ರಾಯಬಾಗ:
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಜಯಶ್ರೀ ಕೋರಿಶೆಟ್ಟಿ ಅವರನ್ನು ಬೆಳಗಾವಿ ಜಿಲ್ಲಾ ತೃತೀಯ ಕದಳಿ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ ಎಂದು ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆಯುವ ಸಮ್ಮೇಳನದ ಸರ್ವಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ಡಾ. ವಿಜಯಶ್ರೀ ಕೋರಿಶೆಟ್ಟಿ ಅವರನ್ನು ಈಚೆಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಹೋಗಿ ಆಮಂತ್ರಿಸಿ ಆಹ್ವಾನಿಸಲಾಯಿತು ಎಂದು ತಿಳಿಸಿದರು.
ಆ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಮಲ್ಲಿಕಾರ್ಜುನ ರೂಡಗಿ, ಮ.ಗು. ಯಾದವಾಡ, ಡಾ. ಉಷಾದೇವಿ ಹಿರೇಮಠ, ಈರಣ್ಣ ತೊಂಡಿಕಟ್ಟಿ, ಮಂಗಲಾ ಅಕ್ಕಿ, ಪಾರ್ವತಿ ಕುಲಕರ್ಣಿ, ದಾನಮ್ಮ ಈಟಿ, ಸಂತೋಷ ಕೊಳವಿ, ಸಾವಿತ್ರಿ ಹೊತಗಿಮಠ, ಭಾರತಿ ಕಟ್ಟಿ, ಡಾ. ಚಂದ್ರಶೇಖರ ಗುಡಸಿ ಉಪಸ್ಥಿತರಿದ್ದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಜರುಗುತ್ತಿರುವ ಶ್ರೀ ಸಿದ್ದೇಶ್ವರ ಮಹಾಶಿವಯೋಗಿಯವರ 50ನೇ ಜಾತ್ರಾ ಮಹೋತ್ಸವ ಹಾಗೂ ವಚನ ರಥೋತ್ಸವ ಕಾರ್ಯಕ್ರಮದಲ್ಲಿ ಲಿಂಗಾಯತ ಮಹಿಳಾ ಸಮಾವೇಶ ಹಾಗೂ ಸಾವಿರ ಕಂಠ ವಚನ ಪಾರಾಯಣ ಕಾರ್ಯಕ್ರಮ ನಡೆಯಲಿದೆ.
