ಕನ್ನೇರಿ ಸ್ವಾಮಿಗೆ ತಿರುಗೇಟು ನೀಡಲು ಕೊಡೇಕಲ್ಲ ಬಸವೇಶ್ವರ ಮಠದ ಕರೆ

ಆರ್. ಮಾನಸಯ್ಯ
ಆರ್. ಮಾನಸಯ್ಯ

ಚಿಕ್ಕಹೆಸರೂರು:

ಬಬಲೇಶ್ವರದಲ್ಲಿ ನಡೆದ ಹಿಂದುತ್ವವಾದಿಗಳ ಸಮ್ಮೇಳನದಲ್ಲಿ ಮಾತನಾಡುತ್ತಾ, ಬಸವಾದಿ ಶರಣರನ್ನು ಹಿಂದೂಗಳೆಂದು, ವೇದಪ್ರಿಯರೆಂದು, ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಕರನ್ನು ಬುಡುಬುಡಿಕೆಗಳೆಂದು, ಲಿಂಗಾಯತವನ್ನು ಸಮರ್ಥಿಸುವವರು ಕಾವಿ ವಿಭೂತಿ ರುದ್ರಾಕ್ಷಿ ಹಾಗೂ ಮಠ ತೊರೆದು ಬಿಡಲಿ ಎಂದು ಕರೆ ನೀಡಿದ ಕಾಡಸಿದ್ದೇಶ್ವರ ಮಠದ ಕನೇರಿ ಸ್ವಾಮಿ ಹೇಳಿಕೆಯನ್ನು ಅಮರ ಜ್ಞಾನ ಪೀಠ, ಶ್ರೀ ಕೊಡೇಕಲ್ಲ ಬಸವೇಶ್ವರ ಶಾಖಾ ಮಠ ಚಿಕ್ಕಹೆಸರೂರು ತೀವ್ರವಾಗಿ ಖಂಡಿಸುತ್ತದೆ.

ಈ ಕುರಿತು ಪ್ರಕಟಣೆ ನೀಡಿರುವ ನೀಡಿರುವ ಅಮರಜ್ಞಾನ ಪೀಠದ ಅಧ್ಯಕ್ಷ ಆರ್. ಮಾನಸಯ್ಯ, ಕನ್ನೇರಿ ಸ್ವಾಮಿ ತನ್ನ ವಿಷಪೂರಿತ ಹೇಳಿಕೆಯ ಮೂಲಕ ಮಹಾನ್ ಶರಣ ಚಳುವಳಿಗೆ ಮತ್ತದರ ನಾಯಕ ಬಸವಣ್ಣನವರಿಗೆ ಹಾಗೂ ಸಮಸ್ತ ಲಿಂಗಾಯತರಿಗೆ ಮತ್ತು ಲಿಂಗಾಯತ ಮಠಗಳಿಗೆ ಅವಮಾನ ಮಾಡಿದ್ದಾನೆ. ಹಾಗಾಗಿ ರಾಜ್ಯ ಸರ್ಕಾರ, ಕೂಡಲೇ ಈ ಸ್ವಾಮೀಜಿ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದಿದ್ದಾರೆ.

ಅಲ್ಲದೆ, ಈ ಅವಮಾನವನ್ನು ಮತ್ತು ಶರಣ ನಿಂದನೆಯನ್ನು ಈ ನಾಡಿನ ಸಮಸ್ತ ಶರಣಸಂಕುಲ ಸಹಿಸಿದ್ದೇ ಆದಲ್ಲಿ, ಕನ್ನೇರಿ ಸ್ವಾಮಿ ಜೊತೆ ನಾವೂ ಬಸವದ್ರೋಹಿಗಳಾಗಿ ಹೋಗುತ್ತೇವೆ ಎಂದು ಭಾವಿಸಬೇಕಾಗಿದೆ.

ಕರ್ನಾಟಕದ ಸಾಂಸ್ಕೃತಿಕ ನಾಯಕ, ಮತ್ತವರ ಸಮಾನತ ಚಳುವಳಿಯ ರಕ್ಷಣೆಗಾಗಿ ಎಲ್ಲಾ ವಿಧದ ಲಿಂಗಾಯತರು (ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ )ನಾಡಿನ ಉದ್ದಗಲಕ್ಕು ಎದ್ದು ನಿಲ್ಲಬೇಕೆಂದು ಪ್ರಾರ್ಥಿಸುತ್ತೇವೆ.

