ಮಾತೆ ಮಹಾದೇವಿಯವರ ಶಿಷ್ಯರು ಇನ್ನೂ ಜೀವಂತವಾಗಿದ್ದೇವೆ.
ಬಸವಕಲ್ಯಾಣ
ಬಸವ ಸಂಸ್ಕೃತಿ ಅಭಿಯಾನದ ವಿರುದ್ಧವಾಗಿ ಬಬಲೇಶ್ವರದಲ್ಲಿ ಆಯೋಜಿಸಿದ್ದ “ಬಸವಾದಿ ಶರಣರ” ಹಿಂದೂ ಸಮಾವೇಶದಲ್ಲಿ ಅಪ್ರಬುದ್ಧವಾಗಿ ಮಾತನಾಡಿ, ಬಸವಾದಿ ಪ್ರಮಥರ ಮೂಲ ಆಶಯಗಳನ್ನು ತಪ್ಪುತಪ್ಪಾಗಿ ಅರ್ಥೈಸಿರುವ ಕನ್ನೇರಿ ಸ್ವಾಮಿಯ ಪ್ರತಿಯೊಂದು ಮಾತುಗಳಿಗೆ ಉತ್ತರಿಸುವ ಸವಾಲನ್ನು ಸ್ವೀಕರಿಸಲು ನಾವು ಸದಾ ಸನ್ನದ್ಧರಾಗಿದ್ದೇವೆ.
ಕನ್ನೇರಿ ಸ್ವಾಮಿಗೆ ವಚನಗಳಲ್ಲಿನ ತತ್ವಜ್ಞಾನ ಮತ್ತು ದಾರ್ಶನಿಕತೆಯ ಕೊರತೆ ಎದ್ದು ಕಾಣುತ್ತಿದೆ. ಅವರ ಪ್ರತಿಯೊಂದು ಮಾತುಗಳು ಪ್ರಚೋದನಾತ್ಮಕ ಮತ್ತು ದ್ವೇಷದಿಂದ ಕೂಡಿವೆ.
‘ಇಲಿಗೆ ಹೊಡೆಯಲು ಹೋಗಿ ಗಣಪನಿಗೆ ಪೆಟ್ಟು ಕೊಟ್ಟಂತೆ’ ಎಂಬಂತೆ ಎಂ.ಬಿ. ಪಾಟೀಲ, ಭಾಲ್ಕಿ ಶ್ರೀ, ನಿಜಗುಣಾನಂದ ಸ್ವಾಮೀಜಿ ಮತ್ತು ಸಾಣೇಹಳ್ಳಿ ಶ್ರೀಗಳಿಗೆ ವೈಯಕ್ತಿಕವಾಗಿ ನಿಂದಿಸಲು ಹೋಗಿ ಬಸವಣ್ಣನವರ ಹಾಗೂ ಅವರ ವಚನಗಳ ತಾತ್ವಿಕತೆಗೆ ಧಕ್ಕೆಯನ್ನುಂಟು ಮಾಡುತ್ತಿರುವುದು ಅಜ್ಞಾನದ ಪರಮಾವಧಿಯಾಗಿದೆ.
ಕನ್ನೇರಿ ಶ್ರೀಗಳ ಮಾತುಗಳಲ್ಲಿಯೇ ಸವಾಲಿನ ಪ್ರಶ್ನೆಗಳು ಉದ್ಭವಿಸುತ್ತಿವೆ, ಇವಕ್ಕೆ ಅವರು ಉತ್ತರಿಸಲಿ.
1) ಬಸವಣ್ಣನವರ ಯಾವ ವಚನದಲ್ಲಿಯೂ ಲಿಂಗಾಯತ ಧರ್ಮದ ಪದ ಬಂದಿಲ್ಲ ಎಂದಿರುವಿರಿ.
ಮೊದಲು ಹಿಂದೂಧರ್ಮ ಎಂಬ ಪದ ಯಾವ ವೇದ, ಉಪನಿಷತ್, ಆಗಮ, ಶಾಸ್ತ್ರಗಳಲ್ಲಿ ಬಂದಿದೆ, ಆ ಪದವನ್ನು ಶರಣರ ಯಾವ ವಚನಗಳಲ್ಲಿ ಬಳಿಸಿರುವರು ಹೇಳಿ.
2) ಬಸವಣ್ಣನವರನ್ನು ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದಿರುವಿರಿ ಹಾಗಾದರೆ ನಿಮ್ಮ ಮಠ ಬಸವಾದಿ ಶರಣರ ಪರಂಪರೆಯ ಮಠವಾಗಿದ್ದರೂ ಅದರ ಒಂದಿಷ್ಟು ಜ್ಞಾನವಿಲ್ಲದೇ ವೈದಿಕರ ಗುಲಾಮರಾಗಿ ಸನಾತನಧರ್ಮ ಪ್ರಚಾರ ಮಾಡುತ್ತಿರುವುದು ನೀವು ಯಾರ ಪೇಟೆಂಟ್ ಆಗಿದ್ದೀರಿ?
3) ವಿಭೂತಿ ಎದ್ದು ಕಾಣುವಂತೆ ಹಚ್ಚಿಕೊಳ್ಳುತ್ತಾರೆ ಅವರಂತೆ ನಾನು ಡ್ರಾಮಾ ಮಾಡುವುದಿಲ್ಲ ಎಂದಿರುವಿರಿ, ಹಾಗಾದರೆ ಕುಂಕುಮವನ್ನು ಎದ್ದು ಕಾಣುವಂತೆ ಹಚ್ಚಿಕೊಂಡು ನಾನು ಸನಾತನಿ ಅನ್ನುತ್ತಿರುವುದು ಇದ್ಯಾವ ನಾಟಕ?
3) ಬಸವಣ್ಣನವರು ಕೊಟ್ಟ ಇಷ್ಟಲಿಂಗವನ್ನು ಕಲ್ಲು ದೇವರು ಎಂದಿದ್ದೀರಿ. ಇಷ್ಟಲಿಂಗ ದೇವನ ಚೈತನ್ಯದ ಕುರುಹು ಎಂಬ ಸಾಮಾನ್ಯ ಜ್ಞಾನವೂ ಗೊತ್ತಿಲ್ಲದ ನೀವು ಹೆಡ್ಡ, ದಡ್ಡ ಎಂಬುದು ಅರ್ಥವಾಯಿತು. “ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ ಲಿಂಗದ ಮೇಲೆ ನಿಷ್ಟೆ ಇಲ್ಲದ ಭಕ್ತ ಇದ್ದಡೇನು ಶಿವ ಶಿವ ಹೋದಡೇನು” ಎನ್ನುವಂತೆ ಲಿಂಗದ ಮೇಲೆ ನಿಷ್ಟೆ ಮತ್ತು ಗುರು ಹೇಳಿದ ಮಾತನ್ನು ಮರೆತ ನಿಮಗೆ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆಯಿಲ್ಲ.
4) ವಚನಾಂಕಿತಗಳು ಸನಾತನ ಧರ್ಮದ ದೇವರು ಎಂದಿರುವಿರಿ. ವಚನಾಂಕಿತಗಳ ಸತ್ಯಾಸತ್ಯತೆ ಅರಿಯದ ನಿಮ್ಮಂತಹ ಭೂಪರು ಮುಂದೆ ಬರಬಹುದೆಂದು, ಈ ವಚನಾಂಕಿತಗಳ ಸಮಸ್ಯೆ ಬರಬಾರದೆಂದು ಹರ್ಡೇಕರ್ ಮಂಜಪ್ಪನವರು (ಬಸವ ಬೋಧಾಮೃತ) ಮತ್ತು ಪೂಜ್ಯ ಮಾತೆ ಮಹಾದೇವಿಯವರು (ಲಿಂಗದೇವನ ಲೀಲಾ ವಿಶೇಷ) ಹಾಗೂ ಮನಗುಂಡಿಯ ಬಸವಾನಂದ ಸ್ವಾಮಿಗಳು (ವಚನ ಸಾಹಿತ್ಯದ ಅಂಕಿತಗಳ ರಹಸ್ಯ) ವಚನಗಳ ಅಂಕಿತದಲ್ಲಿ ಬರುವ ನಾಮಗಳೆಲ್ಲ ಲಿಂಗಾಯತ ಧರ್ಮದ ದೇವರು ಪರಶಿವ(ಲಿಂಗದೇವ)ನನ್ನು ಸೂಚಿಸುತ್ತವೆ ಎಂದು ಸಂಶೋಧಿಸಿದ್ದಾರೆ. ಅಂಕಿತಗಳ ಸತ್ಯವನ್ನು ನಾವು ಅರಿತಿದ್ದೇವೆ ನಿಮಗೆ ತಿಳಿಸಲು ಸದಾ ಸಿದ್ಧ.
5) ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಶ್ರೀಗಳು ಮೃದು ಸ್ವಭಾವದವರು. ಬಸವಣ್ಣನವರ ನಡೆಯನ್ನು ಅನುಸರಿಸಿ, ನೀವು ಆಡಿದ ಅಸಂವಿಧಾನಿಕ ಪದಗಳನ್ನು ಇನ್ನು ಮುಂದೆ ಬಳಸಬೇಡಿ ಎಂದು ಕೇಳಿಕೊಂಡಿದ್ದಾರೆ. ಅವರ ಮಾತುಗಳನ್ನು ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಒಳಗು ಮಾಡಿ ಜನಗಳಿಂದ ಚಪ್ಪಾಳೆ ಗಿಟ್ಟಿಸಿದ್ದೀರಿ ಗೌರವಾನ್ವಿತ ಪೂಜ್ಯರನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವುದು ಸರಿಯೇ?
