ಅಥಣಿ:
ಇಲ್ಲಿನ ಜಂಗಮಲಿಂಗ ಕ್ಷೇತ್ರ ಮೋಟಗಿಮಠ ಹಾಗೂ ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನದಿಂದ ನೀಡಲಾಗುವ 2026ನೇ ವರ್ಷದ ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿಗೆ ಕವಿ, ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ವೀರಣ್ಣ ಮಡಿವಾಳರ ಭಾಜನರಾಗಿದ್ದಾರೆ.
2026, ಜನೇವರಿ 1ರಂದು ಮೋಟಗಿಮಠದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವ ಹಾಗೂ ಗಡಿನಾಡು, ನುಡಿಹಬ್ಬ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ರಾಜ್ಯಮಟ್ಟದ ಈ ಪ್ರಶಸ್ತಿ 10 ಸಾವಿರ ರೂ. ನಗದು ಬಹುಮಾನ ಮತ್ತು ತಾಮ್ರ ಫಲಕ, ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ ಎಂದು ಮೋಟಗಿಮಠದ ಪ್ರಭುಚೆನ್ನಬಸವ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
