ಚಿಂಚೋಳಿ:
ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಶ್ರೀ ಬಸವ ಪುರುಷ ಕಟ್ಟೆ ವತಿಯಿಂದ ವಚನ ಸಂಗೀತ ದರ್ಬಾರ್ ಕಾರ್ಯಕ್ರಮ ಜರುಗಿತು.
ಆಕಾಶವಾಣಿ ಕಲಾವಿದರಾದ ಮಹೇಶ ಈ. ಬಡಿಗೇರ, ವಿಜಿ ಕಾಲೇಜು ಕಲಬುರ್ಗಿ ಸಂಗೀತ ವಿಭಾಗದ ಮುಖ್ಯಸ್ಥೆ ರೇಣುಕಾ ಹಾಗರಗುಂಡಗಿ, ರಾಮಯ್ಯಸ್ವಾಮಿ ಐನೂಲಿ, ತುಕಾರಾಂ ಭಕ್ತಂಪಳ್ಳಿ, ಸಿದ್ಧಲಿಂಗ ದುಬಲಗುಂಡಿ, ಮಡಿವಾಳಪ್ಪ ರಗಟೆ, ಪವನಸ್ವಾಮಿ ಬೀದರ, ಮಲ್ಲಯ್ಯಸ್ವಾಮಿ ಬೀದರ, ಜಯತೀರ್ಥ ಆದ್ಯ, ರಮೇಶ ಭೂತಪುರ, ಹಣಮಂತ ಭಕ್ತಂಪಳ್ಳಿ, ರೇವಣಸಿದ್ಧ ಬೆಡಸೂರು ಮುಂತಾದ ಕಲಾವಿದರು ವಚನ ಸಂಗೀತ ದರ್ಬಾರ್ ನಡೆಸಿಕೊಟ್ಟರು.
ಸಾನಿಧ್ಯ ವಹಿಸಿದ್ದ ಬೀದರ ಬಸವ ಸೇವಾ ಪ್ರತಿಷ್ಠಾನದ ಪೀಠಾಧ್ಯಕ್ಷೆ ಡಾ. ಗಂಗಾಂಬಿಕೆ ಅಕ್ಕ ಅವರು, ಚಿಮ್ಮನಚೋಡ ಗ್ರಾಮ ಶ್ರೀ ಬಸವ ಪುರುಷ ಕಟ್ಟೆ ಐತಿಹಾಸಿಕ ಶರಣ ಸ್ಮಾರಕವಾಗಿದ್ದು, ಶರಣ ಪರಂಪರೆ ಉಳಿಸಿ ಆಚರಿಸಿರಿ. ಮಕ್ಕಳಿಗೆ ಮನೆಯಲ್ಲಿ ವಚನಾಭ್ಯಾಸ ಮಾಡಿಸಿ, ಶರಣ ಸಂಸ್ಕೃತಿ ಪರಿಪಾಲಿಸಿ ಎಂದು ಕರೆ ಕೊಟ್ಟರು.
ವೇದಿಕೆ ಮೇಲೆ ಸಿ.ಎಸ್. ರಗಟೆ, ಸರೋಜಾ ರೆಡ್ಡಿ, ಪರುಷ ಕಟ್ಟೆ ಅಧ್ಯಕ ಆನಂದ ಕುಮಾರ್ ಬೆಡಸೂರು , ಚಂದ್ರಯ್ಯ ಸ್ವಾಮಿ ಮದರ್ಗಿಮಠ, ಸುಮಿತ್ರಾ ದುಬಲಗುಂಡಿ ಇದ್ದರು.
ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಚನ ನೃತ್ಯ ಪ್ರದರ್ಶನ ಮಾಡಿದರು.
ಸೇವಾ ನಿವೃತ್ತಿ ಹೊಂದಿರುವ ಜಗದೇವಿ ಹುಂಡೇಕರ, ರಾಜ್ಯಮಟ್ಟದ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಜಗದೀಶ ಮರಪಲ್ಲಿ, ಪಿಕೆಪಿಎಸ್ ನೂತನ ನಿರ್ದೇಶಕಿ ಮಲ್ಲಮ್ಮ ಬುರುಕಪಲ್ಲಿ ಅವರಿಗೆ ವಿಶೇಷ ಸತ್ಕಾರ ಮಾಡಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ರಾಮರೆಡ್ಡಿ ಪೋಲೀಸಪಾಟೀಲ, ಸಂಗಮೇಶ ರಗಟೆ, ಶಿವಮೂರ್ತಿ ಜಾಡರ, ವೀರಶೆಟ್ಟಿ ದುಬಲಗುಂಡಿ, ವಿಜಯರೆಡ್ಡಿ ಗುಡೆಪ್ಪನೋರ, ಅಣಿವೀರಯ್ಯ ಮದರ್ಗಿಮಠ, ಗುರುಶಾಂತ ಹುಂಡೇಕರ್, ಬಸವರಾಜ ಬುರುಕಪಲ್ಲಿ, ಶರಣು ಕಪಲಿ, ಅಶೋಕ ಸಜ್ಜನ, ಶರಣು ನೇತಿ , ವೀರೇಂದ್ರ ಕಿಲ್ಲಾ, ವಿಜಯಕುಮಾರ ಬೆಡಸೂರು, ದಿಲೀಪ ಬೆಡಸೂರು, ಈಶ್ವರಮ್ಮ ಮದರಗಿಮಠ, ವಿದ್ಯಾವತಿ ಮದರಗಿ, ನಾಗಮ್ಮ ಮಠ, ಸಾವಿತ್ರಿ ರಂಜೇರಿ, ವೀರಶೆಟ್ಟಿ ಜಾಡರ, ಶ್ರೀಕಾಂತ ಹೂಗಾರ, ಅಶ್ವಿನಿ ಸೀತಾಳಗೆರೆ, ರಾಚಮ್ಮ ಕೊಡಂಬಲ್, ಜ್ಯೋತಿ ಹಿಲಾಲಪುರ, ಪ್ರೇಮಾ ಕೊಡಂಗಲ್, ಸತ್ಯಮ್ಮ ಮೇದಾರ, ನೀಲಮ್ಮ ರಗಟೆ, ಲಕ್ಷ್ಮೀಬಾಯಿ ಮರಪಳ್ಳಿ ಮುಂತಾದವರು ಪಾಲ್ಗೊಂಡಿದ್ದರು.