6) ತಮ್ಮ ಮಾತಿನ ಸವಾಲುಗಳು ನಮ್ಮನ್ನು ವಿಚಲಿತ ಮಾಡಲು ಸಾಧ್ಯವಿಲ್ಲ. ನಮ್ಮ ಗುರುಗಳು ಮಾತೆ ಮಹಾದೇವಿಯವರು ಇದ್ದಾಗ ತಾವು ಬಾಲ ಮುಚ್ಚಿಕೊಂಡು ಮಠದಲ್ಲಿ ಬಿಲ ಸೇರಿಕೊಂಡಿದ್ದೀರಿ. ಈಗ ಲಿಂಗಾಯತ ಮಠಾಧೀಶರ ಸಾತ್ವಿಕತೆಯ ನಿಲುವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವಿರಿ. ಅವರು ನಮ್ಮ ಗುರುಗಳಂತೆ ಮೈಕೊಡವಿ ನಿಂತರೆ ನಿಮ್ಮ ಪರಿಸ್ಥಿತಿ ನೆನೆಯಲು ಸಾಧ್ಯವಿಲ್ಲ ಆ ಕಾಲ ಬಂದಿದೆ.
ಮಾತೆ ಮಹಾದೇವಿಯವರ ಶಿಷ್ಯರು ಇನ್ನೂ ಜೀವಂತವಾಗಿದ್ದೇವೆ.
7) ಬಸವತತ್ವ ಮಠಗಳೆಲ್ಲ ಹಿಂದೂ ಸನಾತನದ್ದವು ಮತ್ತು ಜನಗಳು ಕಟ್ಟಿದ್ದು ಹಿಂದೂ ಸನಾತನದ ಹೆಸರಿನ ಮೇಲೆ ಬದುಕುತ್ತಿವೆ ಎಂದು ಹೇಳಿರುವಿರಿ, ಐತಿಹಾಸಿಕ ಜ್ಞಾನವಿಲ್ಲದ ಈ ಮಾತು ನಿಮ್ಮ ದಡ್ಡತನಕ್ಕೆ ಕನ್ನಡಿಯಾಗಿದೆ.
ಮುರುಘಾಮಠ, ಷಣ್ಮುಖಸ್ವಾಮಿ ಮಠ, ಚಿತ್ತರಗಿ ಮಠ, ಅಥಣಿ ಗಚ್ಚಿನ ಮಠ, ಗದಗ-ಡಂಬಳ ಮಠ, ಮೂರು ಸಾವಿರ ಮಠ, ಭಾಲ್ಕಿ ಮಠ, ಬಸವ ಧರ್ಮ ಪೀಠ, ಹುಲಸೂರು ಮಠ, ಕಿತ್ತೂರು ಮಠ, ಹರಿಹರ ಮಠ, ಸಾಣೇಹಳ್ಳಿ ಮಠ ಮತ್ತು ನೀವಿರುವ ಕಾಡಸಿದ್ದೇಶ್ವರ ಮಠ ಇನ್ನಿತರ ಸಾವಿರಾರು ಮಠಗಳು ಬಸವ ಧರ್ಮ ಪ್ರಚಾರದ ದೃಷ್ಟಿಕೋನಕ್ಕಾಗಿಯೇ ಹುಟ್ಟಿಕೊಂಡಿವೆ.
ಲಿಂಗಾಯತ ರಾಜ, ರಾಣಿಯರು, ಉದ್ಯೋಗಪತಿಗಳು, ಲಿಂಗಾಯತ ಕಾಯಕ ಜೀವಿಗಳು ಶ್ರಮವಹಿಸಿ, ಬೆವರು ಸುರಿಸಿ ಲಿಂಗಾಯತ ಧರ್ಮ ಬೆಳೆಸಲು ಮಠವನ್ನು ಕಟ್ಟಿದ್ದಾರೆ. ಇಂತಹ ಮಠಗಳಿಗೆ ಸನಾತನ ಧರ್ಮದ ನಿಮ್ಮಂತಹ ವೇಷಧಾರಿಗಳು ಬಂದು ಸೇರಿದ್ದೀರಿ. ಲಿಂಗಾಯತರು ತಮ್ಮ ಧರ್ಮದ ನಿಷ್ಟೆ ಗೊತ್ತಾದರೆ ನಿಮಗೇ ಅನ್ನ ಸಿಗಲಿಕ್ಕಿಲ್ಲ ಎಂಬ ಎಚ್ಚರಿಕೆ ನಿಮಗಿರಲಿ.
8) ಬಸವ ಸಂಸ್ಕೃತಿ ಅಭಿಯಾನದ ಲೆಕ್ಕ ಕೇಳುವ ನೀವು ಬಬಲೇಶ್ವರದಲ್ಲಿ ನಡೆದ ಕಾರ್ಯಕ್ರಮ ಯಾವ ದುಡ್ಡಿನಿಂದ ಆಯೋಜಿಸಿರುವಿರಿ ಎಂಬುದು ಲೆಕ್ಕ ಕೊಡಬೇಕು.
