೂಕಿನ ಲತಾ ಶಿವಾನಂದ ಪಾಟೀಲ ಜೋಡಟ್ಟಿ 700 ವಚನಗಳನ್ನು ಹೇಳಿ ಸಮಾಧಾನಕರ ಬಹುಮಾನ ಪಡೆದರು.

ಅನುಭವಮಂಟಪ ಅಧ್ಯಕ್ಷ ಪೂಜ್ಯ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಸುಶೀಲಾದೇವಿ ಬಿ. ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕುಪೇಂದ್ರ ಪಾಟೀಲ, ಪತ್ರಕರ್ತ ದೇವಯ್ಯ ಗುತ್ತೇದಾರ, ವಿಜಯಲಕ್ಷ್ಮಿ ಗಡ್ಡೆ, ಸಮೇದ ಪಟೇಲ್, ಲಕ್ಷ್ಮೀಪುತ್ರ ನಿಂಬಾಳಕರ್, ರವೀಂದ್ರ ಕೋಳಕೂರ, ಆಕಾಶ ಖಂಡಾಳೆ, ಜಗನ್ನಾಥ ಪಾಟೀಲ, ಬಸವರಾಜ ಮೂರುಡ, ಶಿವಪುತ್ರ ದುರ್ಗೆ, ದೀಪಕ ಠಮಕೆ ಉಪಸ್ಥಿತರಿದ್ದರು
