ಬೆಂಗಳೂರು:
ಬಸವಣ್ಣನವರ ಕಾಯಕ ದಾಸೋಹ ತತ್ವನಿಷ್ಠರಾದ ವಿಜಯಲಕ್ಷ್ಮಿ – ಕಿರಣ ಬೆಲ್ಲದ ಮತ್ತು ಮನೆಯವರು ಬೆಂಗಳೂರಿನ ದೇವನಹಳ್ಳಿಯಲ್ಲಿ ನಿರ್ಮಿಸಿದ ನೂತನ ಮನೆ “ಬಸವನೊಲುಮೆ”ಯ ಗುರುಪ್ರವೇಶವು ಡಿಸೆಂಬರ್ 14ರಂದು ಲಿಂಗಾಯತ ಧರ್ಮ ನಿಜಾಚರಣೆಯಂತೆ ನಡೆಯಿತು.

ಮೊದಲಿಗೆ ವಿಜಯಲಕ್ಷ್ಮಿ ಬೆಲ್ಲದ-ಕಿರಣ ಬೆಲ್ಲದ ಅವರಿಂದ ಷಟಸ್ಥಲ ಧ್ವಜಾರೋಹಣ ನೆರವೇರಿತು. ನಂತರ ತಲೆಮೇಲೆ ವಚನಗ್ರಂಥ, ಬಸವ ಭಾವಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು, ಬಸವಸ್ತುತಿಗೈಯುತ್ತ ನೂತನ ಮನೆಯ ಗುರುಪ್ರವೇಶವಾಯಿತು.

ಬಸವಕಲ್ಯಾಣದ ಪೂಜ್ಯ ಬಸವದೇವರು ಅವರೊಂದಿಗೆ ಶರಣ ಶ್ರೀಶೈಲ ಬಿರಾದಾರ ಅವರುಗಳು ವಚನಪಠಣ ಮಾಡುತ್ತಾ, ನೂರೆಂಟು ನಾಮಾವಳಿ ಹೇಳುತ್ತಾ ಬಸವಗುರು ಪೂಜೆ ನಡೆಸಿದರು. ಲಿಂಗಾಯತ ಧರ್ಮ ವಿಧಿವಿಧಾನಗಳೊಂದಿಗೆ ಗುರುಪ್ರವೇಶ ಕಾರ್ಯ ನೆರವೇರಿತು. ನಂತರ ಬಸವದೇವರು ತತ್ವಾನುಭಾವಗೈದರು.

ನೆರೆದವರೆಲ್ಲ ವಚನಗಳ ಪಠಣ, ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಗುರುಪ್ರವೇಶಕ್ಕೆ ಬಂದ ಎಲ್ಲರಿಗು ಬೆಲ್ಲದ ಕುಟುಂಬದವರು ಬಸವಮೂರ್ತಿ ಮತ್ತು ಸಸಿಯನ್ನು ಕಾಣಿಕೆಯಾಗಿ ನೀಡಿ ಶರಣರ ಪ್ರಕೃತಿ ಪ್ರೇಮ ಮೆರೆದರು.

ಡಿಸೆಂಬರ್ 14ರಂದು ಪೂಜ್ಯ ಬಸವಯೋಗಿ ಸ್ವಾಮೀಜಿ ಎಡೆಯೂರು ಸಿದ್ಧಲಿಂಗೇಶ್ವರ ಜ್ಯೋತಿಯೊಂದಿಗೆ ಆಗಮಿಸಿ ನೂತನ ಮನೆಯಲ್ಲಿ ಬೆಳಕು ಚೆಲ್ಲಿ, ನೂರೆಂಟು ನಾಮಾವಳಿಯೊಂದಿಗೆ ಬಸವಗುರು ಪೂಜೆ ನಡೆಸಿದರು. ಬಸವಾದಿ ಶರಣರ ಅರಿವಿನ ಅನುಭಾವ ನೀಡಿದರು.

ಕಾರ್ಯಕ್ರಮದಲ್ಲಿ ಡಿ. ಪಿ. ಪ್ರಕಾಶ, ಎನ್. ಚಂದ್ರಮೌಳಿ, ಮಂಗಳ ಕಪ್ಪರದ, ಪಂಚಾಕ್ಷರಿ ಹಳೆಬೀಡು, ಪ್ರಕಾಶ ಹೆಬ್ಬಳ್ಳಿ, ಪ್ರಭು ಡಿ.ಜಿ, ನಟ ಚೇತನ್, ಎಚ್. ವಿರೂಪಾಕ್ಷಪ್ಪ, ಚನ್ನಮಲ್ಲಿಕಾರ್ಜುನ, ಲಲಿತಾ ಬೆಲ್ಲದ, ಶಿವಾನಂದ ಬೆಲ್ಲದ, ಶಶಿಧರ ಬೆಲ್ಲದ, ಗುರುರಾಜ ಮನಹಳ್ಳಿ, ಸುಗೂರೇಶ ಬೆಲ್ಲದ, ಸುಮ್ಮಕ್ಕ ಮತ್ತಿತರರು ಇದ್ದರು.


ಶರಣು ಶರಣಾರ್ಥಿಗಳು
ಬೆಲ್ಲದ ಕುಟುಂಬದ “ಬಸವನೊಲುಮೆ “ಯ ಗುರು ಪ್ರವೇಶದ ನಿಜಾಚರಣೆಯನ್ನು ಕಂಡು ಮನಸ್ಸಿಗೆ ಸಂತೋಷವಾಯಿತು
Sharnu
ಬೆಲ್ಲದಂಥ ಶರಣ ಪರಿವಾರದವರ ‘ಬಸವನೊಲುಮೆ’ ಮಹಾಮನೆಯಲ್ಲಿ ಪರಮಪಿತ ಪರಮಾತ್ಮ ಲಿಂಗದೇವರ, ಧರ್ಮಪಿತ ಗುರುಬಸವಪ್ಪನವರ ಹಾಗೂ ಆದಿ ಶರಣ ಶರಣೆಯರ ಒಲುಮೆಯಿಂದ ಸದಾ ಸುಖ, ಶಾಂತಿ, ಸಮೃದ್ಧಿ ನೆಲೆಸಿರಲೆಂದು ತುಂಬು ಹೃದಯದಿಂದ ಹಾರೈಸುತ್ತೇವೆ.