9) ಸೂ…ಮಕ್ಕಳು, ಮೆ…ಮೆ… ಹೊಡೆಯಬೇಕು ಎನ್ನುವ ಆಕ್ಷೇಪಾರ್ಹ ಮಾತುಗಳು ವಿಜಾಪೂರು ಭಾಗದ ಪ್ರಾದೇಶಿಕತೆ ಎಂದು ಇಡೀ ದೇಶದಲ್ಲಿ ವಿಜಾಪೂರು ಜನಗಳ ಮಾನ ಹರಾಜು ಹಾಕಿದ ಭೂಪ ನೀನು. ಮಾತಿನ ಡೈಲಾಗಗಳನ್ನು ಹೇಳಿ ಧರ್ಮ ಧರ್ಮಗಳಲ್ಲಿ ದ್ವೇಷವನ್ನು ಬಿತ್ತುತ್ತಿರುವ ನಿನಗೆ ಸುಪ್ರೀಮ್ ಕೋರ್ಟ್ ಛೀಮಾರಿ ಹಾಕಿದ್ದರೂ ನಿನ್ನ ವರಸೆ ಬಿಡುತ್ತಿಲ್ಲವೆಂದರೆ ನೀನು ಮಾನಸಿಕ ಹುಚ್ಚನೇ ಸರಿ. ನಿಮ್ಮ ಈ ನಡೆಯನ್ನು ಒಪ್ಪಿಕೊಳ್ಳುವ ರಾಜಕಾರಣಿಗಳು, ಮಠಾಧೀಶರು ಅಪ್ರಬುದ್ಧರೆ ಸರಿ.
ಮತ್ತೊಮ್ಮೆ ನಿಮ್ಮ ಎಲ್ಲಾ ಸವಾಲುಗಳನ್ನು ಸ್ವೀಕರಿಸುತ್ತೇವೆ ಮತ್ತು ನೀವು ಕರೆದಲ್ಲಿ ನಿಮಗೆ ನಮ್ಮ ಧರ್ಮವನ್ನು ಅರ್ಥೈಸಲು ಸಿದ್ಧರಿದ್ದೇವೆ. ನಾವೆಂದೂ ಸನಾತಿನಿಗಳಲ್ಲ ಬಸವ ಧರ್ಮಿಯರು, ಲಿಂಗವಂತ ಧರ್ಮಿಯರು. ಬಸವ ಧರ್ಮಕ್ಕೆ ಧಕ್ಕೆ ಬಂದಾಗ ನಮ್ಮತನವನ್ನು ಮೆರೆದು ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹಗಲಿರುಳು ಹೋರಾಡುತ್ತೇವೆ. ನಾವು ಸುಮ್ಮನೇ ಕೂಡುವವರಲ್ಲ, ನಿಮ್ಮನ್ನೂ ಸುಮ್ಮನೇ ಕೂಡಲು ಬಿಡುವುದಿಲ್ಲ. ಮೂರು ಪರ್ಸೆಂಟ್ ಇರುವ ಸನಾತನಿಗಳಿಂದ ಆಳಿಸಿಕೊಳ್ಳುವವರಲ್ಲ, ಮುಕ್ಕೋಟಿ ಜನರನ್ನು ಸದ್ಧರ್ಮದಿಂದ ಮುನ್ನಡೆಸುವ ಸ್ವತಂತ್ರ ಧೀರ ಲಿಂಗಾಯತ ಧರ್ಮಿಯರು ನಾವು.
- ಭಾರತ ದೇಶ ಜೈ ಬಸವೇಶ
- ಒಬ್ಬ ಲಿಂಗಾಯತ ಕೋಟಿ ಲಿಂಗಾಯತ
- ಬಸವದಳದ ವ್ಯಕ್ತಿ ದೇಶಕ್ಕೊಂದು ಶಕ್ತಿ
- ಕಟ್ಟುವೆವು ನಾವು ಕಟ್ಟುವೆವು ಕಲ್ಯಾಣ ರಾಜ್ಯ ಕಟ್ಟುವೆವು.

ಹೊಡೆದಹಾಗಿದೆ ಕನ್ನೇರಿಗೆ. ಶರಣು ಶರಣಾರ್ಥಿಗಳು
ಅವರು ಈ ಸವಾಲನ್ನು ಸ್ವೀಕರಿಸಿ ಬಸವ ಭಕ್ತರನ್ನು ಇದಿರುಗೊಳ್ಳಬೇಕು ಇಲ್ಲವೆಂದರೆ ಸೋಲೊಪ್ಪಿಕೊಳ್ಳಬೇಕು
A S Araganji
Pratibha coloney
Kelageri road
Dharwad
So beautiful !
ಯಾಕೆ ಈ ಸೋಲು ಗೆಲುವು ಬಸವಣ್ಣ ನವರ ತತ್ವದ ಪ್ರಕಾರ ಎಲ್ಲರು ಒಂದಾಗಬೇಕು
ಬಹಳ ಸಮರ್ಥ ಸಮರ್ಪಕ ಉತ್ತರ ಕೊಟ್ಟಿರುವಿರಿ ಗುರುಗಳೆ ಶರಣುಶರಣಾರ್ಥಿಗಳು. 🙏🙏
ಉತ್ತರಿಸುವಷ್ಟು ದಾರ್ಶನಿಕ ಜ್ಞಾನ ಕನ್ನೇರಿ ಸ್ವಾಮಿಗೆ ಇಲ್ಲಬಿಡಿ. ಬಸವ ಭಕ್ತರು ಜಾಗೃತರಾಗಿದ್ದೇವೆ ಅವರಿಗೆ ಸಮಾವೇಶದ ಮೂಲಕ, ಸಾಹಿತ್ಯ, ಹೇಳಿಕೆ, ಉಪನ್ಯಾಸ, ಆಧಾರ,, ಸಂಶೋಧನೆ ಮೂಲಕ ಸತ್ಯವನ್ನು ಸಾರುವ ಎದೆಗಾರಿಕೆ ಲಿಂಗಾಯತರಿಗೆ ಬಂದಿದೆ.
