ಬೀದರ್
ಹನ್ನೆರಡನೆ ಶತಮಾನದಲ್ಲಿ ಸಾವಿರಾರು ಶರಣರನ್ನು ಕೊಲೆ ಮಾಡಿದ್ದ, ವಚನ ಸಾಹಿತ್ಯ ಸುಟ್ಟುಹಾಕಿದ್ದ ಕೊಂಡಿ ಮಂಚಣ್ಣ, ಶೆಟ್ಟಿ, ಬಿಜ್ಜಳ ಅವರ ವಂಶಸ್ಥರು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತಿರುವುದು ಯಾಕೆ? ಇವರು ನೇರವಾಗಿ ಹಿಂದೂ ಸಮಾವೇಶ ಮಾಡಬಹುದಾಗಿತ್ತು.
ಹಿಂದೂ ಧರ್ಮ ಅಲ್ಲ, ಹಿಂದೂ ಭಾರತ ದೇಶದ ಜೀವನಶೈಲಿ ಎಂದ ಮೋದಿಯವರ ಹೇಳಿಕೆಗೆ ಯಾವ ಹಿಂದೂ ಗುರುಗಳು , ಹಿಂದೂ ನಾಯಕರು ಮತ್ತು ಹಿಂದೂ ಸಂಘಟನೆಗಳು ವಿರೋಧ ಮಾಡಿಲ್ಲ, ಏಕೆ?
ಲಿಂಗಾಯತ ಧರ್ಮದ ಮಠಾಧಿಪತಿಗಳು, ಪೂಜ್ಯರು ಮತ್ತು ನಾಯಕರನ್ನು ಹಿಂದೂ ಧರ್ಮದ ವಿರೋಧಿ ಎಂದು ಏಕೆ ಬೊಬ್ಬೆ ಹೊಡೆಯುತ್ತೀರಿ, ನಮ್ಮ ಲಿಂಗಾಯತ ಧರ್ಮದ ಬಸವಾದಿ ಶರಣರ ತತ್ವ ಸಿದ್ಧಾಂತ ನಾವು ಪ್ರಚಾರ ಮಾಡುತ್ತೇವೆ. ಇದರಿಂದ ಈ ಹಿಂದೂಗಳಿಗೆ ಏಕೆ ನೋವಾಗುತ್ತದೆ?
ಬಸವಣ್ಣವರನ್ನು ಗಡಿಪಾರು ಮಾಡಿದ ಹನ್ನೆರಡನೆ ಶತಮಾನದ ವಂಶಸ್ಥರು ಇನ್ನೂ ನಾಡಿನಲ್ಲಿ ಇದ್ದಾರೆ. ಅವರೇ ಕನ್ನೇರಿ ಸ್ವಾಮೀಜಿ, RSSನ ಚಕ್ರವರ್ತಿ ಸೂಲಿಬೆಲೆ, ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ್ದವರಿಗೆ ಪಾಸ್ ಕೊಟ್ಟ ದೇಶದ್ರೋಹಿ ಪ್ರತಾಪ ಸಿಂಹ, ಬಿಜೆಪಿ ರಾಷ್ಟ್ರೀಯ ನಾಯಕ ಬಿ ಎಲ್ ಸಂತೋಷ, ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ, ಕೆ .ಎಸ್. ಈಶ್ವರಪ್ಪ ಮುಂತಾದವರು.
ಈ ಸಮಾವೇಶ ಮಾಡುವವರಿಗೂ ಬಸವತತ್ವಕ್ಕೂ ಏನು ಸಂಬಂಧ? ಸನಾತನ ವೈದಿಕ ಧರ್ಮದ ವಿರೋಧ ಮಾಡಿಯೇ ಬೌದ್ಧ, ಜೈನ, ಲಿಂಗಾಯತ ಮತ್ತು ಸಿಖ್ ಧರ್ಮಗಳು ಭಾರತದಲ್ಲಿ ಹುಟ್ಟಿದ್ದು. ಆವಾಗ ಹಿಂದೂ ಶಬ್ದವೇ ಇದ್ದಿಲ್ಲ, ಹಿಂದೂ ಶಬ್ದ ಜನಪ್ರಿಯವಾಗಿದ್ದು ನಂತರವೇ.
ಇಲ್ಲಿ ಹಿಂದೂ ಧರ್ಮ ಒಡೆಯುವ ಪ್ರಶ್ನೆ ಬರುವುದಿಲ್ಲ. ಜಗತ್ತಿನ ಎಲ್ಲಾ ಧರ್ಮಗಳಲ್ಲಿ ಕೆಲವೊಂದು ಸಾಮ್ಯತೆ ಇದ್ದೇ ಇರುತ್ತವೆ. ಎಲ್ಲವೂ ಮಾನವ ಜೀವನ ಶೈಲಿ ರೂಪಿಸಲು ಹುಟ್ಟಿದ್ದ ಧರ್ಮಗಳು. ಉಡುಪಿ ಮಠಗಳ ಪೀಠಾಧಿಪತಿ ಮುಸ್ಲಿಂರ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಧರ್ಮದ ಮತ್ತು ಇಸ್ಲಾಂ ಧರ್ಮದ ಸಾಮ್ಯತೆ ಹೇಳಿದ್ದ ಪುರಾವೆಗಳು ಇವೆ.
ಇವರಿಗೆ ಬಸವಾದಿ ಶರಣರ ಬಗ್ಗೆ ಅಸೂಯೆ, ದ್ವೇಷ, ಹೊಟ್ಟೆಕಿಚ್ಚು ಮತ್ತು ಶತ್ರುತ್ವ ಭಾವನೆ ಇದೆ. ಅದಕ್ಕೆ ಬಸವತತ್ವ ಸಿದ್ದಾಂತ ಬಲವಾಗಿ ವಿರೋಧಿಸುತ್ತಾರೆ. ಇಂತಹ ಮೂಢರನ್ನು ನಿರ್ಲಕ್ಷಿಸಬೇಕು. ಇವರಿಗೆ ದೇವರು ಸೃಷ್ಟಿಕರ್ತ ಲಿಂಗದೇವರು, ಪರಶಿವ ಮತ್ತು ಬಸವಣ್ಣನವರು ಒಳ್ಳೆಯ ಬುದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
