ಬಸವದಳದಿಂದ ಅಂಬೇಡ್ಕರ್‌ ಪರಿನಿರ್ವಾಣ ದಿನ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್‌

ಯುವ ರಾಷ್ಟ್ರೀಯ ಬಸವ ದಳ ಹಾಗೂ ಡಾ.ಮಾತೆ ಮಹಾದೇವಿ ಬಸವ ಬಳಗದಿಂದ ನಗರದ ಮೈಲೂರ ಕ್ರಾಸ್‌ನಲ್ಲಿರುವ ಬಸವ ದಳದ ಕಚೇರಿಯಲ್ಲಿ ಭಾನುವಾರ ರಾತ್ರಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 69ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.

ಸಂವಿಧಾನ ಸಂರಕ್ಷಣಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ ಕಾರ್ಯಕ್ರಮ ಉದ್ಘಾಟಿಸಿ,‘ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳು ಇಂದಿನ ಯುವಕರಿಗೆ ಆದರ್ಶವಾಗಬೇಕಿದೆ. ಬುದ್ಧನು ತ್ರಿಪಿಟಿಕದಲ್ಲಿ ಸಾರಿದ ಸಮಾನತೆ ಮತ್ತು ಬಸವಣ್ಣನವರ ವಚನಗಳಿಂದ ನಡೆದ ಸಾಮಾಜಿಕ ಕ್ರಾಂತಿಯ ವಿಚಾರಗಳನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜಾರಿಗೆ ತಂದಿದ್ದಾರೆ’ ಎಂದು ಹೇಳಿದರು.

‘ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಸಮಾನತೆಯ ಹರಿಕಾರರು. ಇವರ ಆದರ್ಶಗಳನ್ನು ಮರೆಮಾಚಲು ಕೆಲವು ಸಂಘ–ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇವರ ಆದರ್ಶಗಳು ಸದಾ ಜನರ ಮಧ್ಯೆ ಜೀವಂತವಾಗಿರಬೇಕಾದರೆ ಲಿಂಗಾಯತರು, ದಲಿತರು, ಶೋಷಿತ ವರ್ಗದವರು ಒಂದಾಗಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಜಗತ್ತಿಗೆ ಸಾರಬೇಕಾಗಿದೆ’ ಎಂದು ತಿಳಿಸಿದರು.

ಪೂಜಾ ಗಣೇಶ ಬಿರಾದಾರ ಸಂವಿಧಾನ ಪೀಠಿಕೆ ಓದಿಸಿದರು. ನಂತರ ಅವರನ್ನು ಅವರನ್ನು ಸನ್ಮಾನಿಸಲಾಯಿತು ಮುಖಂಡರಾದ ಶಿವಶರಣಪ್ಪ ಹುಗ್ಗೆ ಪಾಟೀಲ, ಪ್ರದೀಪ ನಾಟೇಕರ್, ಶರಣಯ್ಯ ಸ್ವಾಮಿ, ಶಂಕರ ಬಿರಾದಾರ, ಜಗನ್ನಾಥ ಸ್ವಾಮಿ, ಸುರೇಶ ಸ್ವಾಮಿ, ಗಣೇಶ ಬಿರಾದಾರ, ಸಿದ್ದು ಶೆಟಕಾರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
Leave a comment

Leave a Reply

Your email address will not be published. Required fields are marked *