👌🏻👌🏻ಜಯ್ ಲಿಂಗಾಯತ ಜಯ್ ಬಸವ 🙏🏻🙏🏻
ಈ ಘಮಂಡಿ ಕನ್ನೇರಿಯ 👅 ಯು ಹೊಲಸು ನಾರುತ್ತಿದೆ.ಬಸಣ್ಣನವರಿಗೆ ಸಂಬಂಧವೇ ಇಲ್ಲದ ಕಾಡು ಹಂದಿ ಮಾರಿ ಮಾರೆಮ್ಮನ ಶಿಷ್ಯನಂತೆ ಹಣೆಯ ಮೇಲೆ ಅಂಗೈ ಅಗಲದ ಕುಂಕುಮ ಧರಿಸಿಕೊಂಡು ಥೇಟ್ ರಣಚಂಡಿಯಂತೆ ಕಾಣುವ ಇವನಿಗೆ ಬಾಯಲ್ಲಿ ಬಸವಣ್ಣನವರ ಹೆಸರು ಹೇಳಲು ಯಾವ ನೈತಿಕತೆಯೂ ಇಲ್ಲ.ಇವನಂಥವನಿಂದ ನಾವು ಏನು ನಿರೀಕ್ಷಿಸಲು ಸಾಧ್ಯವಿಲ್ಲ. ಲಿಂಗಾಯತರರು ಒಂದಾಗದಿದ್ದರೆ ಇಂಥಹ ಕಜ್ಜಿ 🐶 🐕 ಗಳು ಬೊಗಳುತಲೇ ಇರುತ್ತವೆ.ಎದ್ದೇಳಿ ಲಿಂಗಾಯತ ಮಠಾಧೀಶರೇ ನಿಮ್ಮ ಬೆಂಬಲಕ್ಕೆ ನಾವು ಟೊಂಕಕಟ್ಟಿ ನಿಲ್ಲುತ್ತೇವೆ.
ಒಬ್ಬ ಕಾವಿಧಾರಿ ಹೀಗೆ ಮಾತನಾಡುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ತಾವು ನಂಬಿದ ಹಿಂದುತ್ವದ ಮಾನ ಹರಾಜು ಹಾಕಿದ್ದಾರೆ. ಹಿಂದುತ್ವವನ್ನು ಮುಂದೆ ಒಂದು ದಿನ ಇವರೇ ನಾಶಮಾಡುತ್ತರೆ ಎನ್ನುವುದಕ್ಕೆ ಇವರ ಮಾತುಗಳೇ ಸಾಕ್ಷಿ. “ಅನಾಗರಿಕರಲ್ಲಿ ಅನಾಗರಿಕರು – ಅಸಂಸ್ಕೃತರಲ್ಲಿ ಅಸಂಸ್ಕೃತರು” ಈ ಕನ್ಹೇರಿ ಸ್ವಾಮಿಗಳು.
ನಾವು ಲಿಂಗಾಯತ ಧರ್ಮ ಬೆಳೆಸುವ ಕಾರ್ಯ ಮಾಡದೇ ಇಂತಹ ಅನಾವಶ್ಯಕ ವಿವಾದಗಳನ್ನು ಕೇಳುತ್ತ, ನೋಡುತ್ತ, ವಿರೋಧಿಸುತ್ತ ಇರಬೇಕೆಂಬ ಹುನ್ನಾರಗಳಿವು. ವಚನ ದರ್ಶನದಿಂದ ಹಿಡಿದು ಒಂದಾದ ಮೇಲೆ ಒಂದು ಗೊಂದಲಹುಟ್ಟು ಹಾಕುತ್ತಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಬರಬಹುದು.
ಉದ್ದೇಶಪೂರ್ವಕವಾಗಿ ಮಾಡುತ್ತಿರುವಾಗ ; ನಾವು ಪರ್ಯಾಯವಾಗಿ ಮನೆ ಮನೆಗೆಧರ್ಮಪ್ರಸಾರ ಮಾಡುವ ಅಗತ್ಯ ತುಂಬಾ ಇದೆ.
“ಎನಿಸು ಕಾಲ ಕಲ್ಲು ನೀರೊಳಗಿರ್ದರೇನು, ನೆನೆದು ಮೃದುವಾಗಬಲ್ಲುದೆ ?”
“ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರೆಗೋರ್ಕಲ್ಲ ಮೇಲೆ ಮಳೆಗರೆದರಾ-ಕಲ್ಲುನೀರ್ಕೊಳ್ಳಬಹುದೆ ಸರ್ವಜ್ಞ”
ಎಂಬಂತೆ ಹುಚ್ಚರು, ಮೂರ್ಖರನ್ನು ಎದುರಿಸುವುದು ಒಂದು ಪಾಲಾದರೆ ; ನಮ್ಮ ಧರ್ಮ ಬೆಳೆಸುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ನೂರು ಪಾಲು ಹೆಚ್ಚು ಮಾಡಬೇಕಾಗಿದೆ.
ಇಂತಹ ಸಂದರ್ಭದಲ್ಲಿ ಬಸವತತ್ವ ಅನುಯಾಯಿಗಳು ನಾವೆಲ್ಲ ತಪ್ಪದೇ ಜಾಗೃತ ಚಿಂತನೆ ಮಾಡಲೇಬೇಕು. ಒಂದಿಷ್ಟು ಚಿಂತನೆಗಳು ಇಲ್ಲಿವೆ.
“ಬಸವ ಹಿಂದೂ ಸಮಾವೇಶ, ಬಬಲೇಶ್ವರ” ನಡೆಸಿರುವುದು ಅನೇಕ ಸತ್ಯಗಳ ಅನಾವರಣ ಮಾಡಿದೆ !!
ಭಾಗ 1 :
ಹಿಂದೂ ಸಂಪ್ರದಾಯವಾದಿಗಳು ಸ್ವಾರ್ಥಕ್ಕಾಗಿ, ಹೊಟ್ಟೆ ಹೊರೆದುಕೊಳ್ಳುವದಕ್ಕಾಗಿ, ಹಣದ ವ್ಯಾಮೋಹಕ್ಕಾಗಿ, ಧರ್ಮದ ಹೆಸರಿನಲ್ಲಿ ವ್ಯಾಪಾರ ಮಾಡಿಕೊಳ್ಳಲು ಮಠ, ಮಂದಿರ, ಉತ್ಸವ, ಜಾತ್ರೆ, ಮಡಿಸ್ನಾನ, ಮಾಲೆ ಬಿಡುವುದು, ಸಮಾವೇಶಗಳನ್ನು ನಡೆಸುವುದು ಇತ್ಯಾದಿ ಕೆಲಸಗಳ ಮೂಲಕ ಮುಗ್ದ ಜನರನ್ನು ಶೋಷಣೆ ಮಾಡುತ್ತಿದ್ದಾರೆ.
ದ್ವೇಷಕ್ಕೆ, ಅಸೂಯೆಗೆ, ಹತಾಶೆ, ನಿರಾಶೆಯಿಂದ ಬಾಲತುಳಿಸಿಕೊಂಡ ಬೆಕ್ಕಿನಂತೆ, ಹೆಂಡ ಕುಡಿದ ಮಂಗನಂತೆ ಆಡುತ್ತಿದ್ದಾರೆ. ಇದನ್ನು ಮರೆಮಾಸಲು ಬಸವ ಹಿಂದೂ ಸಮಾವೇಶ ಮಾಡುತ್ತಿದ್ದಾರೆ.
ಮುಸಲ್ಮಾನರನ್ನು ವಿರೋಧಿಸುವ ದ್ಬೇಷ ಮಾತುಗಳನ್ನು ಹೇಳಿ ತಮ್ಮ ಹಿಂದುತ್ವದತ್ತ ಸೆಳೆಯುತ್ತಿದ್ದಾರೆ.
ಹಿಂದುತ್ವವಾದಿಗಳಿಗೆ, ಬಸವತತ್ವದಿಂದ ತಮ್ಮ ನಂಬಿಕೆಗಳಿಗೆ ಕೊಡಲಿಪೆಟ್ಟು ಬಿದ್ದೀತೆಂಬ ಆತಂಕ ಮತ್ತು ಭಯ ಅವರಲ್ಲಿ ಕಾಡುತ್ತಿದೆ.
ಬಸವಣ್ಣನವರನ್ನು ಮತ್ತು ಬಸವತತ್ವಗಳನ್ನು ಲಿಂಗಾಯತರಿಗಿಂತ, ಬಸವತತ್ವ ವಿರೋಧಿಗಳೇ ಹೆಚ್ಚು ತಿಳಿದಿದ್ದಾರೆ.
ಬಸವಣ್ಣನವರು ಜಗತ್ತಿನ ಎಲ್ಲರಿಗೂ ಬೇಕು ಎಂದು ಸಂಘಟಕರು ಸಾಬೀತು ಮಾಡುತ್ತಿದ್ದಾರೆ.
ಬಸವಣ್ಣ – ಶ್ರೀ ರಾಮ, ಶ್ರೀ ಕೃಷ್ಣ, ಶ್ರೀ ಆಂಜನೇಯ, ಸ್ವಾಮಿ ಅಯ್ಯಪ್ಪ, ತಿರುಪತಿ ತಿಮ್ಮಪ್ಪ ಇವರೆಲ್ಲರಿಗಿಂತಲೂ ಪಾವರಫುಲ್ ಎಂದು ತೋರಿಸಿಕೊಡುತ್ತಿದ್ದಾರೆ.
ಸಂಘಟಕರು ಬಸವಣ್ಣನವರನ್ನು ಗಟ್ಟಿಯಾಗಿ ನಂಬಿದ್ದಾರೆ. ಬಸವಣ್ಣನವರನ್ನು ನಂಬಿದವರು ಕೆಟ್ಟವರಿಲ್ಲ ಎಂದು ಜನರಿಗೆ ತೋರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಮುಂದೊಂದು ದಿನ ಹಿಂದುಗಳೆಲ್ಲಾ ಲಿಂಗಾಯತರಾಗುವ ಮುನ್ಸೂಚನೆ ಕೊಡುತ್ತಿದ್ದಾರೆ.
2050 ನೇ ಸಾಲಿನ ಹೊತ್ತಿಗೆ ಜಗತ್ತಿನಲ್ಲಿ ಶೇ. 70% ರಷ್ಟು ಜನ ಬಸವ ಧರ್ಮ ಸ್ವೀಕರಿಸುತ್ತಾರೆ ಎಂಬ ‘ಕ್ವಾಂಟಮ್ ಅಸೆಸ್ ಮೆಂಟ’ ನಿಜವಾಗುವ ಮುನ್ಸೂಚನೆಯೊಂದನ್ನು ಕೊಡುತ್ತಿದ್ದಾರೆ.
ಭಾಗ – 2 :
ಇವರೇನೇ ಮಾಡಲಿ ಮುಂದೊಂದು ದಿನ :
ಇವರಿಗೆ ಪೂಜಿಸಲಿಕ್ಕೆ ಬಸವಣ್ಣನವರೇ ಬೇಕಾಗುತ್ತಾರೆ ?
ಇವರಿಗೆ ತಮ್ಮ ದೊಡ್ಡಸ್ತಿಕೆ ತೋರಿಸಲು ಬಸವಣ್ಣನವರ ಹೆಸರೇ ಬೇಕಾಗುತ್ತದೆ !
ಇವರಿಗೆ ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಬಸವಣ್ಣನವರೇ ಬೇಕಾಗುತ್ತರೆ !
ಇವರಿಗೆ ತಮ್ಮ ಘನತೆ ಪ್ರದರ್ಶಿಸಲು ಬಸವಣ್ಣನವರ ಫೋಟೋ, ವಚನಗಳೇ ಬೇಕಾಗುತ್ತವೆ !
*ನಿತ್ಯಸತ್ಯವೆಂದರೆ –
ಬಸಣ್ಣನೆಂದರೆ ಸರ್ವ ಸಮಾನತೆ !
ಬಸವಣ್ಣ ಎಂದರೆ ಮಹಾ ಮಾನವತೆ !
ಬಸವಣ್ಣ ಎಂದರೆ ಅಮೋಘ ಚುಂಬಕ ಶಕ್ತಿ !
ಬಸವಣ್ಣ ಎಂಬುದು ಅಗಮ್ಯವಾದ ಅರಿವು !
ಬಸವಣ್ಣ ಎಂಬುದು ವಿಶ್ವ ಪರಮೋಚ್ಚ ಪ್ರಜ್ಞೆ !
ಬಸವಣ್ಣ ಎಂಬುದು ಅವಿನಾಶಿ ಪರಮಶಕ್ತಿ !
ಬಸವಣ್ಣ ಎಂದರೆ ವಿರೋಧವೆಂಬ ಕತ್ತಲೆಯನ್ನು ಓಡಿಸುವ ಬೆಳಕು !
ಬಸವಣ್ಣ ಎಂದರೆ ವಿರೋಧ ಮಾಡಿದವರ ಹೃದಯದಲ್ಲಿ ಗಟ್ಟಿಗೊಳ್ಳುವ ಅಸಾಧಾರಣ ಪ್ರಭಾವ !
ಭಾಗ – 3 :
ವಿರೋಧಿಗಳು ಇಷ್ಟೆಲ್ಲಾ ಮಾಡುತ್ತಿರುವಾಗ ಲಿಂಗಾಯತ ಆಗಿರುವವರು ಏನು ಮಾಡಬೇಕು :
1. ಲಿಂಗಾಯತರು ಮುಸಲ್ಮಾನರ ವಿರೋಧಿ ಭಾವನೆ ಮತ್ತು ವೈರತ್ವವನ್ನು ಮೆದುಳಿನಿಂದ ಕಿತ್ತು ಹಾಕಿಕೊಳ್ಳಲೇಬೇಕು.
2. ಬಸವಣ್ಣನವರು ಕೊಟ್ಟ ಲಿಂಗಾಯತ ತತ್ವದಂತೆ ನಾವೆಲ್ಲರೂ ಲಿಂಗಾಯತರಾಗಬೇಕು. ಲಿಂಗಾಯತರಾಗಿರಬೇಕಾದ ಅವಶ್ಯಕತೆ ಹಿಂದಿಗಿಂತಲೂ ಇಂದು ಅಗತ್ಯತೆ ಹೆಚ್ಚು ಇದೆ.
