ಇವರೆಲ್ಲಾ ಸುತ್ತೂರು ಗ್ರಾಮದಲ್ಲಿರುವ ಶ್ರೀಮಠದ ವಸತಿ ಶಾಲೆಯ ವಿದ್ಯಾರ್ಥಿನಿಯರು.
ಸುತ್ತೂರು
ಈಶಾನ್ಯ ಭಾರತದ ಮಕ್ಕಳು ವಚನ ಹಾಡುವ ಒಂದು ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಆರು ಮಕ್ಕಳು ಬಸವಣ್ಣನವರ ‘ಎತ್ತೆತ್ತ ನೋಡಿದರು ನೀನೆ ದೇವಾ’ ವಚನವನ್ನು ತನ್ಮಯರಾಗಿ ಹಾಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ ಒಂದು ಮಗುವಿನ ಹಣೆಯ ಮೇಲೆ ವಿಭೂತಿಯೂ ಕಂಗೊಳಿಸುತ್ತಿದೆ.
ಇವರೆಲ್ಲಾ ಸುತ್ತೂರು ಗ್ರಾಮದಲ್ಲಿರುವ ಶ್ರೀಮಠದ ವಸತಿ ಶಾಲೆಯ ವಿದ್ಯಾರ್ಥಿನಿಯರು.
ಕಳೆದ ಭಾನುವಾರ ನಂಜನಗೂಡು ತಾಲೂಕು ವಕೀಲರ ಸಂಘ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಈ ವಚನವನ್ನು ಹಾಡಲಾಯಿತು ಎಂದು ಶಾಲೆಯ ಸಂಯೋಜನಾಧಿಕಾರಿ ತ್ರಿಪುರಾಂತಕ ಜಿ ಎಲ್ ತಿಳಿಸಿದರು. ನ್ಯಾಯಮೂರ್ತಿಗಳು ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸುತ್ತೂರು ವಸತಿ ಶಾಲೆಯಲ್ಲಿ ಓದುವ 4000 ಮಕ್ಕಳು ಬೆಳಗ್ಗೆ ಮತ್ತು ಸಂಜೆ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಾರ್ಥನೆಯಲ್ಲಿ ವಚನಗಳೇ ಹೆಚ್ಚಿರುತ್ತವೆ, ಎಂದು ತ್ರಿಪುರಾಂತಕ ಹೇಳಿದರು.
ಶಾಲೆಯಲ್ಲಿ ಸಂಗೀತ ಕಲಿಸಲು ಐದು ಶಿಕ್ಷಕರಿದ್ದಾರೆ. ಅವರಿಂದ ಈ ಮಕ್ಕಳು ವಚನ ಹಾಡಲು ಕಲಿತಿದ್ದಾರೆ.

ಸುತ್ತೂರಿನ ಶಾಲೆ ಮಕ್ಕಳಿಗೂ, ಸಂಗೀತ ಶಿಕ್ಷಕರಿಗೂ, ತುಂಬು ಹೃದಯದ ಧನ್ಯವಾದಗಳು. ಮಕ್ಕಳು ವಚನದ ಮೂಲಕವೇ ಶಿವ, ಶಕ್ತಿಯರ ಸಂತಾನದೆಂದು ಅರಿತು, ಸೂಖಿಯಾಗಲಿ. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.