ಕೇರಳ ವಧು, ಕರ್ನಾಟಕ ವರ, ಬಸವ ತತ್ವದ ಕಲ್ಯಾಣ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ ವಚನ ಪ್ರತಿಜ್ಞೆ ಓದಿದ ವಧು, ವರರು

ಬೆಂಗಳೂರು:

ಸಮಸಮಾನತೆಯ ಆಶಯದ ಬಸವತತ್ವದಂತೆ ಕಲ್ಯಾಣ ಮಹೋತ್ಸವಕ್ಕೆ ಕೇರಳದ ನಾಯನಾರ್ ಮತ್ತು ಕರ್ನಾಟಕದ ವಲ್ಲೆಪೂರೆ ಲಿಂಗಾಯತ ಕುಟುಂಬಗಳು ಸಾಕ್ಷಿಯಾದವು.

ಬೀದರಿನ ಬೆಳಕುಣಿ ಗ್ರಾಮದ ಚೌದರಿ ಸುರೇಖಾ – ಶಿವಶರಣಪ್ಪ ವಲ್ಲೆಪೂರೆ ಶರಣ ದಂಪತಿಯ ಮಗನಾದ “ಡಾ. ಆಕಾಶ” ಜೊತೆಗೆ “ವಿಷ್ಣುಪ್ರಿಯಾ” (ವಚನಪ್ರಿಯಾ) ಅವರ ಕಲ್ಯಾಣವು ಬೆಂಗಳೂರಿನ ಬಯ್ಯಪ್ಪನಹಳ್ಳಿ ಜಿ. ಕೆ. ಸೆಲೆಸ್ಟಾ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ 25ರಂದು ನಡೆಯಿತು.

ಬೀದರದ ಕಲ್ಯಾಣ ಮಹಾಮನೆಯ ಸದ್ಗುರು ಬಸವಪ್ರಭು ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಚನಗಳ ಆಧಾರಿತ ಈ ಮದುವೆ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.

ಬೀದರ ಜಿಲ್ಲೆಯ ಶಿವಶರಣಪ್ಪ ವಲ್ಲೆಪೂರೆ ಅವರು ಬಸವತತ್ವ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಸವತತ್ವವನ್ನು ವ್ಯಾಪಕವಾಗಿ ಪ್ರಚಾರಗೈಯುತ್ತಿದ್ದಾರೆ.

ವಿಷ್ಣುಪ್ರಿಯಾ ಕೇರಳ ಮೂಲದ ಎನ್. ಮೀನಾಮಣಿ – ಎ. ರಾಧಾಕೃಷ್ಣನ್ ಅವರ ಮಗಳಾಗಿರುವರು. ವಧು ಡಾ. ವಿಷ್ಣುಪ್ರಿಯಾ ಮತ್ತು ವರ ಡಾ. ಆಕಾಶ ಅವರಿಗೆ ಅಂದು ಬೆಳಗಿನ ಜಾವ ಇಬ್ಬರಿಗೂ ಲಿಂಗಪೂಜೆ ಮಾಡಿಸಿ, ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ ವಚನ ಪ್ರತಿಜ್ಞೆಯನ್ನು ಪೂಜ್ಯ ಸ್ವಾಮೀಜಿಯವರು ಭೋಧಿಸಿದರು.

ಡಾಕ್ಟರ್ ಆಪ್ ಫಾರ್ಮಸಿ ಮುಗಿಸಿ ಉನ್ನತ ಹುದ್ದೆಯಲ್ಲಿ ಇರುವ ನವಜೋಡಿಗಳು ಬಸವಧರ್ಮವನ್ನು ಪಾಲಿಸಲು ಮುಂದಾಗಿದ್ದಾರೆ. ಕೆರಳದಿಂದ ಆಗಮಿಸಿದ ನಾಯನಾರ್ ಕುಟುಂಬದ ಸದಸ್ಯರು ವಿನೂತನವಾಗಿ ನೆರವೇರಿದ ಬಸವತತ್ವದ ಮದುವೆ, ಸರಳ ಸಮಾರಂಭವನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

ಬಸವಾದಿ ಶರಣರ ಸಂದೇಶ ಸಾರುವ ಪುಸ್ತಕವನ್ನು  ಮದುವೆಯ ಆಮಂತ್ರಣ ರೂಪದಲ್ಲಿ ಪ್ರಕಟಿಸಿ ಹಂಚಿರುವುದು ಈ ಮದುವೆಯ ವಿಶೇಷ. ತಮ್ಮ ಮೂರು ಜನ ಮಕ್ಕಳ ಮದುವೆಯನ್ನು ಇದೇ ತೆರನಾಗಿ ಪ್ರಕಟಿಸಿ ತತ್ವ ಪ್ರಸಾರ ಮಾಡಿರುವರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *