ಬಸವಕಲ್ಯಾಣ:
೪೬ನೇ ಶರಣ ಕಮ್ಮಟ ಮತ್ತು ಅನುಭವಮಂಟಪ ಉತ್ಸವ-೨೦೨೫ ಭಾಗವಾಗಿ ರವಿವಾರ ಸಾಮೂಹಿಕ ಇಷ್ಟಲಿಂಗ ಪೂಜಾ ಮತ್ತು ನಗೆಯೋಗ ಕೂಟ ನಾಡೋಜ ಪರಮಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆಯಿತು.
ಅವರು ಮಾತನಾಡುತ್ತ, ನಾವು ದಿನಾಲು ಇಷ್ಟಲಿಂಗ ಪೂಜೆ ಮಾಡುವುದರಿಂದ ನಮ್ಮ ಮನಸ್ಸು ಶುದ್ಧವಾಗುತ್ತದೆ. ದೈವಿಕರುಣೆ ನಮ್ಮ ಮೇಲೆ ಆಗುತ್ತದೆ. ಎಲ್ಲರೂ ಪ್ರತಿನಿತ್ಯ ಮನೆಯಲ್ಲಿ ಬೆಳಿಗ್ಗೆ ಎದ್ದು ಸ್ನಾನ ಮಾಡಿಕೊಂಡು ಇಷ್ಟಲಿಂಗ ಪೂಜೆ ಮಾಡಬೇಕು ಎಂದು ನುಡಿದರು.

ಪೂಜ್ಯ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು, ಯದ್ದಲದೊಡ್ಡಿ, ಬಸವಭೂಷಣ ಮಹಾಸ್ವಾಮಿಗಳು, ಶಿರಗುಂಪಾ, ಶಿವಾನಂದ ಮಹಾಸ್ವಾಮಿಗಳು, ಬಸವಕಲ್ಯಾಣ, ಮಹಾಲಿಂಗ ಮಹಾಸ್ವಾಮಿಗಳು, ಭಾಲ್ಕಿ, ಗಂಗಾಧರದೇವರು, ಗೋಣಿರುದ್ರ ಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ಶಂಕರಲಿಂಗ ಮಹಾಸ್ವಾಮಿಗಳು, ಪ್ರಭುಲಿಂಗ ಸ್ವಾಮಿಗಳು, ಶಿವಬಸವ, ಬಸವರಾಜ ಶರಣರು, ಬಸವದೇವರು, ಪೂಜ್ಯ ಅನೀಲ ಮಹಾರಾಜರು, ಮಾತೆ ಮೈತ್ರಾದೇವಿ, ಮಾತೆ ಡಾ. ಮಹಾದೇವಮ್ಮತಾಯಿ, ಸುಗುಣಾದೇವಿತಾಯಿ, ಮಾತೆ ಅಕ್ಕನಾಗಮ್ಮ,ಮಾತೆ ಕಮಲಮ್ಮ, ಮಾತೆ ಸತ್ಯಕ್ಕ, ಮಾತೆ ಪ್ರಭಾವತಿ, ಮಾತೆ ನೀಲಾಂಬಿಕಾ, ಮಾತೆ ಶರಣಾಂಬಿಕಾ, ಮಾತೆ ಗುರುದೇವಿ, ಮಾತೆ ಸತ್ಯದೇವಿ, ಮಾತೆ ಕಲ್ಯಾಣಮ್ಮ, ಮಾತೆ ಲಲಿತಮ್ಮ, ಮಾತೆ ದೇವಮ್ಮ, ಮಾತೆ ಕಮಲಮ್ಮ, ಮಾತೆ ದಾನೇಶ್ವರಿ ಹಾಗೂ ಅಕ್ಕಮಹಾದೇವಿ ಪೀಠದ ಸಕಲ ಶರಣೆಯರು ಸಮ್ಮುಖ ವಹಿಸಿದ್ದರು.

ಪಾಪನಾಶ ನಗೆಯೋಗ ಕೂಟದ ಅಧ್ಯಕ್ಷ ಸಿದ್ಧಯ್ಯ ಕಾವಡಿಮಠ ಮತ್ತು ಸಂಗಡಿಗರಿಂದ ನಡೆದ ನಗೆಯೋಗ ಕೂಟ ವಿಶೇಷ ಗಮನ ಸೆಳೆಯಿತು. ಸುಲೋಚನಾ ಶಿವಶರಣಪ್ಪ ಮಾಮಾ, ಸುಲೋಚನಾ ಬಸವರಾಜ ಕಾಮಶೆಟ್ಟಿ, ಸುಲೋಚನಾ ಶಿವಬಸಪ್ಪ ಗುದಗೆ ಉಪಸ್ಥಿತರಿದ್ದರು.
