ಸರಿ ತಪ್ಪುಗಳ ಅರಿವು ಮೂಡಿಸಲು ಗುಣಮಟ್ಟದ ಶಿಕ್ಷಣ ಅಗತ್ಯ: ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿ:

ಇಲ್ಲಿನ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಈ ಜಗತ್ತಿನಲ್ಲಿರುವ ಬಹುತೇಕ ಜನ ಹೊನ್ನು, ಹೆಣ್ಣು, ಮಣ್ಣು ಇವುಗಳು ಮಾತ್ರ ಸಂಪತ್ತೆಂದು ಭಾವಿಸಿದ್ದಾರೆ. ಆದರೆ ನಿಜವಾದ ಸಂಪತ್ತು ಎಂದರೆ ಶಿಕ್ಷಣ. ನಮ್ಮ ಮಕ್ಕಳಿಗೆ ಅಂಕ ಗಳಿಕೆಯ ಶಿಕ್ಷಣ ಮುಖ್ಯವಾಗಬಾರದು.

ನೈತಿಕ ನೆಲೆಗಟ್ಟು, ಸಾಮಾಜಿಕ ಪ್ರಜ್ಞೆ ಕುಸಿಯದ ಹಾಗೆ ಶಿಕ್ಷಣ ಕೊಡಬೇಕು. ಇವತ್ತು ವಿದ್ಯಾವಂತರಿಗೇನು ಕೊರತೆಯಿಲ್ಲ. ಶಿಸ್ತು, ಸಂಯಮ, ನೈತಿಕ ನೆಲೆಗಟ್ಟು ಹಾಗೂ ಸಾಮಾಜಿಕ‌ ಪ್ರಜ್ಞೆಹೊಂದಿದವರ ಕೊರತೆ ಎದ್ದು ಕಾಣುತ್ತದೆ. ಅಂಥವರಿಂದಲೇ ಸಮಾಜಘಾತುಕ ಕೆಲಸಗಳು ನಿರಂತರವಾಗಿ ನಡೆಯುತ್ತಿರುವುದು.

ಇಂದು ನಮ್ಮ ವಿದ್ಯಾರ್ಥಿಗಳಿಗೆ ಕಲಿಯುವ ಹಸಿವಿರಬೇಕು. ಆ ಸಂದರ್ಭದಲ್ಲಿ ಕೆಲವೊಮ್ಮೆ ಸೋಲಬಹುದು. ಆ ಸೋಲನ್ನೆ ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳುವ ಛಲ ಮತ್ತು ಮನೋಬಲ ಇರಬೇಕು. ಅದಕ್ಕೆ ಬೇಕಾದ್ದು ಕ್ರಮಬದ್ಧ ಅಧ್ಯಯನ, ಶಿಸ್ತು, ಪರಿಶ್ರಮ ಮತ್ತು ವಿನಯ ಇವುಗಳನ್ನು ಆಭರಣವನ್ನಾಗಿ ಮಾಡಿಕೊಳ್ಳಬೇಕು. ಆ ಆಭರಣವೇ ಜ್ಞಾನ. ಜ್ಞಾನಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ.

ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆ ಇದೆ. ಅದಕ್ಕೆ ಪೂರಕವಾಗ ವೇಧಿಕೆಯನ್ನು ಪಾಲಕರು ಕಲ್ಪಿಸಬೇಕು. ಆಗ ಮಕ್ಕಳು ದುರ್ಭಾವನೆಯನ್ನು ಬಿಟ್ಟು ಸದ್ಬಾವನೆಯಲ್ಲಿ ಬೆಳೆಯುತ್ತಾರೆ. ಶಿಕ್ಷಕರಿಂದ ಮಕ್ಕಳಲ್ಲಿ ಸಾಧನೆಯ ದಾರಿಯನ್ನು ಸಾಧಿಸುವ ಕಲೆ ಬೆಳೆಸಬೇಕು ಎಂದು ಹೇಳಿದರು.

“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎಂಬುದನ್ನು ಪೋಷಕರು ಮರಿಯಬಾರದು.  ಮಗು ಸುಸಂಸ್ಕೃತನಾಗಿ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗುವರು.