ಜೊತೆಗೆ, ಶರಣರನ್ನು ಜಾತಿವಾದಿ, ವರ್ಣವಾದಿಗಳೆಂದು ಕೀಳುಮಟ್ಟಕ್ಕೆ ಇಳಿಸುವ, ವಿಷವನ್ನು ಅಮೃತ ಎಂದು ಕುಡಿಸುವ ಕನ್ನೇರಿ ಮತ್ತವರ ಶರಣ ನಿಂದನೆಯ ಹಿಂದೂ ಸಮ್ಮೇಳನಗಳನ್ನು ಬಸವಪ್ರಿಯರು ವ್ಯವಸ್ಥಿತವಾಗಿ ತಡೆಯಬೇಕೆಂದು ಮನವಿ ಮಾಡುತ್ತೇವೆ.

ಅಲ್ಲದೆ, ಸಾಧ್ಯವಾದರೆ ಈ ಕನ್ನೇರಿ ಸ್ವಾಮಿಯನ್ನು ಸಿಕ್ಕಸಿಕ್ಕಲ್ಲಿ ವಿರೋಧಿಸಿ ಆ ಮೂಲಕ ಆತನ ಮೂಲ ಲಿಂಗಾಯತ ಕಾಡಸಿದ್ದೇಶ್ವರ ಪರಂಪರೆಗೆ ಹಿಂದಿರುಗಿಸಲು ಸಹಾಯ ಮಾಡಬೇಕೆಂದು ಬಸವಭಕ್ತರಲ್ಲಿ ಬೇಡಿಕೊಳ್ಳುತ್ತೇವೆ.

ಕರ್ನಾಟಕದ ತತ್ವಜ್ಞಾನಿ ಅಮರ ಕಲ್ಯಾಣದ ಶರಣ ಹೇರೂರು ವಿರೂಪಾವಧೂತರು, ಬಸವಣ್ಣ ಯಾರೆಂದು, ಅವರ ತತ್ವಸಾರ ಏನೆಂದು ನುಡಿದ ಈ ಬುಡುಬುಡಿಕಿ ಕಿಡಿನುಡಿ ಮೂಲಕ ನಾವು ಬಸವದ್ರೋಹಿಗಳಿಗೆ ತಕ್ಕ ತಿರುಗೇಟು ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಕಲ್ಯಾಣದಲ್ಲಿ ಪುಟ್ಟಿದೆ ಮಗಳೇ
ಕಲ್ಲು ದೇವರನು ಕುಟ್ಟುತ್ತಾ ಬಂದೆ
ಎಲ್ಲಾ ಶಾಸ್ತ್ರವ ಕಟ್ಟಿಡು ತಂಗಿ
ಅಲ್ಲಮ ದೇವರ ದೇವಾ ನಾನು….

