ಕೂಡಲಸಂಗಮ
ಬಸವಾದಿ ಶರಣರ ತತ್ವಗಳನ್ನು ವಿರೋಧಿಸುವವರನ್ನು ನಾವು ವಿರೋಧಿಸುತ್ತೆವೆ, ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಬೆಳಗಾವಿ ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ ೩೯ನೇ ಶರಣಮೇಳದ ಮಂಗಳವಾರ ರಾತ್ರಿ ನಡೆದ ಲಿಂಗಾಯತ-ಬಸವ ಧರ್ಮ ಮಹಾಜಗದ್ಗುರು ಪೀಠದ ೩೪ನೇ ಪೀಠಾರೋಹಣ ಸಮಾರಂಭದಲ್ಲಿ ಧರ್ಮ ಧ್ವಜಾರೋಹಣ ಮಾಡಿ ಮಾತನಾಡಿದರು.
ಶರಣರಿಗೆ, ವಚನ ಸಾಹಿತ್ಯಕ್ಕೆ ಧಕ್ಕೆ ಬಂದರೆ ರಾಜ್ಯದ ಎಲ್ಲ ಬಸವ ಭಕ್ತರು ಎದ್ದು ನಿಲ್ಲುವರು. ನಾವು ಹೊಸ ಧರ್ಮ ಕಟ್ಟಲು ಹೊರಟ್ಟಿಲ್ಲ, ೧೨ನೇ ಶತಮಾನದಲ್ಲಿ ಬಸವಣ್ಣನವರು ಕೊಟ್ಟ ಲಿಂಗಾಯತ ಧರ್ಮವನ್ನು ಇಂದು ಹೇಳುತ್ತಿದ್ದೆವೆ, ಪ್ರತಿಪಾದನೆ ಮಾಡುತ್ತಿದ್ದೆವೆ.
ಬಸವಾದಿ ಶರಣರು ಕಟ್ಟಿದ ಧರ್ಮವನ್ನು ಕೆಲವರು ಇರಲು ಬಿಡುತ್ತಿಲ್ಲ. ಶರಣರ ಪುಣ್ಯಭೂಮಿಯಲ್ಲಿ ಶರಣರ ವಿಚಾರ ಹೇಳಲು ಬಿಡುವುದಿಲ್ಲ ಎಂದು ವ್ಯತಿರಿಕವಾಗಿ ಹೇಳುತ್ತಿರುವುದು ನೋವಿನ ಸಂಗತಿ. ನಮ್ಮ ಮನೆಯಲ್ಲಿ ಬೆಳೆದ ನಾಯಿ ನಮಗೆ ಬೊಗಳಿದರೆ ಅದಕ್ಕೆ ತಿದ್ದಿಬುದ್ದಿ ಹೇಳಬೇಕು, ಇಲ್ಲ ಹೊರಹಾಕಬೇಕು ಎಂದರು.
