ಗದಗ
ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಇತರ ಬಸವಪರ ಸಂಘಟನೆಗಳಿಂದ ಹುಬ್ಬಳ್ಳಿ ತಾಲ್ಲೂಕು ಇನಾಂವೀರಾಪೂರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ ಅವರ ಮರ್ಯಾದೆಗೇಡು ಹತ್ಯೆ ಖಂಡಿಸಿ, ಪ್ರಾಯಶ್ಚಿತ್ತ ದಿನ ಕಾರ್ಯಕ್ರಮ ಮಹಾತ್ಮಗಾಂಧಿ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ನಡೆಯಲಿದೆ.
ಇಂತಹ ಮರ್ಯಾದೆಗೇಡು ಹತ್ಯೆಯನ್ನು ಮನುಷ್ಯರಾದವರು ಬಲವಾಗಿ ಖಂಡಿಸಬೇಕು. ಅಂದಾಗ ಮಾತ್ರ ಬಸವಣ್ಣನವರ ನಿಜ ಆದರ್ಶ ಪಾಲನೆ ಆಗುತ್ತದೆ. ಈ ರೀತಿಯ ಕಾರ್ಯಕ್ರಮದ ಮೂಲಕ ಲಿಂಗಾಯತ ಸಮುದಾಯ ನೈಜತತ್ವ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆಂದು ದಲಿತ ಸಂಘಟನೆಗಳ ನಾಯಕರಾದ ಶರೀಫ್ ಬಿಳೆಯಲಿ ಹಾಗೂ ಮುತ್ತು ಬಿಳೆಯಲಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಲಿಂಗಾಯತ, ಬಸವಪರ, ದಲಿತ, ಪ್ರಗತಿಪರ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಬಸವರಾಜ ಸೂಳಿಬಾವಿ ಮತ್ತಿತರರು ವಿನಂತಿಸಿಕೊಂಡಿದ್ದಾರೆ.


ಇದೊಂದು ಒಳ್ಳೆಯ ಪ್ರತಿಕ್ರಿಯೆ ಮನುಷ್ಯತ್ವ ಗುಣವುಳ್ಳ ಪ್ರತಿಯೊಬ್ಬರು ಇದನ್ನು ವಿರೋಧಿಸಬೇಕು
ಇನ್ನು ಬೆಳಗಿನಿಂದ ಸಂಜೆಯವರೆಗೆ ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂದು ಹೇಳುವ ಲಿಂಗಾಯತ ಧರ್ಮದ
ರಣಹೇಡಿ ಲಿಂಗಾಯತ ಕುಟಂಬದ ಇಂಥ ಹೇಯಕ್ರೃತ್ಯವನ್ನು ಉಗ್ರವಾಗಿ ಖಂಡಿಸಲೇಬೇಕು ಮತ್ತು ಲಿಂಗಾಯತ ಸಮಾಜ ಪಶ್ಚಾತ್ತಾಪ ಪಟ್ಟು ಇಂಥ ಹೇಯಕ್ರೃತ್ಯವನ್ನು ಮಾಡುವವರ ವಿರುದ್ಧ ಉಗ್ರ ಮಾಡಲೇಬೇಕು. ಮಾನವೀಯತೆ ಉಳಿದರೆ ಧರ್ಮ ಉಳಿಯುತ್ತೆ, ನಾವು ಉಳಿಯುತ್ತವೆ.