ಇತ್ತೀಚಿನ ತಂತ್ರಜ್ಞಾನವನ್ನು ಬಳಸಿ ಪೌಷ್ಟಿಕ ಆಹಾರವನ್ನು (ಉತ್ತಮ ವಿಚಾರಗಳು) ನಮ್ಮ ಮಕ್ಕಳಿಗೆ ನೀಡಿದರೆ ಅದನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುವರು. ಶಿಕ್ಷಕರು ಬುದ್ದಿವಂತರನ್ನು ಬುದ್ಧಿವಂತನನ್ನಾಗಿ ಮಾಡುವುದು ಮುಖ್ಯವಲ್ಲ. ಓದಿನಲ್ಲಿ ಹಿಂದುಳಿದವನನ್ನು ಬುದ್ಧಿವಂತನನ್ನಾಗಿ ಮಾಡುವುದು ಅವರ ಉದ್ದೇಶವಾಗಬೇಕು. ಈ ನೆಲೆಯಲ್ಲಿ ಶಿಕ್ಷಕರು ಮುಗುವಿನ ಕಡೆ ಹೆಚ್ಚು ಆಸಕ್ತಿ ತೋರಿಸಬೇಕು. ಸಾಣೇಹಳ್ಳಿಯಲ್ಲಿ ಓದುತ್ತಿರುವ ಮಕ್ಕಳಿಗೆ ಸಾಂಸ್ಕೃತಿಕ ಪ್ರಜ್ಞೆಗೆ ಕೊರತೆಯೇನಿಲ್ಲ. ಅದರ ಜೊತೆಗೆ ನಿರಂತರ ಅಧ್ಯಯನ ಶೀಲನಾಗಬೇಕು ಎಂದರು.

ಸಮಾರೋಪದ ನುಡಿಗಳನ್ನಾಡಿದ ಚಿತ್ರದುರ್ಗದ ಉಪನಿರ್ದೇಶಕ ಕಛೇರಿಯ ವಿಷಯ ಪರಿವೀಕ್ಷಕರಾದ ಶ್ರೀ ರಂಗನಾಯ್ಕ್ ಮಾತನಾಡಿ; ಆಧ್ಯಾತ್ಮಿಕ, ಸಾಂಸ್ಕೃತಿಕ, ಭಾವೈಕ್ಯತೆಯ ಪುಣ್ಯ ಭೂಮಿ ಸಾಣೇಹಳ್ಳಿ. ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಸಮಾಜ ಸರಿದಾರಿಗೆ ಕೊಡೊಯ್ಯುವ ಕೆಲಸವನ್ನು ಪಂಡಿತಾರಾಧ್ಯ ಶ್ರೀಗಳು ಮಾಡುತ್ತಿದ್ದಾರೆ.

ಸಾಣೇಹಳ್ಳಿಯಲ್ಲಿ ಭಕ್ತಿಸಾಗರ ಇದೆ, ಇಲ್ಲಿ ಭಕ್ತರ ಸಾಗರವೇ ಹರಿದು ಬರುತ್ತಿದೆ. ಅದರ ಮೂಲಕ ಸ್ವಾಮೀಜಿಯವರು ಭಕ್ತರನ್ನು ಭವ ಸಾಗರದಾಚೆಗೆ ಕೊಂಡೊಯ್ಯುತ್ತಿದ್ದಾರೆ. ಇಲ್ಲಿ ನಿರಂತರವಾಗಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ.

ವಿದ್ಯಾರ್ಥಿ ಸಂಘ ಮಕ್ಕಳಲ್ಲಿ ಶಿಸ್ತು ಮೂಡಿಸಲು ಸಹಾಯವಾಗುತ್ತದೆ. ಮಗು ಸ್ವಯಂ ಶಿಸ್ತನ್ನು ರೂಢಿಸಿಕೊಳ್ಳಬೇಕು. ಬಲವಂತವಾಗಿ ಮಕ್ಕಳ ಮೇಲೆ ಶಿಸ್ತನ್ನು ಹೇರಬಾರದು. ಪ್ರೀತಿ, ವಿಶ್ವಾಸದಿಂದ ಅವರನ್ನು ಶಿಸ್ತಿಗೆ ಒಳಪಡಿಸಬೇಕು. ಜೀವನದ ಎಲ್ಲ ಕನಸುಗಳನ್ನು ಈಡೇಸಬೇಕಾದರೆ ಪುಸ್ತಕ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಪುಸ್ತಕ ಪ್ರೇಮವನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು.

ಹೊಸದುರ್ಗ ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕರಾದ ಜಿ.ಎಂ. ಆನಂದ ಮಾತನಾಡಿ ನಮ್ಮ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಬೆಳೆಯುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾವ ರೀತಿ ಬೆಳೆಯುತ್ತಿದ್ದಾರೆ ಎಂಬುದನ್ನು ಪೋಷಕರು ಗಮನಿಸಬೇಕು. ಒಂದು ಮಗು ಒಂದು ಕುಟುಂಬಕ್ಕೆ ದಾರಿದೀಪವಾಗಬೇಕು. ಮುಂದೆ ಸಮಾಜಕ್ಕೆ ದಾರಿದೀಪವಾಗಿ ಜನ್ಮವೆತ್ತ ತಂದೆತಾಯಿಗಳಿಗೆ ಗೌರವ ತರುವಂತಿರಬೇಕು. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕೆ ಹೊರತು ಯಾರು ಇದಕ್ಕೆ ಜವಾಬ್ದಾರರಲ್ಲ ಎಂದರು.