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
1 Comment
  • ಸಂಸ್ಕಾರ ,ಶಿಕ್ಷಣ, ಜ್ಞಾನ ,ವಿಜ್ಞಾನ ಇಲ್ಲದ ಈತನಿಗೆ ತಾನು ಹೇಳುತ್ತಿರುವುದೇ ಸತ್ಯ ಎನ್ನುವ ಹಾಗಿದೆ!
    ಈತನಲ್ಲಿ ಬದಲಾವಣೆ ಬರಬೇಕಾದರೆ ಕೋರ್ಟು ,ಕಾನೂನು ಪೋಲೀಸ್ ಇದರಿಂದ ತಕ್ಕ ಪಾಠ ಕಲಿಸಬೇಕು.
    ಈಗಾಗಲೇ ಕೋರ್ಟು ಒಮ್ಮೆ ಚೀಮಾರಿ ಹಾಕಿದರೂ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆಇದೆ.( ಈತನಿಗೆ ಮೀಸೆಯೂ ಇಲ್ಲ ಬಿಡಿ) ಆದ್ದರಿಂದ ಬಸವ ಭಕ್ತರು ಈತನಿಗೆ ನೇರವಾಗಿ ಮಾತನಾಡಿ ಆತನ ಅಜ್ಞಾನವನ್ನು ಧ್ಯಾನಕ್ಕೆ ಮರಳಿಸುವ …ಅಸಂಸ್ಕಾರವನ್ನು ಸಂಸ್ಕಾರ ಮಾಡುವ….. ಶಿಕ್ಷಣ ರಹಿತ ಇರುವ ಈತನಿಗೆ ಶಿಕ್ಷಣ ನೀಡುವ ಕೆಲಸ ಮಾಡಿದಾಗ ಬದಲಾವಣೆ ಆಗಲು ಸಾಧ್ಯ. ಇಲ್ಲದೆ ಹೋದರೆ ನಾಯಿ ಬೊಗಳಿದಂತೆ ಮನುಷ್ಯ ಮಾತನಾಡಿದಂತಲ್ಲ ನಾಯಿ ಬೊಗಳಿದಂತೆ ಕಂಡ ಕಂಡಲ್ಲಿ ಬೊಗಳುವನೇ ಈತ. ಆತ ಬೊಗಳಬೇಕಾದರೆ ಹಿಂದೆ ದುಷ್ಕರ್ಮಿಗಳ ಸಹಕಾರವೂ ಇದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಆತನಿಗೆ ಸಂಸ್ಕಾರ ನೀಡಲು ಒಂದು ಪಡೆಯೇ ಸಿದ್ಧವಾಗಬೇಕಾಗಿದೆ .! ಇಲ್ಲದೆ ಹೋದರೆ ಮುಂದೆ ಬಸವ ಭಕ್ತರು ತಲೆಯೆತ್ತಿ ನಿಲ್ಲುವುದು ಕಷ್ಟವಾಗಬಹುದೇನೋ ….
    ಜನತೆಗೆ ಸತ್ಯಕ್ಕಿಂತಲೂ ಸುಳ್ಳು ಬೇಗ ಅರ್ಥವಾಗುತ್ತದೆ ಹೀಗಾಗಿ ಸುಳ್ಳನ್ನೇ ನಂಬಿ ಅದೇ ಸತ್ಯವೆಂದು ತಿರುಗಾಡುತ್ತಾ ಹೋದಾಗ ಸಮಸ್ಯೆ ಉತ್ಪತ್ತಿಯಾಗುವುದು .
    ಆದ್ದರಿಂದ ತೀಕ್ಷಣಮತಿಗಳು ಜ್ಞಾನವಂತರು ಜಾಗೃತಿಯಿಂದ ಈ ಕೆಲಸವನ್ನು ಶೀಘ್ರವಾಗಿ ಕೈಗೊಂಡರೆ ಮಾತ್ರ. ಎರಡನೇ ಬಬಲೇಶ್ವರದಲ್ಲಿ ಮೂರನೇ ಬಬಲೇಶ್ವರದಲ್ಲಿ ಈ ಕಾರ್ಯಗಳು ನಡೆದಂತೆ ಮಾಡಲು ಸಾಧ್ಯವಾಗುವುದು .
    ಇಲ್ಲದೆ ಹೋದರೆ ಸುಳ್ಳು ಹೇಳಿ ಜಯಕಾರ ಹಾಕಿಸಿಕೊಂಡು ಬರುವವನೇ ಈತ. ಶರಣ ಸಂಸ್ಕೃತಿಯವರು ಕಾರ್ರೋನ್ಮುಖವಾಗಿರಿ ಎಂದು ಎಲ್ಲ ಶರಣ ತಂದೆ ತಾಯಿಗಳಿಗೆ ಭಕ್ತಿ ಪೂರ್ವಕ ವಿನಂತಿ

Leave a Reply

Your email address will not be published. Required fields are marked *

ಅಧ್ಯಕ್ಷರು, ಅಮರಜ್ಞಾನ ಪೀಠ, ಶ್ರೀ ಕೊಡೇಕಲ್ಲ ಬಸವೇಶ್ವರ ಶಾಖಾಮಠ, ಚಿಕ್ಕಹೆಸರೂರು