3. ಲಿಂಗಾಯತರಲ್ಲಿಯೇ ಮೇಲು ವರ್ಗದವರೆಂದು ಎನಿಸಿಕೊಳ್ಳುತ್ತಿರುವವರು ; ತಾವು ಹೆಚ್ಚಿನವರು ಎಂಬ ಮನಸ್ಥಿತಿ ಬದಲಾಯಿಸಿಕೊಂಡು, ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು.
4. ಲಿಂಗಾಯತರಲ್ಲಿಯೇ ಕೆಳ ವರ್ಗದವರೆಂದು ಎನಿಸಿಕೊಳ್ಳುತ್ತಿರುವವರು ; ವಚನಶಿಕ್ಷಣ, ಶರಣಸಂಸ್ಕೃತಿ ಪಡೆಯುವ ಮೂಲಕ ತಮ್ಮಲ್ಲಿರುವ ಕೀಳರಿಮೆಯನ್ನು ಬಿಡಬೇಕು. ಮೇಲು ವರ್ಗದವರಿಂದ ದೂರ ಉಳಿಯದೇ ಸೇರಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು.
5. ಜಾತಿಬೇಧ ಬಿಡಲೇಬೇಕು.
6. ಲಿಂಗಾಯತ ಎಲ್ಲ ಕಾಯಕವರ್ಗದವರು ಪರಸ್ಪರ ವಿವಾಹ ಸಂಬಂಧ ಬೆಳೆಸಲೇಬೇಕು.
7. ಲಿಂಗಾಯತರಲ್ಲಿಯೇ ಕೆಳವರ್ಗದವರಿಗೆ (ಕಾಯಕವರ್ಗದವರಿಗೆ) ವಚನಶಿಕ್ಷಣ, ನಿಜಾಚರಣೆಗಳ ಕಮ್ಮಟ, ಶರಣತತ್ವ ಅರಿವು ನಿರಂತರವಾಗಿ ಕೊಡಬೇಕು.
8. ಊರಿಗೊಬ್ಬರಂತೆ ವಚನಮೂರ್ತಿಗಳನ್ನು ತಯಾರಿಸಬೇಕು.
9. ಮಕ್ಕಳು ಮತ್ತು ಮಹಿಳೆಯರಿಗೆ ವಚನಶಿಕ್ಷಣ, ನಿಜಾಚರಣೆಗಳ ಕಮ್ಮಟ, ಶರಣತತ್ವ ಅರಿವು ನಿರಂತರವಾಗಿ ನಡೆಸಬೇಕು.
10. ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ವಚನಕಮ್ಮಟ ಪರೀಕ್ಷೆಗಳನ್ನು ನಡೆಸುವಂತಾಗಬೇಕು.
11. ಎಲ್ಲ ಬಸವಪರ ಸಂಘಟನೆಗಳು ಮನೆಮನೆಗೆ ಹೋಗಿ ಶರಣರ ಜೀವನ ಚರಿತ್ರೆ, ವಚನಗಳ ಕಿರುಪುಸ್ತಕಗಳನ್ನು ವಿತರಿಸಬೇಕು.
12. ಇವೆಲ್ಲ ಧರ್ಮ ಬೆಳೆಸುವ ಕಾರ್ಯಗಳಿಗೆ ಪ್ರತಿಯೊಂದು ತಾಲೂಕಿಗೆ ಒಬ್ಬ ಲಿಂಗಾಯತ ಮಠಾಧೀಶರನ್ನು ನೇಮಕ ಮಾಡಿ ; ಆ ತಾಲೂಕಿನಲ್ಲಿ ಯುದ್ಧೋಪಾದಿಯಲ್ಲಿ ಬಸವತತ್ವ ಪ್ರಸಾರ ನಡೆಯಬೇಕು.*
“ಭಾರತ ದೇಶ – ಜೈ ಬಸವೇಶ”
ಬಸವಣ್ಣ ಮರ್ತ್ಯಲೋಕಕ್ಕೆ ಬಂದು
ಮಹಾಮನೆಯ ಕಟ್ಟಿ,
ಭಕ್ತಿಜ್ಞಾನವೆಂಬ ಜ್ಯೋತಿಯನೆತ್ತಿ ತೋರಲು,
ಸುಜ್ಞಾನವೆಂಬ ಪ್ರಭೆ ಪಸರಿಸಿತಯ್ಯಾ ಜಗದೊಳಗೆ.
ಬೆಳಗಿನೊಳು ತಿಳಿದು ನೋಡಿ
ಹರೆದಿದ್ದ ಶಿವಗಣಂಗಳೆಲ್ಲ ನೆರೆದು ಕೂಡಿತಯ್ಯಾ.
ಕೂಡಲಚೆನ್ನಸಂಗಮದೇವಾ,
ನಿಮ್ಮ ಶರಣ ಬಸವಣ್ಣನ ಕೃಪೆಯಿಂದ
ಪ್ರಭುದೇವರ ನಿಜವನರಿದು ನಿಶ್ಚಿಂತರಾದರಯ್ಯಾ,
ಶಿವಗಣಂಗಳೆಲ್ಲರು.
ಶರಣು ಶರಣಾರ್ಥಿಗಳು