ಹೊಸದುರ್ಗ ತಾಲ್ಲೂಕು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಜಿ ಕೆ ಶ್ರೀನಿವಾಸ ಮಾತನಾಡಿ ಸಾಣೇಹಳ್ಳಿ ಮಠ ಸಂಸ್ಕಾರಯುತ ಶಿಕ್ಷಣ ಕೊಡುವ ಸುಕ್ಷೇತ್ರ. ಶಿಕ್ಷಣ ಎಂದರೆ ಅಂಕಗಳಿಕೆಯಾಗಬಾರದು. ಮೌಲ್ಯಯುತವಾದ ಸಂಸ್ಕಾರ ಪಡೆಯುಂಥ ಶಿಕ್ಷಣ ಆಗಬೇಕು. ಇಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಶಿಕ್ಷಣ ದೊರೆಯುತ್ತದೆ. ಇತ್ತೀಚಿಗೆ ಮಕ್ಕಳಲ್ಲಿ ಮೌಲ್ಯಗಳ ಕೊರತೆ ಎದ್ದುಕಾಣುತ್ತದೆ. ನಮ್ಮ ಮಕ್ಕಳು ಮೊಬೈಲ್‌ ಗೀಳಿನಿಂದ ಹೊರಬಂದು ಸಂಸ್ಕಾರ ಶಿಕ್ಷಣ ಕೊಡಬೇಕೆಂದರು.

ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸಿ.ಕೆ. ಸ್ವಾಮಿ ಮಾತನಾಡಿ ಬಹುಶಃ ಇದೊಂದು ಅಭೂತಪೂರ್ವವಾದ ಸಮಾರಂಭ. ನಮ್ಮ ಸರಕಾರ ಕೋಟ್ಯಾಂತರ ರೂಪಾಯಿ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ ಅದು ಸದುಪಯೋಗವಾಗಬೇಕು. ಶಿಕ್ಷಣದಲ್ಲಿ ಬಹಳಷ್ಟು ಬದಲಾವಣೆ ಆಗ್ತಾ ಇದೆ, ಮಕ್ಕಳ ಬೆಳವಣಿಗೆಗೆ ಪೋಷಕರ ಪಾತ್ರ ಬಹಷ್ಟಿದೆ. ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ನಡೆಯುತ್ತಿವೆ. ಈಗಿನ ಶಿಕ್ಷಕರು ಪ್ರತಿಭಾನ್ವಿತರಾದರೆ ಮಾತ್ರ ಮಕ್ಕಳಿಗೆ ಪಾಠ ಮಾಡಲು ಸಾಧ್ಯ. ಇಲ್ಲಿ ಕೊಡುವ ಶಿಕ್ಷಣ ಯಾವ ಶಾಲೆಗಳಲ್ಲೂ ದೊರೆಯಲು ಸಾಧ್ಯವಿಲ್ಲ ಎಂದರು.

ಹೊಸದುರ್ಗ ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ್ ಮಾತನಾಡಿ ಇಂತಹ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಧನ್ಯರು. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ಜಗತ್ತೇ ಮೆಚ್ಚಿಕೊಳ್ಳಬೇಕಾದದ್ದು. ಸಾಣೇಹಳ್ಳಿ ಮಠ ಜಾತ್ಯತೀತ ಮಠ, ಇಲ್ಲಿ ಎಲ್ಲ ಜಾತಿ, ಧರ್ಮ, ಜನಾಂಗದವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ ಸಿ ಚಂದ್ರಪ್ಪ ಮಾತನಾಡಿ; ಇಲ್ಲಿ ನಡೆಯುವಂಥ ನಿರಂತರವಾಗಿ ಕಾರ್ಯಕ್ರಮಗಳು ತಮ್ಮ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿವೆ. ನಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಶಿಸ್ತು, ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬೇಕೆಂದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ್ ಹೆಚ್ ಎಸ್ ಹಾಗೂ ಶರಣ ವಚನಗೀತೆಗಳನ್ನು ಹಾಡಿದರು. ಎಂ ಸುಧಾ ಸ್ವಾಗತಿಸಿದರೆ ಸೋಮಶೇಖರ್ ಸಿ ಆರ್ ನಿರೂಪಿಸಿದರು. ವಾರ್ಷಿಕೋತ್ಸವದ ವರದಿಯನ್ನು ಕಾವ್ಯ ಹೆಚ್ ಆರ್ ವಾಚಿಸಿದರು. ಉಭಯ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವೇದಿಕೆಯ ಮೇಲೆ ಹೊಸದುರ್ಗ ತಾಲ್ಲೂಕು ಬಿಆರ್‌ಪಿ ರುದ್ರೇಶ್ ಟಿ ಎಸ್ ಹಾಗೂ ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *