ಸಿಂಧನೂರು
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಸಿಂಧನೂರು ಬಸವ ಕೇಂದ್ರದ ಉಪಾಧ್ಯಕ್ಷ ಬಸವಲಿಂಗಪ್ಪ ಬಾದರ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ಕಲಬುರ್ಗಿ, ಗೌರಿ ಕೊಂದವರು ಹಿಂದೂ ತಾಲಿಬಾನಿಗಳು. ಅವರ ಪ್ರತಿನಿಧಿಯಾಗಿ ಮಾತನಾಡುತ್ತಿರುವ ಕನ್ನೇರಿ ಸ್ವಾಮಿ ನಿಜವಾದ ತಾಲಿಬಾನಿ. ಬಸವಣ್ಣನವರ ಬಗ್ಗೆ ಮಾತನಾಡುವ ಹಕ್ಕನ್ನು ಅವರು ಕಳೆದುಕೊಂಡಿದ್ದಾರೆ ಎಂದು,” ಎಂದು ಬಾದರ್ಲಿ ಹೇಳಿದ್ದಾರೆ.
